Bengaluru Bulls: ಸೆಕೆಂಡ್ ಹಾಫ್‌ನಲ್ಲಿ ಅಬ್ಬರಿಸಿದ ಗೂಳಿಗಳು: ಬೆಂಗಳೂರು ಬುಲ್ಸ್‌ಗೆ ರೋಚಕ ಗೆಲುವು
ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಪಾಟ್ನಾ ಪೈರೇಟ್ಸ್ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಮೊದಲಾರ್ಧ ಭಾರಿ ಅಂತರದಲ್ಲಿ ಹಿಂದೆ ಇದ್ದ ಬೆಂಗಳೂರು ಗೂಳಿಗಳು ದ್ವಿತೀಯಾರ್ಧದಲ್ಲಿ ತಿರುಗಿಬಿದ್ದರು.
ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ 12-20 ಅಂಕಗಳಲ್ಲಿ ಹಿನ್ನಡೆಯಲ್ಲಿದ್ದ ಬೆಂಗಳೂರು ಗೂಳಿಗಳು ಕೊನೆಯ ಕ್ಷಣದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಪಾಟ್ನಾ ಪೈರೇಟ್ಸ್ ವಿರುದ್ಧ 35-33 ಅಂಕಗಳ ಗೆಲುವು ಸಾಧಿಸಿತು.

ಮುಂಬೈನ ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲೇ ರೋಚಕ ಗೆಲುವನ್ನು ಪಡೆದುಕೊಂಡಿತು.
ಆರಂಭದಲ್ಲಿ ಅಬ್ಬರಿಸಿದ ಪಾಟ್ನಾ
ಪಂದ್ಯ ಆರಂಭವಾಗುತ್ತಿದ್ದ ಪಾಟ್ನಾ ಪೈರೇಟ್ಸ್‌ಗಳು ಅಬ್ಬರಿಸಿದರು. 9-5 ಅಂಕಗಳ ಮುನ್ನಡೆ ಪಡೆದುಕೊಂಡ ಪಾಟ್ನಾ ಪೈರೇಟ್ಸ್ ಕೆಲವೇ ಕ್ಷಣಗಳಲ್ಲಿ ಮುನ್ನಡೆಯನ್ನು 16-8 ಅಂಕಗಳಿಗೆ ಹೆಚ್ಚಿಸಿಕೊಂಡಿತು. ಮೊದಲಾರ್ಧ ಮುಕ್ತಾಯದ ವೇಳೆಗೆ 20-12 ಮುನ್ನಡೆ ಪಡೆಯುವ ಮೂಲಕ ದೊಡ್ಡ ಗೆಲುವು ಪಡೆಯುವ ಲೆಕ್ಕಾಚಾರದಲ್ಲಿತ್ತು ಪಾಟ್ನಾ ಪೈರೇಟ್ಸ್.
ಆದರೆ ದ್ವಿತೀಯಾರ್ಧದಲ್ಲಿ ಬೆಂಗಳೂರು ಬುಲ್ಸ್ ಅಮೋಘ ಪ್ರದರ್ಶನ ನೀಡಿತು. ಕೊನೆಯ ಐದು ನಿಮಿಷದಲ್ಲಿ ತಿರುಗಿದ್ದ ಗೂಳಿಗಳು ಸತತವಾಗಿ ಪಾಯಿಂಟ್ ಪಡೆದುಕೊಳ್ಳುವ ಮೂಲಕ ಅಂಕಗಳ ಅಂತರವನ್ನು ಕಡಿಮೆ ಮಾಡಿಕೊಂಡರು. ಕೊನೆಯ ನಿಮಿಷದಲ್ಲಿ 35-33 ಅಂಕಗಳಿಂದ ಪಂದ್ಯವನ್ನು ಗೆದ್ದು ಬೀಗಿತು.
ಸಚಿನ್ ನರ್ವಾಲ್ ಮಿಂಚು
ಆಲ್‌ರೌಂಡರ್ ಸಚಿನ್ ನರ್ವಾಲ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 9 ಅಂಕಗಳನ್ನು ಗಳಿಸಿದರು. ಡಿಫೆಂಡರ್ ಸುರ್ಜೀತ್ ಸಿಂಗ್ 8 ಅಂಕ ಪಡೆಯುವ ಮೂಲಕ್ ಬುಲ್ಸ್‌ಗೆ ಭದ್ರ ಕೋಟೆ ಕಟ್ಟಿದರು. ಉಳಿದಂತೆ ವಿಖಾಶ್ ಖಂಡೋಲಾ 2, ಪ್ರತೀಕ್ 3, ರಣ್ ಸಿಂಗ್ 4, ಸುಶಿಲ್ 4 ಅಂಕ ಪಡೆದರು.
ಸುರ್ಜೀತ್ ಸಿಂಗ್ ಡಿಫೆಂಡಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಕೊನೆಯ ಕ್ಷಣದಲ್ಲಿ ಬೆಂಗಳೂರು ಬುಲ್ಸ್‌ಗೆ ಗೆಲುವು ತಂದುಕೊಟ್ಟರು.












Click it and Unblock the Notifications