ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ; ಬಿಸಿಸಿಐ ಘೋಷಣೆ

ನವದೆಹಲಿ, ಅ. 27: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರದಂದು ಐತಿಹಾಸಿಕ ನಿರ್ಧಾರ ಘೋಷಿಸಿದ್ದು, ಪುರುಷ ಮತ್ತು ಮಹಿಳಾ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಮಾನ ವೇತನವನ್ನು ಘೋಷಿಸಿದೆ.

ಈ ನಿರ್ಧಾರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟ್ಪರ್‌ನಲ್ಲಿ ಪ್ರಕಟಿಸಿದ್ದಾರೆ.

ಮ್ಯಾಚ್ ಫೀ ವಿಷಯದಲ್ಲಿ ಮಹಿಳಾ ಕ್ರಿಕೆಟಿಗರನ್ನು ಪುರುಷರ ಕ್ರಿಕೆಟಿಗರಿಗೆ ಸರಿಸಮನಾಗಿ ತರುವ ನಿರ್ಧಾರವು ಹಲವು ರೀತಿಯಲ್ಲಿ ಕ್ರಾಂತಿಕಾರಿ ನಿರ್ಧಾರವಾಗಿದೆ. ಒಪ್ಪಂದ ಮಾಡಿಕೊಂಡಿರುವ ಹಿರಿಯ ಮಹಿಳಾ ಕ್ರಿಕೆಟಿಗರು, ಪುರುಷ ಕ್ರಿಕೆಟಿಗರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

"ತಾರತಮ್ಯವನ್ನು ನಿವಾರಿಸಲು BCCI ಯ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ನಾವು ನಮ್ಮ ಒಪ್ಪಂದದ ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ಭಾರತೀಯ ಕ್ರಿಕೆಟ್‌ ಲಿಂಗ ಸಮಾನತೆಯ ಹೊಸ ಯುಗಕ್ಕೆ ತೆರೆದುಕೊಳ್ಳುತ್ತಿರುವಾಗ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ" ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.

BCCIs Big Announcement: Equal Pay For Men, Women Cricketers

"ಬಿಸಿಸಿಐ ಮಹಿಳಾ ಕ್ರಿಕೆಟಿಗರಿಗೆ ಅವರ ಪುರುಷ ಕೌಂಟರ್ಪಾರ್ಟ್ಸ್‌ಗೆ ಸಮಾನವಾದ ಪಂದ್ಯ ಶುಲ್ಕವನ್ನು ನೀಡಲಾಗುತ್ತದೆ. ಟೆಸ್ಟ್ (INR 15 ಲಕ್ಷಗಳು), ODI (INR 6 ಲಕ್ಷಗಳು), T20I (INR 3 ಲಕ್ಷಗಳು). ಸಮಾನ ವೇತನ ನಮ್ಮ ಮಹಿಳಾ ಕ್ರಿಕೆಟಿಗರಿಗೆ ನನ್ನ ಬದ್ಧತೆಯಾಗಿದೆ. ಅವರ ಬೆಂಬಲಕ್ಕಾಗಿ ನಾನು ಅಪೆಕ್ಸ್ ಕೌನ್ಸಿಲ್‌ಗೆ ಧನ್ಯವಾದ ಹೇಳುತ್ತೇನೆ. ಜೈ ಹಿಂದ್" ಎಂದು ಜಯ್ ಶಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

2017ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ತಂಡವು ರನ್ನರ್ ಅಪ್ ಸ್ಥಾನ ಗಳಿಸಿದಾಗಿನಿಂದ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿನ ಆಸಕ್ತಿ ಹೆಚ್ಚಾಗಿದೆ. ಮಹಿಳಾ ತಂಡವು 2020 ರಲ್ಲಿ ಟಿ20 ವಿಶ್ವಕಪ್‌ನ ಫೈನಲ್‌ಗೆ ತಲುಪಿದೆ. ಈ ವರ್ಷದ ಆರಂಭದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದೆ.

ಈ ವರ್ಷದ ಆರಂಭದಲ್ಲಿ, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿತು. ಮಹಿಳಾ ರಾಷ್ಟ್ರೀಯ ತಂಡ ಮತ್ತು ದೇಶೀಯ ಮಹಿಳಾ ಆಟಗಾರರು ಪುರುಷರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+