BCCI: ಎರಡು ಟಿ20 ತಂಡಗಳ ರಚನೆಗೆ ಬಿಸಿಸಿಐ ಮಾಸ್ಟರ್ ಪ್ಲ್ಯಾನ್; ನಾಯಕತ್ವ ಯಾರಿಗೆ?
BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೃಷ್ಟಿಯಿಂದ ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಐಪಿಎಲ್ 2026ರಲ್ಲಿ ಮಿಂಚುತ್ತಿರುವ ಪ್ರತಿಭೆಗಳಿಗೆ ಮನ್ನಣೆ ನೀಡಲು ಮತ್ತು ಅಂತಾರಾಷ್ಟ್ರೀಯ ವೇಳಾಪಟ್ಟಿಯ ಒತ್ತಡವನ್ನು ನಿಭಾಯಿಸಲು ಬಿಸಿಸಿಐ ಹೊಸ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದೆ.
ಐಪಿಎಲ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಗುರುತಿಸಿ, ಸುಮಾರು 30 ರಿಂದ 35 ಆಟಗಾರರ ಒಂದು ಬೃಹತ್ ಗುಂಪನ್ನು ಸಿದ್ಧಪಡಿಸಲು ಮಂಡಳಿ ನಿರ್ಧರಿಸಿದೆ. ಮುಂಬರುವ ಸರಣಿಗಳಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಎರಡನೇ ತಂಡವನ್ನು ಮುನ್ನಡೆಸಲು ಶ್ರೇಯಸ್ ಅಯ್ಯರ್ ಅವರ ಹೆಸರನ್ನು ನಾಯಕತ್ವಕ್ಕೆ ಪರಿಗಣಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.

ಮಾಸ್ಟರ್ ಪ್ಲ್ಯಾನ್ ಮಾಡಿದ ಬಿಸಿಸಿಐ
ಈ ವರ್ಷದ ಅಂತ್ಯದಲ್ಲಿ ಭಾರತ ತಂಡವು ಏಕಕಾಲದಲ್ಲಿ ಎರಡು ವಿಭಿನ್ನ ಸರಣಿಗಳಲ್ಲಿ ಪಾಲ್ಗೊಳ್ಳಬೇಕಿದೆ. ಉದಾಹರಣೆಗೆ, ಏಷ್ಯನ್ ಗೇಮ್ಸ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗಳು ಒಂದೇ ಸಮಯದಲ್ಲಿ ನಡೆಯಲಿವೆ. ಈ ಸವಾಲನ್ನು ಎದುರಿಸಲು ಎರಡು ಸಮಬಲದ ತಂಡಗಳನ್ನು ಸಿದ್ಧಪಡಿಸುವುದು ಬಿಸಿಸಿಐ ಪ್ಲ್ಯಾನ್ ಆಗಿದೆ.
ಐಪಿಎಲ್ ಸ್ಟಾರ್‌ಗಳಿಗೆ ಆದ್ಯತೆ ಸಾಧ್ಯತೆ
ಪ್ರಸ್ತುತ ಐಪಿಎಲ್ ಸೀಸನ್‌ನಲ್ಲಿ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದಿರುವ ಮಯಾಂಕ್ ಯಾದವ್, ವೈಭವ್ ಸೂರ್ಯವಂಶಿ ಅವರಂತಹ ಯುವ ಆಟಗಾರರಿಗೆ ಈ 35 ಮಂದಿಯ ಪಟ್ಟಿಯಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಪಂದ್ಯ ನಡೆದರೂ, ಭಾರತವು ಸದಾ ಒಂದು ರೆಡಿ ತಂಡವನ್ನು ಹೊಂದಿರಬೇಕು ಎಂಬುದು ಆಯ್ಕೆಗಾರರು ಮತ್ತು ಮಂಡಳಿಯ ಉದ್ದೇಶವಾಗಿದೆ.












Click it and Unblock the Notifications