ಟಿ-20 ವಿಶ್ವಕಪ್ 2026 ಟೂರ್ನಿಯಿಂದ ಹಿಂದೆ ಸರಿದ ಬಾಂಗ್ಲಾದೇಶ
T-20 World Cup 2026: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತನ್ನ 2026 ಟಿ-20 ವಿಶ್ವಕಪ್ ಗ್ರೂಪ್ ಪಂದ್ಯಗಳನ್ನು ಭಾರತದ ಹೊರಗೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿತ್ತು. ಆದರೆ, ಈ ಮನವಿಯನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದ ಒಂದು ದಿನದ ಬಳಿಕ ಭದ್ರತಾ ಕಾಳಜಿಯನ್ನ ಉಲ್ಲೇಖಿಸಿ ಬಾಂಗ್ಲಾದೇಶ ಟೂರ್ನಿಯಿಂದ ಹಿಂದೆ ಸರಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಐಪಿಎಲ್ ತಂಡ ಕೆಕೆಆರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಸಿಸಿಐ ಸೂಚನೆ ಮೇರೆಗೆ ಕೈಬಿಟ್ಟಿತು. ಬಳಿಕ ಇದರ ಬೆನ್ನಲ್ಲೇ ಬಾಂಗ್ಲಾದಲ್ಲಿ "ಅನಿರ್ದಿಷ್ಟಾವಧಿವರೆಗೆ ಯಾವುದೇ ಐಪಿಎಲ್ ಪಂದ್ಯಗಳನ್ನು ನೇರಪ್ರಸಾರ ಮಾಡದಂತೆ ಅಲ್ಲಿನ ಸರ್ಕಾರ ಆದೇಶ ಹೊರಡಿಸಿತ್ತು.

ಅಲ್ಲದೆ, ಮುಂಬರುವ ಫೆಬ್ರವರಿಯಲ್ಲಿ ಟಿ-20 ವಿಶ್ವಕಪ್‌ಗೆ ಭಾತರಕ್ಕೆ ಬರುವುದಿಲ್ಲ ಎಂದು ಬಾಂಗ್ಲಾದೇಶ ಇತ್ತೀಚೆಗಷ್ಟೇ ಹೇಳಿತ್ತು. ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಐಸಿಸಿಗೆ ಪತ್ರ ಬರೆದಿತ್ತು. "ಭಾರತಕ್ಕೆ ನಮ್ಮ ತಂಡವನ್ನು ಕಳುಹಿಸುದಿಲ್ಲ. ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರ ಮಾಡಿ," ಎಂದು ಬೇಡಿಕೊಂಡಿತ್ತು. ಆದರೆ ಇದೀಗ ಇದನ್ನಯ ಬಿಸಿಸಿಐ ತಿರಸ್ಕರಿಸಿದ ಕಾರಣ ಬಾಂಗ್ಲಾದೇಶ ಟಿ-20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೆಕೆಆರ್‌ನಿಂದ ಹೊರಬಿದ್ದ ಬಾಂಗ್ಲಾ ಆಟಗಾರ: ಕೆಕೆಆರ್ ತಂಡವು 2025ರ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ 2026 ಮಿನಿ ಹರಾಜಿನಲ್ಲಿ ಮುಸ್ತಫಿಜೂರು ರಹಮಾನ್ ಅವರನ್ನು 9.20 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೆ, ಬಾಂಗ್ಲಾದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಅವರನ್ನು ತಂಡದಲ್ಲಿ ಉಳಿಸಿಕೊಂಡಿರುವ ವಿಚಾರ ವಿವಾದಕ್ಕೆ ಕಾರಣವಾಗಿ ಆಕ್ರೋಶಗಳು ವ್ಯಕ್ತವಾದವು. ಕೆಕೆಆರ್ ಮಾಲೀಕ ಶಾರುಖ್ ಖಾನ್ ವಿರುದ್ಧ ಎಲ್ಲೆಡೆ ಆಕ್ರೋಶಗಳು ಭುಗಿಲೆದ್ದವು.
"ಮುಂಬರುವ ಐಪಿಎಲ್ ಆರಂಭಕ್ಕೂ ಮುಂಚಿತವಾಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಬಿಸಿಸಿಐ ಸೂಚನೆ ನೀಡಿತ್ತು. ಇದರಿಂದ ಅವರನ್ನು ಕೈಬಿಡಲಾಗಿದೆ," ಎಂದು ಕೋಲ್ಕತಾ ನೈಟ್ ರೈಡರ್ಸ್ ದೃಢಪಡಿಸಿದೆ. "ಬಿಸಿಸಿಐ ಸೂಚನೆಯಂತೆ ಸೂಕ್ತ ಪ್ರಕ್ರಿಯೆ ಮತ್ತು ಚರ್ಚೆಯ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ" ಎಂದು ಕೆಕೆಆರ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.
ಇದರ ಪರಿಣಾಮ ಮುಂಬರುವ ಟಿ-20 ವಿಶ್ವಕಪ್‌ಗೆ ಬಾಂಗ್ಲಾದೇಶ ಭಾರತಕ್ಕೆ ಬರಲು ನಿರಾಕರಿಸಿತ್ತು. ಫೆಬ್ರವರಿ 7ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಬಾಂಗ್ಲಾದೇಶದ ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ನಿಗದಿಪಡಿಸಲಾಗಿದೆ. ಆದರೆ, ಅವರು ಭಾರತದಲ್ಲಿ ಆಡಲು ನಮ್ಮ ಆಟಗಾರರು ಬರುವುದಿಲ್ಲ. ತಮ್ಮ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸುವಂತೆ ಬಾಂಗ್ಲಾದೇಶದ ಕ್ರೀಡಾ ಸಚಿವ ಆಸಿಫ್ ನಜ್ರುಲ್ ಐಸಿಸಿಗೆ ಕೇಳಿಕೊಂಡಿದ್ದರು. ಆದರೆ ಇದೀಗ ಇದಕ್ಕೆ ಐಸಿಸಿ ನಕರಾತ್ಮಕ ಸೂಚನೆ ನೀಡಿದ ಕಾರಣ ಬಾಂಗ್ಲಾ ಟಿ-20 ಟೂರ್ನಿಯಿಂದ ಹಿಂದೆ ಸರಿದಿದೆ.
ಟೂರ್ನಿಯಿಂದ ಹಿಂದೆ ಸರಿದ ಬಾಂಗ್ಲಾ?: ಬಾಂಗ್ಲಾದೇಶವು ಭಾರತ ಬಿಟ್ಟು ಬೇರೆಡೆ ಪಂದ್ಯಗಳನ್ನು ಆಡಿಸುವಂತೆ ಮನವಿ ಮಾಡಿತ್ತು. ಆದರೆ ಅವರ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಆದ್ದರಿಂದ ಬಾಂಗ್ಲಾದೇಶ ಸ್ವಯಂಪ್ರೇರಿತರಾಗಿ ಟೂರ್ನಿಯಿಂದ ಹಿಂದೆ ಸರಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಬಾಂಗ್ಲಾದೇಶಕ್ಕೆ ಭಾರೀ ಹಿನ್ನಡೆ ಆಗಿದೆ. ಒಟ್ಟಿನಲ್ಲಿ ಹೇಳುವುದಾದ್ರೆ, ಅವರು ಮಾಡಿದ ತಪ್ಪೇ ಅವರಿಗೆ ತಿರುಮಂತ್ರ ಹೊಡೆದಂತಾಗಿದೆ. ಅಲ್ಲದೆ, ತಾವೇ ಹಳ್ಳತೋಡಿಕೊಂಡು ಅದರಲ್ಲಿ ಬಿದ್ದಿದ್ದಾರೆ ಅಂತಲೂ ಹೇಳಬಹುದು. ಇದರಿಂದ ನಷ್ಟ ಆಗುವುದು ಬಾಂಗ್ಲಾಗೆ ಹೊರತು ಭಾರತಕ್ಕಲ್ಲ.












Click it and Unblock the Notifications