Jusprit Bumrah: ಬುಮ್ರಾ ಅಬ್ಬರಕ್ಕೆ ಬೆದರಿದ ಬಾಂಗ್ಲಾ 149 ರನ್‌ಗಳಿಗೆ ಆಲೌಟ್‌

ಜಸ್ಪ್ರೀತ್ ಬುಮ್ರಾ ಅವರ ಅಬ್ಬರಕ್ಕೆ ಬಾಂಗ್ಲಾದೇಶ ಬ್ಯಾಟರ್ ಗಳು ಬೆಚ್ಚಿಬಿದ್ದಿದ್ದಾರೆ. ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ 149 ರನ್‌ಗಳಿಗೆ ಆಲೌಟ್ ಆಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 376 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಬುಮ್ರಾ ವೇಗಕ್ಕೆ ನಲುಗಿತು.

ಚೆನ್ನೈನ ರಣ ಬಿಸಿಲಿನಲ್ಲಿ ಬುಮ್ರಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ತಾವೇಕೆ ಜಗತ್ತಿನ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರು ಎನ್ನುವುದನ್ನು ಸಾಬೀತುಪಡಿಸಿದರು. ಬಾಂಗ್ಲಾದೇಶದ ವಿರುದ್ಧ 4 ವಿಕೆಟ್ ಪಡೆಯುವ ಮೂಲಕ 400 ಅಂತರಾಷ್ಟ್ರೀಯ ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ 10 ನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

bangladesh all out for 149 runs in first test against india

ಮೊದಲ ಓವರ್ ನಲ್ಲೇ ಬುಮ್ರಾ ಶದ್ಮನ್ ಇಸ್ಲಾಂ ಅವರ ವಿಕೆಟ್ ಪಡೆಯುವ ಮೂಲಕ ಬಾಂಗ್ಲಾದೇಶಕ್ಕೆ ಆಘಾತ ನೀಡಿದರು. ಬುಮ್ರಾ ಭಾರತ ಮತ್ತಿಬ್ಬರು ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಬೆಂಬಲ ನೀಡಿದರು. ಈ ಇಬ್ಬರು ತಲಾ ಎರಡು ವಿಕೆಟ್ ಪಡೆದು, ಬಾಂಗ್ಲಾದೇಶ 150 ರನ್‌ಗಳ ಒಳಗೆ ಆಲೌಟ್ ಆಗಲು ಪ್ರಮುಖ ಪಾತ್ರ ವಹಿಸಿದರು.

ಚಹಾ ವಿರಾನದ ವೇಳೆಗೆ ಬುಮ್ರಾ ಮೂರು ವಿಕೆಟ್‌ಗಳನ್ನು ಪಡೆದಿದ್ದರು, ಬಾಂಗ್ಲಾದೇಶ 112 ರನ್‌ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಶಕೀಬ್ ಅಲ್ ಹಸನ್ 32 ರನ್ ಮತ್ತು ಲಿಟ್ಟನ್ ದಾಸ್ 22 ರನ್ ಗಳಿಸಿ ಭಾರತದ ಬೌಲಿಂಗ್ ದಾಳಿಯನ್ನು ಒಂದಷ್ಟು ಸಮಯ ಎದುರಿಸಿದರು. ಆದರೂ ಭಾರತದ ಬಿಗಿ ಬೌಲಿಂಗ್ ದಾಳಿ ಎದುರು ಹೆಚ್ಚು ಹೊತ್ತು ನಿಲ್ಲಲು ಆಗಲಿಲ್ಲ.

149 ರನ್‌ಗಳಿಗೆ ಆಲೌಟ್

ಭಾರತದ ವೇಗಿಗಳ ಅಬ್ಬರಕ್ಕೆ ನಲುಗಿದ ಬಾಂಗ್ಲಾದೇಶ 149 ರನ್‌ಗಳಿಗೆ ಆಲೌಟ್ ಆಗಿದೆ. 227 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸುವ ಮೂಲಕ 308 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

ಯಶಸ್ವಿ ಜೈಸ್ವಾಲ್ 10 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 5 ರನ್‌ ಗಳಿಸಿ ಔಟಾದರು. ವಿರಾಟ್ ಕೊಹ್ಲಿ 17 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಶುಭಮನ್ ಗಿಲ್ ಅಜೇಯ 33 ರನ್ ಗಳಿಸಿದ್ದು ಮೂರನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ರಿಷಬ್ ಪಂತ್ ಅಜೇಯ 12 ರನ್ ಗಳಿಸಿದ್ದು ಕ್ರೀಸ್‌ನಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+