ಟಿ20 ವಿಶ್ವಕಪ್, ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

ಕ್ಯಾನ್ ಬೆರಾ, ಸೆ.1: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ಟಿ20 ವಿಶ್ವಕಪ್ ಪಂದ್ಯಾವಳಿಗೆ 15 ಸದಸ್ಯರ ತಂಡವನ್ನು ಗುರುವಾರದಂದು ಕ್ರಿಕೆಟ್ ಆಸ್ಟ್ರೇಲಿಯಾ(CA) ಪ್ರಕಟಿಸಿದೆ. ಇದರ ಜೊತೆಗೆ ಭಾರತ ವಿರುದ್ಧದ ಸರಣಿಗೂ ತಂಡವನ್ನು ಪ್ರಕಟಿಸಲಾಗಿದ್ದು, ಆಲ್ ರೌಂಡರ್ ಟಿಮ್ ಡೇವಿಡ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಭಾರತ ಪ್ರವಾಸಕ್ಕೆ ಡೇವಿಡ್ ವಾರ್ನರ್ ಅಲಭ್ಯರಾಗಿದ್ದಾರೆ.

ಅರೋನ್ ಫಿಂಚ್ ತಂಡದ ನಾಯಕರಾಗಿದ್ದು, ತವರು ನೆಲದಲ್ಲಿ ಟಿ20 ವಿಶ್ವಕಪ್ ಉಳಿಸಿಕೊಳ್ಳಲು ಆಸೀಸ್ ಪಡೆ ಯತ್ನಿಸಲಿದೆ. ನ್ಯೂಜಿಲೆಂಡ್ ಸೋಲಿಸಿ ವಿಶ್ವಕಪ್ ಆಸ್ಟೇಲಿಯಾ ಎತ್ತಿ ಹಿಡಿದಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿರುವ ಫಿಂಚ್ ಪಡೆ, ನಂತರ ವೆಸ್ಟ್ ಇಂಡೀಸ್, ಇಂಗ್ಲೆಂಡ್ ವಿರುದ್ಧ ಪಂದ್ಯಗಳನ್ನಾಡಲಿದೆ.

ಭಾರತ ವಿರುದ್ಧದ T20I ಸರಣಿಯಲ್ಲಿ ಆಡಲಿರುವ ಆಸ್ಟ್ರೇಲಿಯಾ ತಂಡದಲ್ಲಿ ಹೆಚ್ಚಿನ ಬದಲಾವಣೆ ಇಲ್ಲದೆ ವಿಶ್ವಕಪ್ ಆಡಲಿದೆ. ಡೇವಿಡ್ ವಾರ್ನರ್ ಅವರು ಭಾರತೀಯ ಪ್ರವಾಸಕ್ಕೆ ಅಲಭ್ಯರಾಗಲಿದ್ದು, ಕ್ಯಾಮರೂನ್ ಗ್ರೀನ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ" ಎಂದು ಅಧಿಕೃತ ಕ್ರಿಕೆಟ್ ಆಸ್ಟ್ರೇಲಿಯಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

Australias T20 Squad for Series vs India and World Cup Squad, Aaron Finch is captain

ಟಿಮ್ ಡೇವಿಡ್: ಸಿಂಗಪುರದಲ್ಲಿ ಜನಿಸಿದ, ಪರ್ತ್‌ನಲ್ಲಿ ಬೆಳೆದ ಟಿಮ್ ಡೇವಿಡ್, ಕಳೆದ ವರ್ಷ ದುಬೈನಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿ, ಮೊದಲ ಬಾರಿಗೆ ಟಿ 20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ತಂಡದಿಂದ ಹೊರಗುಳಿದಿದ್ದು ,ಅವರ ಸ್ಥಾನಕ್ಕೆ ಆಲ್ ರೌಂಡರ್ ಆಗಿ ಟಿಮ್ ಡೇವಿಡ್ ತಂಡ ಸೇರಿದ್ದಾರೆ.

ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್ ವಿರುದ್ಧದ ODI ಸರಣಿಯಿಂದ ಹೊರಗುಳಿದಿದ್ದ ಪ್ಯಾಟ್ ಕಮ್ಮಿನ್ಸ್ ಅವರು ಪುನಶ್ಚೇತನ ಮತ್ತು ದೈಹಿಕ ತರಬೇತಿ ಅವಧಿಯ ನಂತರ ಆಡಲು ಹಿಂದಿರುಗುತ್ತಿದ್ದಾರೆ. ಮಗ ಯುಜೀನ್ ಹುಟ್ಟಿದ ಸಂಭ್ರಮದಲ್ಲಿ ವಿರಾಮ ಪಡೆದಿದ್ದ ಆಡಮ್ ಝಂಪಾ ಟಿ20 ತಂಡಕ್ಕೆ ಮರಳಿದ್ದಾರೆ.

Australias T20 Squad for Series vs India and World Cup Squad, Aaron Finch is captain

ಭಾರತ ವಿರುದ್ಧ ಮೂರು T20I ಗಳಿಗೆ ಆಸ್ಟ್ರೇಲಿಯಾ ತಂಡ: ಆಸ್ಟ್ರೇಲಿಯಾದ T20 ವಿಶ್ವಕಪ್ ತಂಡ: ಆರೋನ್ ಫಿಂಚ್ (c), ಕ್ಯಾಮೆರಾನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್, ಆಷ್ಟನ್ ಅಗರ್, ಟಿಮ್ ಡೇವಿಡ್, ಜೋಶ್ ಹೇಜಲ್ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ ವೆಲ್, ಸ್ಟೀವ್ ಸ್ಮಿತ್, ಕೇನ್ ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಆಡಮ್ ಝಂಪಾ.

ಆಸ್ಟ್ರೇಲಿಯಾದ T20 ವಿಶ್ವಕಪ್ ತಂಡ: ಆರೋನ್ ಫಿಂಚ್ (c), ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ಆಷ್ಟನ್ ಅಗರ್, ಟಿಮ್ ಡೇವಿಡ್, ಜೋಶ್ ಹೇಜಲ್ ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಕೇನ್ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್ , ಆಡಮ್ ಝಂಪಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+