India vs Australia: ಪಿಂಕ್‌ಬಾಲ್ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಆರ್‌ಸಿಬಿ ವೇಗಿಗೆ ಇಲ್ಲ ಸ್ಥಾನ!
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಟೆಸ್ಟ್ ಡಿಸೆಂಬರ್ 6ರಿಂದ ಆರಂಭವಾಗಲಿದ್ದು, ಒಂದು ದಿನ ಮುಂಚಿತವಾಗಿಯೇ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ ಅನ್ನು ಘೋಷಣೆ ಮಾಡಿದೆ. ಅಡಿಲೇಡ್ ಓವಲ್‌ನಲ್ಲಿ ಪಂದ್ಯ ನಡೆಯಲಿದ್ದು, ಪಿಂಕ್ ಬಾಲ್ ಚಾಲೆಂಜ್‌ಗೆ ಭಾರತ, ಆಸ್ಟ್ರೇಲಿಯಾ ಸಿದ್ಧವಾಗಿವೆ.
ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿರುವ ಆಸ್ಟ್ರೇಲಿಯಾ ಎರಡನೇ ಟೆಸ್ಟ್‌ನಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಒಂದು ಬದಲಾವಣೆ ಮಾಡಿದೆ. ಗಾಯಗೊಂಡಿರುವ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಎರಡನೇ ಟೆಸ್ಟ್‌ಗೆ ಅಲಭ್ಯರಾಗಿದ್ದು ಅವರ ಬದಲಾಗಿ ಸ್ಕಾಟ್ ಬೊಲ್ಯಾಂಡ್ ತಂಡಕ್ಕೆ ಬಂದಿದ್ದಾರೆ.

ಸ್ಕಾಟ್ ಬೊಲಾಂಡ್ ಬಗ್ಗೆ ನಿರೀಕ್ಷೆ
ನಾಯಕ ಪಾಟ್ ಕಮ್ಮಿನ್ಸ್ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ ಬಳಿಕ ಮಾತನಾಡಿದ್ದು ಬೊಲಾಂಡ್‌ರನ್ನು ಹೊಗಳಿದ್ದಾರೆ. ಕಳೆದ ಬೇಸಿಗೆಯಲ್ಲೇ ಬೊಲ್ಯಾಂಡ್ ಆಡಲು ಸಜ್ಜಾಗಿದ್ದರೆ ಆದರೆ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆತ ಉತ್ತಮ ಲಯದಲ್ಲಿದ್ದು, ನಾಯಕನಾಗಿ ಸ್ಕಾಟ್ ಬೊಲ್ಯಾಂಡ್‌ರನ್ನು ತಂಡದಲ್ಲಿ ನೋಡಲು ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಮಾಜಿ ವೇಗಿ ರಿಯಾನ್ ಹ್ಯಾರಿಸ್ ಸ್ಕಾಟ್ ಬೊಲ್ಯಾಂಡ್‌ರನ್ನು ಹೊಗಳಿದ್ದು, ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ ಈತ ಮಾರಕವಾಗಬಹುದು ಎಂದು ಹೇಳಿದ್ದಾರೆ. ಪಿಂಕ್ ಬಾಲ್‌ನಲ್ಲಿ ಆತ ನಿಜಕ್ಕೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಭಾರತದ ಬ್ಯಾಟರ್‌ಗಳಿಗೆ ಆತನನ್ನು ಎದುರಿಸುವುದು ಸುಲಭವಾಗಿರಲ್ಲ. ಆತನ ಲೈನ್ ಮತ್ತು ಲೆಂತ್ ಅದ್ಭುತವಾಗಿದೆ. ಆತನ ಎತ್ತರ ಕೂಡ ಬೌಲಿಂಗ್ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುತ್ತದೆ ಎಂದು ಹೇಳಿದ್ದಾರೆ.
ಜೋಶ್ ಹೇಜಲ್‌ವುಡ್‌ಗೆ ಹೊರಕ್ಕೆ
ಜೋಶ್ ಹೇಜಲ್‌ವುಡ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಅವರು ತಂಡದಿಂದ ಕೈಬಿಡಲಾಗಿದೆ. ಡಿಸೆಂಬರ್ 14ರಿಂದ ಆರಂಭವಾಗಲಿರುವ ಗಬ್ಬಾ ಟೆಸ್ಟ್ ವೇಳೆಗೆ ಅವರು ಫಿಟ್ ಆಗಬಹುದು ಎಂದು ಪಾಟ್ ಕಮ್ಮಿನ್ಸ್ ಮಾಹಿತಿ ನೀಡಿದ್ದಾರೆ. ಪರ್ತ್ ಟೆಸ್ಟ್‌ನಲ್ಲಿ ಜೋಶ್ ಹೇಜಲ್‌ವುಡ್ 5 ವಿಕೆಟ್ ಪಡೆದು ಗಮನ ಸೆಳೆದಿದ್ದರು.
ಭಾರತ ಕೊನೆಯದಾಗಿ ಅಡಿಲೇಡ್‌ನಲ್ಲಿ ಆಡಿದ ಟೆಸ್ಟ್‌ನಲ್ಲಿ ಹೇಜಲ್‌ವುಡ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 5 ಓವರ್ ಗಳಲ್ಲಿ 8 ರನ್ ನೀಡಿ 5 ವಿಕೆಟ್ ಪಡೆದಿದ್ದರು, ಆ ಪಂದ್ಯದಲ್ಲಿ ಭಾರತ 36 ರನ್‌ಗಳಿಗೆ ಆಲೌಟ್ ಆಗಿತ್ತು.
ಮೊದಲ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿರುವ ಭಾರತ ಎರಡನೇ ಟೆಸ್ಟ್ ಗೆಲ್ಲುವ ವಿಶ್ವಾಸದಲ್ಲಿದೆ. ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದ ನಾಯಕ ರೋಹಿತ್ ಶರ್ಮಾ ಎರಡನೇ ಟೆಸ್ಟ್‌ನಲ್ಲಿ ವಾಪಸಾಗಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ. ದೇವದತ್ ಪಡಿಕ್ಕಲ್ ಮಾತ್ರ ಹೊರಗುಳಿಯಲಿದ್ದು ಬಹುತೇಕ ಮೊದಲ ಟೆಸ್ಟ್ ಆಡಿದ ತಂಡವೇ ಕಣಕ್ಕಿಳಿಯುವುದು ಖಚಿತವಾಗಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್
ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.












Click it and Unblock the Notifications