ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ನಿಧನ

ಬ್ರಿಸ್ಬೇನ್, ಮಾರ್ಚ್ 04: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್(52) ಶುಕ್ರವಾರದಂದು ನಿಧನರಾಗಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿ ಬಂದಿದೆ.

ವಾರ್ನ್ ಅವರ ಮಾಧ್ಯಮ ವಕ್ತಾರರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ಶೇನ್ ವಾರ್ನ್ ಶಂಕಿತ ಹೃದಯಾಘಾತದಿಂದ ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿ ನಿಧನರಾಗಿದ್ದಾರೆ ಎಂದಿದ್ದಾರೆ.

"ಶೇನ್ ಅವರ ವಿಲ್ಲಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿದ್ದ ಶೇನ್ ಅವರನ್ನು ಬದುಕಿಸಲು ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Australia cricket legend Shane Warne dies of suspected heart attack

ಆಸ್ಟ್ರೇಲಿಯಾದ ಕ್ರಿಕೆಟ್‌ಗೆ ಕಳೆದ 24 ಗಂಟೆಗಳಲ್ಲಿ ಇದು ಎರಡನೇ ಆಘಾತಕಾರಿ ಸುದ್ದಿಯಾಗಿದೆ. ಶ್ರೇಷ್ ಕ್ರಿಕೆಟರ್ ಎನಿಸಿಕೊಂಡಿದ್ದ ರಾಡ್ ಮಾರ್ಷ್ ಅವರನ್ನು ಕಳೆದುಕೊಂಡ ಕೆಲ ಗಂಟೆಗಳಲ್ಲೇ ಶೇನ್ ವಾರ್ನ್ ನಿಧನದ ಸುದ್ದಿ ಬಂದಿದೆ. ಆಸ್ಟ್ರೇಲಿಯಾದ ಹಾಲಿ, ಮಾಜಿ ಕ್ರಿಕೆಟರ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಪ್ರೀತಿಯಿಂದ 'ವಾರ್ನಿ' ಎಂದು ಕರೆಯಲ್ಪಡುತ್ತಿದ್ದ ಶೇನ್ ವಾರ್ನ್ ಅವರು ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ವಾರ್ನ್ ಅವರು ಕ್ರಿಕೆಟ್ ಶ್ರೇಷ್ಠ ಬೌಲರ್ ಎಂದು ಅನೇಕರು ಪರಿಗಣಿಸಿದ್ದಾರೆ.

1992ರಲ್ಲಿ ಜಾಗತಿಕ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ವಾರ್ನ್ ಸುಮಾರು 15 ವರ್ಷಗಳ ಕಾಲದ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 145 ಟೆಸ್ಟ್ ಪಂದ್ಯಗಳನ್ನಾಡಿ 708 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದು ದಾಖಲೆ ಬರೆದಿದ್ದಾರೆ. ವಾರ್ನ್ 1999 ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಒಟ್ಟಾರೆ 1001 ವಿಕೆಟ್ ಗಳಿಸಿದ ಸ್ಪಿನ್ ಮಾಂತ್ರಿಕ. 194 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 293 ವಿಕೆಟ್ ಕಿತ್ತಿದ್ದಾರೆ.

2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಬಳಿಕ ಕೌಂಟಿ ಕ್ರಿಕೆಟ್, ಇಂಡಿಯನ್ ಪ್ರೀಮಿಯರ್ ಲೀಗ್ ಗಳಲ್ಲಿ ಸಕ್ರಿಯರಾಗಿದ್ದರು. ಜೊತೆಗೆ ಕಾಮೆಂಟ್ರಿ ಕೂಡಾ ಮಾಡುತ್ತಿದ್ದರು. ಐಪಿಎಲ್ ನಲ್ಲಿ ಕ್ಯಾಪ್ಟನ್ ಕಮ್ ಕೋಚ್ ಅಚ್ಚರಿ ಮೂಡಿಸಿದರು. 2008ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಕಪ್ ಗೆಲ್ಲುವಂತೆ ಮಾಡಿದರು. 2018ರಲ್ಲಿ ರಾಜಸ್ಥಾನ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು.

2021ರ ಆಗಸ್ಟ್ ತಿಂಗಳಲ್ಲಿ ಲಂಡನ್ ಸ್ಪಿರಿಟ್ ತಂಡದ ಕೋಚ್ ಆಗಿದ್ದ ಶೇನ್ ವಾರ್ನ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದರು. ನವೆಂಬರ್ ತಿಂಗಳಲ್ಲಿ ತಮ್ಮ ಮಗ ಜಾಕ್ಸನ್ ಜೊತೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್ ಅಪಘಾತಕ್ಕೆ ಒಳಗಾಗಿದ್ದು ಗಾಯಗೊಂಡಿದ್ದರು. ಆದರೆ, ಯಾವುದೇ ಮಾರಣಾಂತಿಕ ಗಾಯಗಳಾಗಿರಲಿಲ್ಲ. ಇತ್ತೀಚೆಗೆ ಥೈಲ್ಯಾಂಡಿನ ಕೊಯ್ ಸಮುಯಿಯ ವಿಲ್ಲಾದಲ್ಲಿದ್ದ ಶೇನ್ ಅವರು ನಿಧನರಾಗಿರುವ ರೀತಿ ಬಗ್ಗೆ ಶಂಕೆ ಮೂಡಿದೆ.

ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದಲ್ಲಿ ಜನಿಸಿದ ಶೇನ್ ವಾರ್ನ್ ವರ್ಣಮಯ ಬದುಕು ಕಂಡವರು, ಕೊನೆ ಟ್ವೀಟ್ ನಲ್ಲಿ ರಾಡ್ ಮಾರ್ಷ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಬೆಳಗ್ಗೆ 7:23 AM ಕ್ಕೆ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಹೃದಯಾಘಾತದಿಂದ 74 ನೇ ವಯಸ್ಸಿನಲ್ಲಿ ನಿಧನರಾದ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್ ರಾಡ್ ಮಾರ್ಷ್ ಅವರ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+