ಏಷ್ಯನ್ ಗೇಮ್ಸ್‌ಗೆ ಅದ್ಧೂರಿ ಚಾಲನೆ: ಭಾರತದ ಧ್ವಜ ಹಿಡಿದು ಮಿಂಚಿದ ಮನು ಭಾಕರ್, ಪವನ್

Asian Games 2026: ಏಷ್ಯಾದ ಅತಿದೊಡ್ಡ ಕ್ರೀಡಾ ಹಬ್ಬವಾದ 20ನೇ ಏಷ್ಯನ್ ಗೇಮ್ಸ್‌ಗೆ ಜಪಾನ್‌ನ ನಾಗೋಯಾದಲ್ಲಿ ಶನಿವಾರ (ಸೆಪ್ಟೆಂಬರ್ 19) ಅಧಿಕೃತ ಚಾಲನೆ ದೊರೆಯಿತು. ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಮಿಝಹೊ ಪಾರ್ಕ್‌ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಪಥಸಂಚಲನದಲ್ಲಿ ಭಾರತದ ಒಟ್ಟು 501 ಅಥ್ಲೀಟ್‌ಗಳ ತಂಡವನ್ನು ಒಲಿಂಪಿಕ್ ಪದಕ ವಿಜೇತ ಶೂಟರ್ ಮನು ಭಾಕರ್ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಕಬಡ್ಡಿ ತಾರೆ ಪವನ್ ಸೆಹ್ರಾವತ್ ಧ್ವಜಧಾರಿ ಹಿಡಿದು ಯಶಸ್ವಿಯಾಗಿ ಮುನ್ನಡೆಸಿದರು.

Asian Games 2026 Opening Ceremony Manu Bhaker and Pawan Sehrawat Lead India s 501-Member Contingent

ಭಾರತೀಯ ಪಡೆಯ ಸಾರಥ್ಯ ವಹಿಸಿದ ಮನು-ಪವನ್

ಆರಂಭದಲ್ಲಿ ಮನು ಭಾಕರ್ ಜೊತೆಗೆ ಶಾಟ್‌ಪುಟ್ ಆಟಗಾರ ತಜೀಂದರ್‌ಪಾಲ್‌ ಸಿಂಗ್ ತೂರ್ ಧ್ವಜ ಹಿಡಿಯಬೇಕಿತ್ತು. ಆದರೆ ಅವರಿಗೆ ಉದ್ಘಾಟನಾ ಸಮಾರಂಭದ ಅಧಿಕೃತ ಪೋಷಾಕು ಸಮಯಕ್ಕೆ ಸರಿಯಾಗಿ ಸಿಗದ ಕಾರಣ, ಕೊನೆ ಕ್ಷಣದಲ್ಲಿ ಪವನ್ ಸೆಹ್ರಾವತ್ ಅವರಿಗೆ ಈ ಗೌರವ ಲಭಿಸಿತು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ರೋಚಕ ಹಾಗೂ ಸಾಂಸ್ಕೃತಿಕ ಸಮಾರಂಭದಲ್ಲಿ ಜಪಾನ್ ದೊರೆ ನರುಹಿಟೊ, ರಾಣಿ ಮಸಾಕೊ, ರಾಜಕುಮಾರ ಅಕಿಶಿನೊ, ರಾಜಕುಮಾರಿ ಕಿಕೊ ಹಾಗೂ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಅಧ್ಯಕ್ಷ ಶೇಖ್ ಜೊವಾನ್‌ ಬಿನ್‌ ಹಮದ್ ಅಲ್ ಥಾನಿ ಸೇರಿದಂತೆ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ಕ್ರೀಡಾಕೂಟದ ಪ್ರಮುಖ ವಿವರಗಳು

* 45 ದೇಶಗಳು ಮತ್ತು ಒಸಿಎ ನಿರಾಶ್ರಿತರ ತಂಡ ಸೇರಿದಂತೆ ಸುಮಾರು 11,00 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.

* 42 ವಿವಿಧ ಕ್ರೀಡೆಗಳ 469 ಚಿನ್ನದ ಪದಕಗಳಿಗಾಗಿ ಸ್ಪರ್ಧೆ ನಡೆಯಲಿದೆ.

* ಈ ಜಾಗತಿಕ ಕ್ರೀಡಾಕೂಟವು ಅಕ್ಟೋಬರ್ 4ರ ವರೆಗೆ ಇರಲಿದೆ.

ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭಾರಂಭ

ಕೆಲವು ಸ್ಪರ್ಧೆಗಳು ಈಗಾಗಲೇ ಆರಂಭವಾಗಿದ್ದು, ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಆತಿಥೇಯ ಜಪಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಇನ್ನು 2023ರಲ್ಲಿ ಚೀನಾದ ಹಾಂಗ್‌ಝೌನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 28 ಚಿನ್ನ ಸೇರಿದಂತೆ ಒಟ್ಟು 106 ಪದಕಗಳನ್ನು ಗೆದ್ದು ಸಾರ್ವಕಾಲಿಕ ದಾಖಲೆ ಬರೆದಿತ್ತು. ಈ ಬಾರಿ ಆ ಐತಿಹಾಸಿಕ ಮೈಲಿಗಲ್ಲನ್ನು ದಾಟಿ ಹೊಸ ದಾಖಲೆ ನಿರ್ಮಿಸುವತ್ತ ಭಾರತೀಯ ಅಥ್ಲೀಟ್‌ಗಳು ಚಿತ್ತ ನೆಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+