Asian Games 2026: 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನ

Asian Games 2026: ಜಪಾನ್ ದೇಶದ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಶೂಟರ್‌ಗಳು ಮತ್ತೊಂದು ಅತ್ಯದ್ಭುತ ಸಾಧನೆ ಮಾಡಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸುರುಚಿ ಇಂದರ್ ಸಿಂಗ್ ಮತ್ತು ಕಮಲ್‌ಜೀತ್ ಜೋಡಿ ಅಮೋಘ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ.

ಫೈನಲ್ ಪ್ರವೇಶಕ್ಕೂ ಮುನ್ನ ನಡೆದ ಅರ್ಹತಾ ಸುತ್ತಿನಲ್ಲಿಯೂ ಭಾರತೀಯ ಜೋಡಿ ಅಬ್ಬರದ ಪ್ರದರ್ಶನ ತೋರಿತ್ತು. ಒಟ್ಟು 21 ತಂಡಗಳು ಭಾಗವಹಿಸಿದ್ದ ಈ ಸುತ್ತಿನಲ್ಲಿ ಸುರುಚಿ ಮತ್ತು ಕಮಲ್‌ಜೀತ್ ಜೋಡಿ ಒಟ್ಟು 587 ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಪಡೆದುಕೊಂಡಿತು. ಈ ಮೂಲಕ ನೂತನ ಏಷ್ಯನ್ ಗೇಮ್ಸ್ ಅರ್ಹತಾ ದಾಖಲೆಯನ್ನು ನಿರ್ಮಿಸುವುದಲ್ಲದೆ, ಏಷ್ಯನ್ ದಾಖಲೆಯನ್ನು ಸಮಗಟ್ಟಿ ಗಮನ ಸೆಳೆದರು.

Asian Games 2026 India Wins Gold in 10m Air Pistol Mixed Team Event in Aichi-Nagoya Know details

ಪ್ರಶಸ್ತಿ ಸುತ್ತಿನಲ್ಲಿ ಅತ್ಯದ್ಭುತ ಪ್ರದರ್ಶನ

ಅರ್ಹತಾ ಸುತ್ತಿನ ಮೊದಲ ಸರಣಿಯಲ್ಲಿ 196, ಎರಡನೇ ಸರಣಿಯಲ್ಲಿ 195 ಹಾಗೂ ಅಂತಿಮ ಸರಣಿಯಲ್ಲಿ 196 ಅಂಕಗಳನ್ನು ಕಲೆಹಾಕಿ 29 'ಇನ್ನರ್ 10' ಹೊಡೆತಗಳೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟ ಈ ಜೋಡಿ, ಪ್ರಶಸ್ತಿ ಸುತ್ತಿನಲ್ಲೂ ನಿಖರ ಗುರಿಯೊಂದಿಗೆ ಎದುರಾಳಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಕಾಯ್ದುಕೊಂಡಿತು. ವೈಯಕ್ತಿಕ ವಿಭಾಗಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾಗದೆ ಹಿನ್ನಡೆ ಅನುಭವಿಸಿದ್ದ ಈ ಇಬ್ಬರೂ ಶೂಟರ್‌ಗಳು, ಮಿಶ್ರ ತಂಡ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ತೋರಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+