India VS Pakistan: ಭಾರತ & ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಆಘಾತ!

ಹಿಂಗೆ ಆಗಬಾರದಿತ್ತು, ಹಿಂಗೆ ಆಗಲೇಬಾರದಿತ್ತು.. ಅಷ್ಟಕ್ಕೂ ಈ ಮಾತು ಹೇಳುತ್ತಿದ್ದವರು ನಾವಲ್ಲ, ಕ್ರಿಕೆಟ್ ಫ್ಯಾನ್ಸ್. ಹಲವು ತಿಂಗಳಿಂದಲೂ ಪ್ಲ್ಯಾನ್ ಮಾಡಿ, ರಜೆ ಹಾಕ್ಕೊಂಡು ಮ್ಯಾಚ್ ನೋಡಲು ಕೂತವರಿಗೆ ಆಘಾತ ಎದುರಾಗಿದೆ. ವೀಕೆಂಡ್ ಅಲ್ಲಿ ರಜೆ ಇಲ್ಲದಿದ್ರೂ ಚಕ್ಕರ್ ಹಾಕಿದವರಿಗೆ ನಿರಾಸೆ ಉಂಟಾಗಿದೆ. ಭಾರತ & ಪಾಕಿಸ್ತಾನ ಕ್ರಿಕೆಟ್ ಪಂದ್ಯ ಮಳೆಗೆ ಬಲಿಯಾಗಿದೆ.

ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು ಮಧ್ಯಾಹ್ನ ಪಂದ್ಯ ಆರಂಭವಾಗಿತ್ತು. 2023ರ ಏಷ್ಯಾ ಕಪ್ ಸರಣಿಯಲ್ಲೇ ಈ ಮ್ಯಾಚ್ ಹೈವೋಲ್ಟೇಜ್ ಆಗಿದ್ದರೂ, ಮಳೆ ಕಾಟ ಪದೇ ಪದೆ ಭಯ ಹುಟ್ಟಿಸಿತ್ತು. ಆದರೂ ಭಾರತದ ಇನ್ನಿಂಗ್ಸ್ ಕಂಪ್ಲೀಟ್ ಆಗಿತ್ತು. ಹೀಗಿದ್ದಾಗಲೇ ಪಾಕಿಸ್ತಾನ ತಂಡವನ್ನು ಕಟ್ಟಿಹಾಕಲು ಭಾರತ ಸಿದ್ಧತೆ ನಡೆಸಿತ್ತು. 266 ರನ್‌ ಗಳಿಸಿದ್ದ ಭಾರತ 267 ರನ್ ಗುರಿಯನ್ನ ಪಾಕಿಸ್ತಾನಕ್ಕೆ ನೀಡಿತ್ತು. ಆದರೆ ಭಾರತ ತಂಡದ ಪ್ರಯತ್ನ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.

asia-cup-match

ಭಾರತ & ಪಾಕ್ ಪಂದ್ಯಕ್ಕೆ ಮಳೆ ವಿಲನ್!

ಇಂದಿನ ಪಂದ್ಯ 2023ರ ಏಷ್ಯಾ ಕಪ್ ಸರಣಿಯಲ್ಲೇ ಅತ್ಯಂತ ಮಹತ್ವದ್ದು. ಹೀಗಾಗಿ ಪಂದ್ಯ ನಡೆಸಲು ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಆದರೂ ಅಂತಿಮವಾಗಿ ಪಂದ್ಯ ರದ್ದಾಗಿ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 266 ರನ್‌ಗೆ ಆಲೌಟ್ ಆಗಿತ್ತು. ಆದರೆ 2ನೇ ಇನ್ನಿಂಗ್ಸ್ ಆಡಬೇಕಿದ್ದ ಪಾಕಿಸ್ತಾನ ತಂಡ ಒಂದೇ ಒಂದು ಬಾಲ್ ಕೂಡ ಆಡಲಿಲ್ಲ. ಬಿಟ್ಟೂ ಬಿಡದಂತೆ ಮಳೆ ಸುರಿದ ಕಾರಣ ಈ ಪಂದ್ಯವನ್ನು ರದ್ದು ಮಾಡಿದ್ದಾಗ ಘೋಷಣೆ ಹೊರಬಿದ್ದಿದೆ. ಇದು ಅಭಿಮಾನಿಗಳಿಗೆ ಭಾರಿ ಬೇಸರವನ್ನು ತಂದಿದೆ. ಹಾಗಾದರೆ ಭಾರತದ ಇನ್ನಿಂಗ್ಸ್ ಹೇಗಿತ್ತು? ಬನ್ನಿ ತಿಳಿಯೋಣ.

ಮಳೆಯೋ ಮಳೆ.. ಪಿಚ್ ಒಳಗೆ!

ಭಾರತದ ಅಭಿಮಾನಿಗಳು ಪಾಕಿಸ್ತಾನ ವಿರುದ್ಧ ಗೆಲ್ಲಲೇಬೇಕೆಂಬ ಹಠದಲ್ಲಿ ಇರುತ್ತಾರೆ. ಇನ್ನು ಭಾರತದ ಆಟಗಾರರು ಕೂಡ ಪಾಕಿಸ್ತಾನ ವಿರುದ್ಧ ಜಿದ್ದಾಜಿದ್ದಿನ ಫೈಟ್ ಕೊಡ್ತಾರೆ. ಈ ಪಂದ್ಯ ಕೂಡ ಹೀಗೆ ರೋಚಕವಾಗಿತ್ತು, ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿತ್ತು. ಆರಂಭಿಕರಾಗಿ ಶುಭ್‌ಮನ್‌ ಗಿಲ್‌ & ರೋಹಿತ್‌ ಶರ್ಮಾ ಅಖಾಡಕ್ಕೆ ಪ್ರವೇಶ ಮಾಡಿದ್ದರು. ಆದ್ರೆ ಆರಂಭದಲ್ಲಿ ಚೆನ್ನಾಗಿ ಆಡಿದ್ದ ರೋಹಿತ್‌ ಶರ್ಮಾ ಔಟ್ ಆಗಿ ಪೆವಿಲಿಯನ್ ಸೇರಿದ್ರು, ಇದಾದ ನಂತರ ವಿರಾಟ್ ಕೊಹ್ಲಿ & ಶ್ರೇಯಸ್ ಐಯ್ಯರ್ ಕೂಡ ಔಟ್ ಆದರು. ಆಗಲೇ ಮಳೆ ಕೂಡ ಶುರುವಾಗಿತ್ತು.

asia-cup-match

ಪಂದ್ಯದ ಗತಿ ಬದಲಾಗಿದ್ದು ಹೇಗೆ?

ಮಳೆ ಕಾಟ ನಿಂತ ನಂತರ ಭಾರತ ಮೈಕೊಡವಿ ನಿಲ್ಲುವ ಸೂಚನೆ ನೀಡಿತ್ತು. ಈ ಸಂದರ್ಭಕ್ಕೇ ಮತ್ತೊಂದು ವಿಕೆಟ್ ಬಿದ್ದಿತ್ತು. ಭಾರತ ತಂಡದ ಮೊತ್ತ 66 ರನ್ ಆಗಿದ್ದಾಗ ಶುಭ್‌ಮನ್‌ ಗಿಲ್‌ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತ ಒಟ್ಟಾರೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಅಖಾಡಕ್ಕೆ ಎಂಟ್ರಿಯಾದ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಜೊತೆ ಸೇರಿ ಈ ಪಂದ್ಯದ ಗತಿಯನ್ನೇ ಬದಲಿಸಿದರು.

ಇನ್ನೇನು ಪಾಕಿಸ್ತಾನಕ್ಕೆ ಭಾರತದಿಂದ ಸವಾಲಿನ ಮೊತ್ತ ಪಕ್ಕಾ ಎನ್ನಲಾಗಿತ್ತು. ಆದರೆ 82 ರನ್ ಗಳಿಸಿದ್ದ ಇಶಾನ್ ಕಿಶನ್ ಔಟ್ ಆದರು. ಹೀಗೆ ಇಶಾನ್ ಕಿಶನ್ ಔಟ್ ಆದ ನಂತರ ಹಾರ್ದಿಕ್ ಪಾಂಡ್ಯ ಸ್ವಲ್ಪ ಹೊತ್ತು ಹೋರಾಟ ನೀಡಿದರೂ ಅವರು 87 ರನ್‌ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತದ ವಿಕೆಟ್ ಪತನ ಶುರುವಾಗಿ ಒಂದಾದ ಬಳಿಕ ಒಂದು ವಿಕೆಟ್ ಬಿತ್ತು. ಆದರೆ ಕೊನೆಯಲ್ಲಿ ಭಾರತದ ಬೌಲರ್‌ಗಳು ಉತ್ತಮ ಹೋರಾಟ ಪ್ರದರ್ಶಿಸಿದರು.

ಕೊನೆಯಲ್ಲಿ ಬುಮ್ರಾ ಒಂದಷ್ಟು ಹೋರಾಟ ತೋರಿದ ಹಿನ್ನೆಲೆ ಭಾರತ 250 ರನ್ ಗಡಿ ದಾಟಿ ಬಂತು. ಆದರೆ ನಸೀಮ್ ಶಾ ಓವರ್‌ನಲ್ಲಿ ಕುಲ್‌ದೀಪ್‌ ಯಾದವ್‌ ವಿಕೆಟ್‌ ಒಪ್ಪಿಸಿ, 4 ರನ್‌‌ ಗಳಿಸಿ ಔಟ್‌‌ ಆದರು. ಈ ಮೂಲಕ ಭಾರತದ 9ನೇ ವಿಕೆಟ್‌‌ ಉರುಳಿತ್ತು. ಅಂತಿಮವಾಗಿ ಭಾರತ ತಂಡ ತನ್ನೆಲ್ಲ ವಿಕೆಟ್‌‌ ಕಳೆದುಕೊಂಡು ಆಲೌಟ್‌ ಆಗುವ ಮೂಲಕ 266 ರನ್‌ ಗಳಿಸಿತು. ಪಾಕ್ ತಂಡಕ್ಕೆ 267 ರನ್‌ಗಳ ಟಾರ್ಗೆಟ್‌‌ ನೀಡಿತ್ತು. ಪಾಕಿಸ್ತಾನದ ಪರ ಶಾಹೀನ್ ಶಾ ಅಫ್ರಿದಿ 4 ವಿಕೆಟ್ ಗಳಿಸಿದ್ದು, ನಸೀಮ್ ಶಾ 3 ವಿಕೆಟ್ ಹಾಗೂ ಹ್ಯಾರಿಸ್ 3 ವಿಕೆಟ್ ಪಡೆದು ಪಾಕಿಸ್ತಾನ ತಂಡಕ್ಕೆ ನೆರವಾದರು. ಆದರೆ ಪಾಕಿಸ್ತಾನ ತಂಡ ಒಂದೇ ಒಂದು ಬಾಲ್ ಕೂಡ ಆಡದೆ, ಮಳೆಗೆ ಮ್ಯಾಚ್ ಬಲಿಯಾಗಿ ಹೋಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+