Asia Cup Final Ind vs Pak: ಭಾರತ-ಪಾಕ್ ಹೈವೋಲ್ಟೋಟ್ ಪಂದ್ಯ ನೇರ ಪ್ರಸಾರ, ಸಮಯ, ಸ್ಥಳದ ವಿವರ ತಿಳಿಯಿರಿ
Asia Cup 2025 Final Ind vs Pak: ಏಷ್ಯಾಕಪ್ 2025 ಟೂರ್ನಿ ಅಂತಿಮ ಘಟಕ್ಕೆ ಬಂದು ತಲುಪಿದೆ. ಇಂದು (ಸೆಪ್ಟೆಂಬರ್ 28) ಇಂಡಿಯಾ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದರ ವೀಕ್ಷಣೆಗಾಗಿ ಇಡೀ ವಿಶ್ವವೇ ಕಾದು ಕುಳಿತಿದೆ. ಹಾಗಾದ್ರೆ ನೇರಪ್ರಸಾರ, ಸಮಯ, ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇಂಡಿಯಾ-ಪಾಕಿಸ್ತಾನ ಪಂದ್ಯ ಅಂದ್ರೆ ಸಾಕು ಈ ಪಂದ್ಯವನ್ನು ಬರೀ ಭಾರತದಲ್ಲಿ ಅಷ್ಟೇ ಅಲ್ಲದೆ, ಇಡೀ ವಿಶ್ವವೇ ವೀಕ್ಷಣೆ ಮಾಡುತ್ತದೆ. ಹಾಗಾದ್ರೆ, ಎಲ್ಲೆಲ್ಲಿ ಉಚಿತವಾಗಿ ನೇರ ಪ್ರಸಾರ ಮಾಡಲಾಗುತ್ತದೆ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಹಾಗಾದ್ರೆ, ಇದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ.

ಏಷ್ಯಾಕಪ್ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಭಾರತ-ಪಾಕಿಸ್ತಾನ ಫೈನಲ್ ಪ್ರವೇಶಿಸಿದ್ದು, ಟ್ರೋಫಿಗಾಗಿ ಸೆಣಸಾಟಕ್ಕೆ ಸಜ್ಜಾಗಿವೆ. ಈ ನಡುವೆಯೇ ನರಿಬುದ್ಧಿ ಬಿಡದ ಪಾಪಿ ಪಾಕಿಸ್ತಾನದ ಕೆಲ ಕ್ರಿಕೆಟ್ ಆಟಗಾರರು ಕ್ರಿಕೆಟ್ ಮೈದಾನದಲ್ಲೇ ಹಿಂದಿನ ಪಂದ್ಯಗಳಲ್ಲಿ ಉಗ್ರಸ್ವರೂಪ ತೋರಿ ಅಟ್ಟಹಾಸ ಮೆರೆದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ನಮ್ಮ ಭಾರತದ ಆಟಗಾರರನ್ನು ಕೆಣಕಿದ್ದು, ಇದಕ್ಕೆ ಬ್ಯಾಟಿಂಗ್, ಬೌಲಿಂಗ್ ಮೂಲಕವೇ ತಿರುಗೇಟು ಕೊಡುವ ಕೆಲಸವನ್ನು ಟೀಂ ಇಂಡಿಯಾ ಆಟಗಾರರು ಮಾಡಿದ್ದಾರೆ.
ಇನ್ನೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ಪರ ಘೋಷಣೆ ಕೂಡ ಎದ್ದಿದ್ದು, ಇದಕ್ಕೆ ಫೈನಲ್‌ನಲ್ಲಿ ತಮ್ಮ ಸ್ಫೋಟಕ ಆಟದ ಮೂಲಕ ಪ್ರತ್ಯುತ್ತರ ಕೊಡಲು ಇಂದು ಸೂರ್ಯ ಕುಮಾರ್ ಯಾದವ್ ಪಡೆ ಸಜ್ಜಾಗಿದೆ. ಅದರಲ್ಲೂ ಯುವ ಆಟಗಾರರು ನರಿಬುದ್ಧಿ ತೋರುತ್ತಿರುವ ಪಾಕ್ ಆಟಗಾರರಿಗೆ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ತಿರುಗೇಟು ಕೊಡಲು ಕಾಯುತ್ತಿದ್ದಾರೆ.
ಏಷ್ಯಾಕಪ್ 2025ರಲ್ಲಿ ಲೀಗ್, ಸೂಪರ್ ಫೋರ್ ಹಂತದಲ್ಲಿ ಭಾರತ -ಪಾಕಿಸ್ತಾನ ಮುಖಾಮುಖಿ ಆಗಿದೆ. ಇದೀಗ 3ನೇ ಬಾರಿಗೆ ಫೈನಲ್ ಪಂದ್ಯದಲ್ಲಿ ಹೋರಾಟ ನಡೆಸಲಿವೆ. ಏಷ್ಯಾಕಪ್ ಫೈನಲ್ ಪಂದ್ಯ ಇಂದು (ಸೆಪ್ಟಂಬರ್ 28) ನಡೆಯಲಿದ್ದು, ಈ ಪಂದ್ಯ ಭಾರೀ ಕುತೂಹಲ ಹೆಚ್ಚಿಸಿದೆ. ಇದೇ ತಿಂಗಳ ಸೆಪ್ಟೆಂಬರ್ 9ರಂದು ಏಷ್ಯಾಕಪ್ ಟೂರ್ನಿ ಆರಂಭ ಆಗಿತ್ತು. ಯುಎಇ ಆತಿಥ್ಯವಹಿಸಿರುವ ಈ ಟೂರ್ನಿಯಲ್ಲಿ ಭಾರತ ಅದ್ಭುತ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿದ್ದು, ಪಾಕಿಸ್ತಾನ ಪ್ರಯಾಸದ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಏಷ್ಯಾಕಪ್ 2025ರ ಫೈನಲ್ ಪಂದ್ಯ ಇಂದು ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಇದಕ್ಕೂ ಮುಂಚೆ ರಾತ್ರಿ 7.30ಕ್ಕೆ ಟಾಸ್ ನಡೆಯಲಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೊಳ್ಳಲಿದೆ. ಈ ಪಂದ್ಯ ವೀಕ್ಷಿಸಲು ಭಾರತೀಯರು ಎಲ್ಲಾ ತಯಾರಿ ನಡೆಸಿದ್ದು, ಟೀಂ ಇಂಡಿಯಾ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಈ ಹೈವೋಲ್ಟೇಜ್ ಪಂದ್ಯದ ನೇರಪ್ರಸಾರವನ್ನು ಸೋನಿ ಸ್ಪೋರ್ಟ್‌ನಲ್ಲಿ ವೀಕ್ಷಣೆ ಮಾಡಬಹುದು. ಅಲ್ಲದೆ, ಸೋನಿ ಲೈವ್ ಆ್ಯಪ್ ಹಾಗೂ ಫ್ಯಾನ್ ಕೋಡ್ ಆ್ಯಪ್‌ಗಳಲ್ಲೂ ವೀಕ್ಷಿಸಬಹುದು. ಇನ್ನೂ ಈಗಾಗಲೇ ಮುಖಾಮುಖಿಯಾಗಿರುವ ಪಂದ್ಯಗಳಲ್ಲಿ ಭಾರತ್ ಪಾಕ್ ಅನ್ನು ಹೀನಾಯವಾಗಿ ಸೋಲಿಸಿತ್ತು. ಈ ಎರಡು ಪಂದ್ಯಗಲ್ಲೂ ಹ್ಯಾಡ್‌ಶೇಕ್ ಮಾಡಿರಲಿಲ್ಲ. ಇನ್ನು ಇಂದು ಫೈನಲ್‌ನಲ್ಲಿ ಮತ್ತೆ ಮುಖಾಮುಖಿಯಾಗಲಿದ್ದು, ಈ ಪಂದ್ಯ ಕುತೂಹಲ ಹೆಚ್ಚಿಸಿದೆ.
ಪೆಹಲ್ಗಾಂ ದಾಳಿ ಹಿನ್ನೆಲೆ ಪಾಕ್ ತಂಡದ ಜೊತೆ ಆಡದಂತೆ ಟೀಂ ಇಂಡಿಯಾ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಬಿಸಿಸಿಐ ವಿರುದ್ಧವೂ ತುಂಬಾ ಜನ ಆಕ್ರೋಶ ಹೊರಹಾಕಿದ್ದರು. ಈ ವಿರೋಧಗಳ ನಡುವೆಯೂ ಟೀಂ ಇಂಡಿಯಾ ಆಟವನ್ನು ಮುಂದುವರೆಸಿತು. ಇನ್ನು ಇಂದು ಪಾಕ್ ವಿರುದ್ಧ ಫೈನಲ್ ಪಂದ್ಯದಲ್ಲಿ ಕಾದಾಡಲು ಸಕಲ ತಯಾರಿ ನಡೆಸಿದೆ.
ಪಂದ್ಯದ ಸಮಯ: ರಾತ್ರಿ 8 ಗಂಟೆ
ನೇರಪ್ರಸಾರ: ಸೋನಿ ಸ್ಪೋರ್ಟ್, ಸೋನಿ ಲೈವ್ ಆ್ಯಪ್
ಸ್ಥಳ: ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ












Click it and Unblock the Notifications