
ಕೊಹ್ಲಿಯ ಭವಿಷ್ಯವೇನು ಎನ್ನುವ ಅಭಿಮಾನಿಯ ಪ್ರಶ್ನೆಗೆ ಶಾಹಿದ ಅಫ್ರಿದಿ ಕೊಟ್ಟ ಉತ್ತರ ಏನು ಗೊತ್ತಾ?
ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಏಷ್ಯಾಕಪ್ ಟೂರ್ನಿಯ ಎರಡನೇ ಪಂದ್ಯ, ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಕದನಕ್ಕೆ ದಿನಗಣನೆ ಆರಂಭವಾಗಿದೆ. ಪಂದ್ಯದ ದಿನ ಹತ್ತಿರವಾಗುತ್ತಿದ್ದಂತೆ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮಾಜಿ ಕ್ರಿಕೆಟಿಗರು ಕೂಡ ಎರಡೂ ತಂಡಗಳ ಬಲಾಬಲಗಳ ಲೆಕ್ಕಾಚಾರ ಹಾಕುತ್ತಿದ್ದು, ಟ್ವೀಟ್ ಮಾಡುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ವೇಗದ ಬೌಲರ್ ಶಾಹಿನ್ ಶಾ ಅಫ್ರಿದಿ ಏಷ್ಯಾಕಪ್‌ನಿಂದ ಹೊರಬಿದ್ದಿದ್ದು ಭಾರತದ ಬ್ಯಾಟರ್ ಗಳಿಗೆ ಅನುಕೂಲ ಎಂದು ಟ್ವೀಟ್ ಮಾಡಿದ್ದ ಪಾಕಿಸ್ತಾನದ ಮಾಜಿ ಬೌಲರ್ ವಕಾರ್ ಯೂನಿಸ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಟ್ರೋಲ್‌ಗೆ ಒಳಗಾಗಿದ್ದರು.
ನಾನು ನೀಡುವ ಸಲಹೆಯನ್ನು ಕೊಹ್ಲಿ ಯಾಕೆ ಕೇಳಬೇಕು: ವಿರಾಟ್ ಕೊಹ್ಲಿ ಕುರಿತ ಪ್ರಶ್ನೆಗೆ ಶಾಹಿದ್ ಅಫ್ರಿದಿ ಉತ್ತರ
ಈಗ ಪಾಕಿಸ್ತಾನದ ಮಾಜಿ ಕ್ರಿಕೆಟರ್ ವಿರಾಟ್ ಕೊಹ್ಲಿ ಬಗ್ಗೆ ಮಾಡಿರುವ ಕಮೆಂಟ್ ಭಾರಿ ಸುದ್ದಿಯಾಗುತ್ತಿದೆ. ಫಾರ್ಮ್ ಕಳೆದುಕೊಂಡು ಹಲವರಿಂದ ಟೀಕೆಗೊಳಗಾಗಿರುವ ವಿರಾಟ್ ಕೊಹ್ಲಿಗೆ ಹಲವು ಮಾಜಿ, ಹಾಲಿ ಕ್ರಿಕೆಟರ್ ಗಳು ಬೆಂಬಲ ನೀಡಿದ್ದಾರೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಶತಕವನ್ನು ಗಳಿಸಿ 1000 ದಿನಗಳಾಗಿದೆ. ಈವರೆಗೂ ಒಂದು ಶತಕವನ್ನು ಗಳಿಸದೆ ವಿರಾಟ್ ಕೊಹ್ಲಿ ರನ್ ಬರ ಅನುಭವಿಸುತ್ತಿದ್ದಾರೆ.
ಶಿಸ್ತುಬದ್ದ ಆಹಾರ, ಪ್ರತಿ ದಿನ ವ್ಯಾಯಾಮ : ಫಿಟ್‌ನೆಸ್ ಗುಟ್ಟು ಹೇಳಿದ ವಿರಾಟ್ ಕೊಹ್ಲಿ

ಕೊಹ್ಲಿ ಭವಿಷ್ಯದ ಬಗ್ಗೆ ಅಫ್ರಿದಿ ಉತ್ತರ
ಅಭಿಮಾನಿಯೊಬ್ಬರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಭಾರತದ ಮಾಜಿ ನಾಯಕನ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಅಫ್ರಿದಿ ನೇರವಾಗಿ ಉತ್ತರ ನೀಡಿದ್ದಾರೆ. ವಿರಾಟ್ ಕೊಹ್ಲಿ ಭವಿಷ್ಯ ಅವರ ಕೈಯಲ್ಲೇ ಇದೆ ಎಂದು ಹೇಳಿದ್ದಾರೆ.
ಮತ್ತೊಂದು ಪ್ರಶ್ನೆಯಲ್ಲಿ, ಕೊಹ್ಲಿ ಅವರ ಶತಕದ ಬರವನ್ನು ಯಾವಾಗ ಮುರಿಯುತ್ತಾರೆ ಎಂದು ಅಫ್ರಿದಿಗೆ ಮತ್ತೊಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಅಫ್ರಿದಿ, ಕಠಿಣ ಸಮಯಗಳು ಮಾತ್ರ ದೊಡ್ಡ ಆಟಗಾರರನ್ನು ಹೊರತೆಗೆಯಬಹುದು ಎಂದು ಕೊಹ್ಲಿ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಭಾರತ-ಪಾಕ್ ಪಂದ್ಯದ ಮೇಲೆ ಎಲ್ಲರ ಚಿತ್ತ
ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ ತಮ್ಮ ಪರಿಣಿತಿ ಮಾತ್ರವಲ್ಲದೆ ಅನುಭವವನ್ನು ಕೂಡ ಪ್ರಮುಖ ಪಂದ್ಯಗಳಲ್ಲಿ ಧಾರೆ ಎರೆಯಲಿದ್ದಾರೆ ಎಂದು ಅಫ್ರಿದಿ ಹೇಳಿದ್ದಾರೆ.
ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಫಾರ್ಮ್‌ಗೆ ಮರಳಲು ಉತ್ತಮ ಅವಕಾಶವಿದೆ ಎಂದು ಹೇಳಲಾಗಿದೆ. ಕೊನೆಯ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶದಲ್ಲಿ ಕೊಹ್ಲಿ ಮಿಂಚಿದರೆ ಟೀಕಾಕಾರರ ಬಾಯಿ ಮುಚ್ಚಲಿದೆ.

ಭಾರತ-ಪಾಕ್ ಕೊನೆಯ ಪಂದ್ಯ ನಡೆದಿದ್ದು ಇಲ್ಲೇ
ಭಾರತ ತನ್ನ ಏಷ್ಯಾಕಪ್ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಆಗಸ್ಟ್ 28 ರಂದು ದುಬೈನಲ್ಲಿ ಎದುರಿಸಲಿದೆ. ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದದ್ದು ಇದೇ ಸ್ಟೇಡಿಯಂನಲ್ಲಿ.
2021ರ ಟಿ20 ವಿಶ್ವಕಪ್‌ನಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಟೀಂ ಇಂಡಿಯಾವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ಸೋಲನುಭವಿಸಿದ್ದು ಅದೇ ಪಂದ್ಯದಲ್ಲಿ. ಈಗ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಭಾರತ.

ಎರಡೂ ತಂಡಗಳನ್ನು ಕಾಡುತ್ತಿದೆ ಪ್ರಮುಖ ಬೌಲರ್ ಅನುಪಸ್ಥಿತಿ
ಗಾಯದ ಸಮಸ್ಯೆಯಿಂದ ಭಾರತ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಏಷ್ಯಾಕಪ್ ಪಂದ್ಯಾವಳಿಯಿಂದ ಹೊರಬಿದ್ದ ಬೆನ್ನಲ್ಲೇ, ಪಾಕಿಸ್ತಾನದ ಎಡಗೈ ವೇಗದ ಬೌಲರ್ ಶಾಹಿನ್ ಶಾ ಅಫ್ರಿದಿ ಕೂಡ ಗಾಯದ ಸಮಸ್ಯೆಯಿಂದ ಏಷ್ಯಾಕಪ್ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ.
ಇದೇ ವಿಚಾರಕ್ಕೆ ಪಾಕಿಸ್ತಾನದ ಮಾಜಿ ಬೌಲರ್ ವಕಾರ್ ಯೂನಿಸ್ ಟ್ವೀಟ್ ಮಾಡಿದ್ದರು. ಶಾಹಿನ್ ಶಾ ಅಫ್ರಿದಿ ಏಷ್ಯಾಕಪ್‌ನಲ್ಲಿ ಆಡದಿರುವುದು ಭಾರತದ ಅಗ್ರಕ್ರಮಾಂಕದ ಬ್ಯಾಟರ್ ಗಳಿಗೆ ವರದಾನವಾಗಿದೆ ಎಂದು ಟ್ವೀಟ್ ಮಾಡಿ, ಭಾರತದ ಕ್ರಿಕೆಟ್ ಅಭಿಮಾನಿಗಳಿಂದ ಟ್ರೋಲ್‌ಗೆ ಒಳಗಾಗಿದ್ದರು.