• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾರ್ಮ್ ಹೌಸ್‌ಗೆ ಹೊಸ ಅತಿಥಿಗಳನ್ನು ಬರಮಾಡಿಕೊಂಡ ಧೋನಿ

|
Google Oneindia Kannada News

ರಾಂಚಿ, ಜೂನ್ 13: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಾಣಿ ಪ್ರಿಯ ಎಂಬುದು ಸಾಕಷ್ಟು ಭಾರತೀಯ ಅಭಿಮಾನಿಗಳಿಗೆ ಗೊತ್ತಿದೆ. ಅವರ ಫಾರ್ಮ್‌ ಹೌಸ್‌ನಲ್ಲಿ ಈಗಾಗಲೇ ಕುದುರೆಗಳು, ನಾಯಿಗಳ ದಂಡೇ ಇದೆ. ಇದೀಗ ಆ ಬಳಗಕ್ಕೆ ಮತ್ತೊಂದು ಪ್ರಾಣಿ ಸೇರಿಕೊಂಡಿದೆ.

ಈ ಬಾರಿ ಧೋನಿ ಮೇಕೆಗಳನ್ನು ತಮ್ಮ ಫಾರ್ಮ್‌ಹೌಸ್‌ಗೆ ತಂದಿದ್ದಾರೆ. ಧೋನಿ ಪತ್ನಿ ಸಾಕ್ಷಿ ಸುಂದರವಾಗಿ ಕಾಣುವ ಮೇಕೆಗಳು ಫಾರ್ಮ್‌ಹೌಸ್‌ನಲ್ಲಿ ಓಡಾಡುತ್ತಿರುವ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗರುಡಾ ಏರೋಸ್ಪೇಸ್ ಜೊತೆಗೆ ಕ್ರಿಕೆಟರ್ ಎಂಎಸ್ ಧೋನಿ ಸವಾರಿಗರುಡಾ ಏರೋಸ್ಪೇಸ್ ಜೊತೆಗೆ ಕ್ರಿಕೆಟರ್ ಎಂಎಸ್ ಧೋನಿ ಸವಾರಿ

ಸಾಕ್ಷಿ ಶೇರ್‌ ಮಾಡಿರುವ ರೀಲ್ಸ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫಾರ್ಮ್‌ಹೌಸ್‌ಗೆ ಹೊಸ ಅತಿಥಿಗಳು ಬಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮೇಕೆಯೊಂದು ಕ್ಯಾಮರಾ ಬಳಿ ಬಂದು ಫೋಸ್ ನೀಡುತ್ತಿದ್ದರೆ, ಮತ್ತೊಂದು ಹುಲ್ಲು ತಿನ್ನುತ್ತಾ ನಿಂತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಲಕ್ಷಾಂತರ ಎಂಎಸ್ ಧೋನಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಪ್ರಾಣಿ ಪ್ರೇಮವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವ್ಯವಸಾಯದಲ್ಲೂ ಆಸಕ್ತಿ; ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವ ಎಂಎಸ್ ಧೋನಿ ತಮ್ಮ ಬಿಡುವಿನ ವೇಳೆಯನ್ನು ಫಾರ್ಮ್‌ಹೌಸ್‌ನಲ್ಲಿ ಕಳೆಯುತ್ತಾರೆ. ಇತ್ತೀಚೆಗೆ ಅರ್ಗಾನಿಕ್ ಫಾರ್ಮಿಂಗ್‌ ಕಡೆಗೆ ಆಸಕ್ತಿ ವಹಿಸಿರುವ ಮಾಜಿ ಕ್ರಿಕೆಟರ್, ತಮ್ಮ ಕೋಳಿ ಸಾಕಾಣಿಕೆಯ ಕಾರ್ಯಕ್ಕೂ ಕೈ ಹಾಕಿದ್ದಾರೆ. ಕಡಕ್‌ನಾಥ್‌ ತಳಿಯ ಕೋಳಿ ಸಾಕಾಣಿಕೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿತ್ತು.

ಬೆಂಗಳೂರಿನಲ್ಲಿ ಎಮ್‍ಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಪ್ರಾರಂಭ ಬೆಂಗಳೂರಿನಲ್ಲಿ ಎಮ್‍ಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಪ್ರಾರಂಭ

ಇತ್ತೀಚೆಗೆ ಗರುಡು ಏರೋಸ್ಪೇಸ್ ಪ್ರವೇಟ್ ಲಿಮಿಟೆಡ್‌ ಕಂಪನಿಯ ಮೇಲೆ ಹೂಡಿಕೆ ಮಾಡಿದ್ದರು, ಜೊತೆಗೆ ಆ ಸಂಸ್ಥೆಯ ಬ್ರ್ಯಾಂಡ್‌ ಅಂಬಾಸಿಡರ್ ಆಗಿಯೂ ನೇಮಕವಾಗಿದ್ದರು. ಈ ಸಂಸ್ಥೆ ತಯಾರಿಸುವ ಡ್ರೋನ್‌ಗಳ ಸಹಾಯದಿಂದ ಕೀಟನಾಶಕ, ನೀರು, ರಸಗೊಬ್ಬರವನ್ನು ಬೆಳೆಗಳಿಗೆ ಸಿಂಪಡಿಸಬಹುದು. ಈಗಾಗಲೆ 300 ಡ್ರೋನ್‌ಗಳು ದೇಶದ 26 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ.

After Dogs and Horses , Now Goats Also Enter MS Dhoni Farm House

ಸಿನಿಮಾಗೆ ಬಂಡವಾಳ ಹೂಡಲಿರುವ ಧೋನಿ; ವರದಿಗಳ ಪ್ರಕಾರ ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲಿ ಸಿನಿಮಾ ಕ್ಷೇತ್ರಕ್ಕೂ ಎಂಟ್ರಿಕೊಡಲಿದ್ದಾರೆ ಎಂದು ತಿಳಿದುಬಂದಿದೆ. ನಟಿ ಖ್ಯಾತ ನಟಿ ನಯನತಾರಾ ಅವರ ಸಿನಿಮಾದಲ್ಲಿ ಹಣ ಹೂಡಲಿದ್ದಾರೆ ಎಂಬ ಸುದ್ದಿ.

ತಮಿಳುನಾಡಿನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಧೋನಿ ತಮ್ಮ ಸಿನಿ ಪಯಣವನ್ನು ತಮಿಳಿನಲ್ಲೇ ಆರಂಭಿಸಲು ಮುಂದಾಗಿದ್ದಾರೆ. ಈಗಾಗಲೇ ವ್ಯವಸಾಯ, ಫ್ಯಾಷನ್‌, ಕ್ರಿಕೆಟ್‌ ಅಕಾಡೆಮಿಗಳಲ್ಲಿ ಹೂಡಿಕೆ ಮಾಡಿರುವ ಧೋನಿ ಮನರಂಜನಾ ಕ್ಷೇತ್ರಕ್ಕೂ ಎಂಟ್ರಿಕೊಟ್ಟು ತಮ್ಮ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುವ ಆಲೋಚನೆಯಲ್ಲಿದ್ದಾರೆ.

English summary
Former Indian Captain Mahendra Singh Dhoni bring goats to his Ranchi farmhouse. CSK captain already have 2 horses and 5 dogs in his farmhouse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X