Champions Trophy: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಎದುರಾಳಿಗಳಿಗೆ ಎಚ್ಚರಿಕೆ ಕೊಟ್ಟ ಅಫ್ಘಾನಿಸ್ತಾನ
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ 177 ರನ್‌ಗಳ ಬೃಹತ್ ಗೆಲುವು ಸಾಧಿಸಿದ್ದು, ಇನ್ನೂ ಇಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದುಕೊಂಡಿದೆ. ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಗೆಲುವು ಸಾಧಿಸಿದ್ದ ಅಫ್ಘಾನಿಸ್ತಾನ, ಎರಡನೇ ಪಂದ್ಯದಲ್ಲೂ ಹರಿಣಗಳನ್ನು ಮಟ್ಟಹಾಕಿದೆ. ಈ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಸಾಧನೆ ಮಾಡಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಇನ್ನು ಕೆಲವೇ ತಿಂಗಳು ಇರುವ ಮುನ್ನವೇ ಅಫ್ಘಾನಿಸ್ತಾನ, ಬಲಿಷ್ಠ ತಂಡಗಳಿಗೆ ತನ್ನನ್ನು ಕಡೆಗಣಿಸಬಾರದು ಎನ್ನುವ ಎಚ್ಚರಿಕೆಯ ಸಂದೇಶ ಕೊಟ್ಟಿದೆ.

ಶಾರ್ಜಾದ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಭರ್ಜರಿ ಪ್ರದರ್ಶನ ನೀಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿತು. ರಹಮನುಲ್ಲಾ ಗುರ್ಬಾಜ್ 105 ರನ್ ಗಳಿಸಿದರು. ರಿಯಾಝ್ ಹಸಮ್ 29 ರನ್, ರಹಮತ್ ಶಾ 50 ರನ್ ಗಳಿಸಿದರೆ, ಅಜ್ಮತುಲ್ಲಾಹ್ ಒಮರ್ಜಾಯ್ 50 ಎಸೆತಗಳಲ್ಲಿ 86 ರನ್ ಗಳಿಸಿದರು.
ರಶೀದ್ ಖಾನ್ ಸ್ಪಿನ್ ಮೋಡಿ
312 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನ ಸ್ಪಿನ್ ಬಲೆಗೆ ಬಿದ್ದಿತು. ರಶೀದ್ ಖಾನ್ 9 ಓವರ್ ಗಳಲ್ಲಿ 19 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ನಂಗೆಯಾಲಿಯಾ ಖರೋಟೆ 4 ವಿಕೆಟ್ ಪಡೆದರು. ಅಜ್ಮತುಲ್ಲಾಗ್ ಒಮರ್ಜಾಯ್ 1 ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಪರ ನಾಯಕ ತೆಂಬಾ ಬವುಮಾ 38 ರನ್ ಗಳಿಸಿದರು. ಟೋನಿ ಡೆ ಜೊರ್ಜಿ 31 ರನ್, ರೀಜಾ ಹೆಂಡ್ರಿಕ್ಸ್ 17 ರನ್, ಏಡೆನ್ ಮಾರ್ಕ್ರಮ್ 21 ರನ್ ಗಳಿಸಿದರೆ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲಿಲ್ಲ. 34.2 ಓವರ್ ಗಳಲ್ಲಿ 134 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಐದು ವಿಕೆಟ್ ಪಡೆದ ರಶೀದ್ ಖಾನ್ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಎಚ್ಚರಿಕೆ ಸಂದೇಶ
2025ರಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು ಅಫ್ಘಾನಿಸ್ತಾನ ಕೂಡ ಪಂದ್ಯಾವಳಿಯಲ್ಲಿ ಆಡಲು ಅರ್ಹತೆ ಗಿಟ್ಟಿಸಿಕೊಂಡಿದೆ. ಪಾಕಿಸ್ತಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಅಫ್ಘಾನಿಸ್ತಾನ ಎದುರಾಳಿ ತಂಡಗಳಿಗೆ ಈಗಾಗಲೇ ಎಚ್ಚರಿಕೆ ಸಂದೇಶ ರವಾನಿಸಿದೆ. 2024ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿ ಇತಿಹಾಸ ನಿರ್ಮಿಸಿದ್ದ ಅಫ್ಘಾನಿಸ್ತಾನ, ಚಾಂಪಿಯನ್ಸ್ ಟ್ರೋಫಿಯಲ್ಲಿ ಕೂಡ ಬಲಿಷ್ಠ ತಂಡಗಳಿಗೆ ಆಘಾತ ಕೊಡುವ ಮುನ್ಸೂಚನೆ ಕೊಟ್ಟಿದೆ.












Click it and Unblock the Notifications