Abhishek Sharma: 28 ಎಸೆತಗಳಲ್ಲೇ ಶತಕ; ಸೂರ್ಯನ ಸಿಕ್ಸರ್ ದಾಖಲೆ ಮುರಿದ ಯುವರಾಜ್‌ ಶಿಷ್ಯ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಬರೋಡಾ ತಂಡವನ್ನು ಬರೋಬ್ಬರಿ 349 ರನ್ ಗಳಿಸುವ ಮೂಲಕ ಹೊಸ ದಾಖಲೆ ಬರೆದ ಬೆನ್ನಲ್ಲೇ, ಪಂಜಾಬ್‌ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತೊಂದು ಪಂದ್ಯದಲ್ಲಿ ವೇಗದ ಶತಕ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್‌ರ ಸಿಕ್ಸರ್ ದಾಖಲೆಯನ್ನು ಕೂಡ ಅಭಿಷೇಕ್ ಶರ್ಮಾ ಮುರಿದಿದ್ದಾರೆ.

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮೇಘಾಲಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ ಬಿಗಿ ಬೌಲಿಂಗ್‌ ಎದುರು ರನ್ ಗಳಿಸಲು ಪರದಾಡಿದ ಮೇಘಾಲಯ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತು. ಅರ್ಪಿತ್ ಬತೇವರ 31 ರನ್ ಗಳಿಸಿದರೆ, ಲ್ಯಾರಿ ಸಗ್ಮಾ 21 ರನ್, ಯೋಗೇಶ್ ತಿವಾರಿ 20 ರನ್ ಗಳಿಸಿದರು.

abhishek sharma fastest indian t20 hundred 28 balls

ನಾಯಕ ಅಭಿಷೇಕ್ ಶರ್ಮಾ 4 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ 2 ವಿಕೆಟ್ ಪಡೆದರು. ರಮಣದೀಪ್ ಸಿಂಗ್ 2 ವಿಕೆಟ್ ಪಡೆದರೆ, ಅನ್ವಾನಿ ಕುಮಾರ್, ಹಪ್ರೀತ್ ಬ್ರಾರ್ ಮತ್ತು ದಲಿವಾಲ್ ತಲಾ 1 ವಿಕೆಟ್ ಪಡೆದರು.

ಅಭಿಷೇಕ್ ಶರ್ಮಾ ಅಬ್ಬರ

143 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಪಂಜಾಬ್ 9.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 144 ರನ್ ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಹರ್ನೂನ್ ಸಿಂಗ್ 6 ರನ್ ಗಳಿಸಿದರೆ, ಸಾಲಿ ಅರೋರಾ 1 ರನ್ ಗಳಿಸಿ ಔಟಾದರು. ಸೋಹ್ರಾಬ್ ಧಲಿವಾಲ್ 15 ಎಸೆತಗಳಲ್ಲಿ 22 ರನ್ ಗಳಿಸಿದರೆ, ನಾಯಕ ಅಭಿಷೇಕ್ ಶರ್ಮಾ ಕೇವಲ 29 ಎಸೆತಗಳಲ್ಲಿ 8 ಬೌಂಡರಿ 11 ಸಿಕ್ಸರ್ ಸಹಿತ 365.52 ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 106 ರನ್ ಗಳಿಸಿದರು.

28 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ವೇಗದ ಶತಕ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಗುಜರಾತ್ ತಂಡದ ಆರಂಭಿಕ ಆಟಗಾರ ಇತ್ತೀಚೆಗೆ ಮೇಘಾಲಯದ ವಿರುದ್ಧ 28 ಎಸೆತಗಳಲ್ಲಿ ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದರು, ಈ ಸಾಧನೆಯನ್ನು ಅಭಿಷೇಕ್ ಶರ್ಮಾ ಕೂಡ ಈ ಸಾಧನೆಯ ಪಟ್ಟಿಗೆ ಸೇರ್ಪಡೆಯಾದರು.

ಎಸ್ತೋನಿಯಾದ ಸಾಹಿಲ್ ಚೌಹಾಣ್ 27 ಎಸೆತಗಳಲ್ಲಿ ಶತಕ ಬಾರಿಸಿದ್ದು ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ವೇಗದ ಶತಕ ಎನಿಸಿಕೊಂಡಿದೆ. ಅಭಿಷೇಕ್ ಶರ್ಮಾ ಮತ್ತು ಉರ್ವಿಲ್ ಪಟೇಲ್ ಎರಡನೇ ಸ್ಥಾನದಲ್ಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕದ ಸಾಧನೆ

ಸಾಹಿಲ್ ಚೌಹಾಣ್‌ (27 ಎಸೆತ) ಎಸ್ತೋನಿಯಾ vs ಸಿಪ್ರಸ್ (2024)
ಅಭಿಷೇಕ್ ಶರ್ಮಾ (28 ಎಸೆತ) ಪಂಜಾಬ್ vs ಮೇಘಾಲಯ (2024)
ಉರ್ವಿಲ್ ಪಟೇಲ್ (28 ಎಸೆತ) ಗುಜರಾತ್ vs ತ್ರಿಪುರಾ (2024)
ಕ್ರಿಸ್ ಗೇಲ್ (30 ಎಸೆತ) ಆರ್ ಸಿಬಿ vs ಪುಣೆ ವಾರಿಯರ್ಸ್ (2013)
ರಿಷಬ್ ಪಂತ್ (32 ಎಸೆತ) ದೆಹಲಿ vs ಹಿಮಾಚಲ ಪ್ರದೇಶ (2018)

ಸೂರ್ಯಕುಮಾರ್ ಯಾದವ್ ಸಿಕ್ಸರ್ ದಾಖಲೆ

ಅಬಿಷೇಕ್ ಶರ್ಮಾ ಸೂರ್ಯಕುಮಾರ್ ಯಾದವ್‌ರ ಸಿಕ್ಸರ್ ದಾಖಲೆಯನ್ನು ಕೂಡ ಮುರಿದಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಇದೀಗ ಅಭಿಷೇಕ್ ಶರ್ಮಾ ಅವರ ಹೆಸರಿನಲ್ಲಿದೆ. 2024ರಲ್ಲಿ ಅಭಿಷೇಕ್ ಶರ್ಮಾ 38 ಇನ್ನಿಂಗ್ಸ್‌ಗಳಲ್ಲಿ 87 ಸಿಕ್ಸರ್ ಬಾರಿಸಿದ್ದರೆ, 2022ರಲ್ಲಿ ಸೂರ್ಯಕುಮಾರ್ ಯಾದವ್ 41 ಇನ್ನಿಂಗ್ಸ್‌ಗಳಲ್ಲಿ 85 ಸಿಕ್ಸರ್ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+