IPL Mega Auction 2025: ಕರ್ನಾಟಕದ ಈ ಸ್ಫೋಟಕ ಬ್ಯಾಟರ್​​ಗೆ ಕೋಟಿ ಕೋಟಿ ಹಣ ಗ್ಯಾರಂಟಿ!

ಐಪಿಎಲ್ 2025ರ ಮೆಗಾಹರಾಜಿಗೆ ಈಗಾಗಲೇ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿವೆ. ಉತ್ತಮ ಆಟಗಾರರ ಹುಡುಕಾಟ ಶುರುವಾಗಿದ್ದು, ಬಲಿಷ್ಠ ತಂಡ ಕಟ್ಟಲು ಎಲ್ಲಾ ಫ್ರಾಂಚೈಸಿಗಳಿಗೂ ಮೆಗಾ ಹರಾಜು ಸುವರ್ಣ ಅವಕಾಶವಾಗಿದೆ. ಹಿರಿಯ ಆಟಗಾರರ ಜೊತೆಗೆ ಯುವ ಸ್ಫೋಟಕ ಬ್ಯಾಟರ್ ಗಳು ಈ ಬಾರಿ ಐಪಿಎಲ್‌ನಲ್ಲಿ ಕೋಟಿ ಕೋಟಿ ದುಡಿಯುವ ಲೆಕ್ಕಾಚಾರದಲ್ಲಿದ್ದಾರೆ. ಕರ್ನಾಟಕದ ಆಟಗಾರರು ಕೂಡ ಈ ಬಾರಿ ಐಪಿಎಲ್‌ನಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ.

ಸದ್ಯ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಯಲ್ಲಿ ಹಲವು ಆಟಗಾರರು ಈಗಾಗಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ದೇಶೀಯ ಟೂರ್ನಿಗಳನ್ನು ಫ್ರಾಂಚೈಸಿಗಳು ಕೂಡ ಗಮನಿಸುತ್ತಿದ್ದು, ಕೆಲವು ಆಟಗಾರರ ಮೇಲೆ ಕಣ್ಣಿಟ್ಟಿವೆ. ಮಹಾರಾಜ ಟ್ರೋಫಿಯಲ್ಲಿ ಅಬ್ಬರಿಸುತ್ತಿರುವ ಶಿವಮೊಗ್ಗ ಲಯನ್ಸ್ ತಂಡದ ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ ಅವರು ಈ ಬಾರಿ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಪಡೆಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

Abhinav Manohar Could Earn Crores in IPL 2025 Mega Auction

ಅಭಿನವ್ ಮನೋಹರ್ 2022ರ ಐಪಿಎಲ್‌ ಹರಾಜಿನಲ್ಲಿ 2.60 ಕೋಟಿ ರೂಪಾಯಿ ಮೊತ್ತಕ್ಕೆ ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿದ್ದರು. ಕಳೆದ ಮೂರು ಆವೃತ್ತಿಯಲ್ಲಿ ಅವರು ಗುಜರಾತ್ ಟೈಟಾನ್ಸ್ ತಂಡಕ್ಕೆ ಆಡಿದ್ದಾರೆ. ಈ ಬಾರಿ ಮೆಗಾ ಹರಾಜಿಗೆ ಮುನ್ನ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದ್ದು, ಮೆಗ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ.

ಸ್ಫೋಟಕ ಬ್ಯಾಟರ್

ಮಹಾರಾಜ ಟ್ರೋಫಿ 2024ರ ಪಂದ್ಯಾವಳಿಯಲ್ಲಿ ಅಭಿನವ್ ಮನೋಹರ್ ಆಟ ನೋಡಿದ ಯಾರೇ ಆದರೂ ಈತ ಭರವಸೆಯ ಬ್ಯಾಟರ್ ಎಂದೇ ಹೇಳುತ್ತಿದ್ದಾರೆ. ಈ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅಭಿನವ್ ಮೊದಲ ಸ್ಥಾನದಲ್ಲಿದ್ದಾರೆ. 8 ಪಂದ್ಯಗಳಲ್ಲಿ 62 ಸರಾಸರಿ ಮತ್ತು 186 ಸ್ಟ್ರೈಕ್‌ರೇಟ್‌ನಲ್ಲಿ 372 ರನ್ ಗಳಿಸಿದ್ದಾರೆ. ಅವರ ಈ ಭರ್ಜರಿ ರನ್‌ಗಳಲ್ಲಿ 16 ಬೌಂಡರಿ ಇದ್ದರೆ ಬರೋಬ್ಬರಿ 36 ಸಿಕ್ಸರ್ ಗಳಿವೆ.

ಭಾನುವಾರ ನಡೆದ ಮಂಗಳೂರು ಡ್ರಾಗನ್ಸ್ ವಿರುದ್ಧದ ಪಂದ್ಯದಲ್ಲಿ ಕೂಡ ಅಭಿನವ್ ಮನೋಹರ್ 25 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಸಹಿತ 43 ರನ್ ಸಿಡಿಸಿ ಶಿವಮೊಗ್ಗ ಲಯನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆರ್ ಸಿಬಿ ತಂಡಕ್ಕೆ ಬರ್ತಾರ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ನಿರೀಕ್ಷೆ ಇದೆ. ಪದೇ ಪದೇ ಕರ್ನಾಟಕ ಆಟಗಾರರನ್ನು ಕಡೆಗಣಿಸಿ ಟೀಕೆಗೆ ಗುರಿಯಾಗುತ್ತಿದ್ದ ಫ್ರಾಂಚೈಸಿ ಮೆಗಾಹರಾಜಿನಲ್ಲಿ ಪ್ರಮುಖ ಕರ್ನಾಟಕ ಆಟಗಾರರನ್ನು ಖರೀದಿ ಮಾಡುವ ಬಗ್ಗೆ ಯೋಚಿಸಬಹುದು. ಅಭಿನವ್ ಮನೋಹರ್ ಕೂಡ ಆರ್ ಸಿಬಿಗೆ ಉತ್ತಮ ಆಯ್ಕೆಯಾಗಲಿದ್ದಾರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಅಪಾರ ಅನುಭವ ಇರುವ ಕಾರಣ, ಅವರನ್ನು ಫಿನಿಶರ್ ಆಗಿ ಕೂಡ ಬಳಸಿಕೊಳ್ಳಬಹುದು. ತಂಡದ ಮ್ಯಾನೇಜ್‌ಮೆಂಟ್‌ ಬದಲಾವಣೆಯಾಗಿದ್ದು ದಿನೇಶ್ ಕಾರ್ತಿಕ್ ಮೆಂಟರ್ ಆಗಿರುವ ಕಾರಣ, ಸ್ಥಳೀಯ ಆಟಗಾರರಿಗೆ ಪ್ರಾಮುಖ್ಯತೆ ಸಿಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+