ಧಾರವಾಡ; ರಾಷ್ಟ್ರೀಯ ಯುವಜನೋತ್ಸವ; ವಿಶೇಷ ಸಾಹಸ ಕ್ರೀಡೆಗಳ ಪ್ರದರ್ಶನ
ಬೆಂಗಳೂರು, ಜನವರಿ 11; ಧಾರವಾಡ ನಗರದಲ್ಲಿ ಜನವರಿ 12 ರಿಂದ 16ರ ತನಕ 26ನೇ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದೆ. ಇದು ಹಲವು ವಿಶೇಷತೆ ಹಾಗೂ ಪ್ರಥಮಗಳಿಂದ ಕೂಡಿದೆ. ಸಾಹಸ ಕ್ರೀಡೆಗಳು ಹಾಗೂ ಜಲ ಕ್ರೀಡೆಗಳು ಸಹ ಪ್ರದರ್ಶನಗೊಳ್ಳಲಿವೆ.
ಗುರುವಾರ ಪ್ರಧಾನಿ ನರೇಂದ್ರ ಮೋದಿ 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಮಾಡಲಿದ್ದಾರೆ. ಯುವಜನೋತ್ಸವದ ಅಂಗವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಇದೇ ಪ್ರಥಮಬಾರಿಗೆ ಸ್ಕೂಬಾಡೈವಿಂಗ್ ಮತ್ತು ದೆಹಲಿಯ ಭಾರತೀಯ ಪರ್ವತಾರೋಹಣ ಸಂಸ್ಥೆ ಸಹಯೋಗದಲ್ಲಿ ಶಿಲಾರೋಹಣ ಹಾಗೂ ಜಕ್ಕೂರ ರಾಷ್ಟ್ರೀಯ ವೈಮಾನಿಕ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ವೈಮಾನಿಕ ತರಬೇತಿ ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ 4 ಗಂಟೆಗಳ ಪ್ರಾಯೋಗಿಕ ಮತ್ತು ಥಿಯರಿ ಕ್ಲಾಸ್‍ಗಳನ್ನು ನಡೆಸುವ ಮೂಲಕ ಕ್ರ್ಯಾಷ್ ಕೋರ್ಸ್‍ಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ನೋಂದಾಯಿತ ಯುವ ಸ್ಪರ್ಧಾಳುಗಳು ಯುವಕ, ಯುವತಿಯರಿಗೆ ಭಾಗವಹಿಸಲು ಅವಕಾಶವಿದೆ. ಪ್ರತಿದಿನ ಕೇವಲ 50 ಜನರಿಗೆ ಮಾತ್ರ ಅವಕಾಶವಿರುತ್ತದೆ.
ಕೆಸಿಡಿ ಆವರಣದ ಸೃಜನಾ ರಂಗಮಂದಿರ ಪಕ್ಕದ ಖಾಲಿ ಸ್ಥಳದಲ್ಲಿ ವೈಮಾನಿಕ ತರಬೇತಿಗೆ ಸಣ್ಣ ಪ್ರಮಾಣದ ವಿಮಾನ ನಿಲ್ದಾಣ ಮತ್ತು ಶಿಲಾರೋಹಣ ತರಬೇತಿಗೆ 32 ಅಡಿ ಉದ್ದದ ಕೃತಕ ಗೋಡೆಯನ್ನು ನಿರ್ಮಿಸಲಾಗಿದೆ. ಯುವಜನೋತ್ಸವದ 5 ದಿನಗಳ ಅವಧಿಯಲ್ಲಿ ವೈಮಾನಿಕ, ಶಿಲಾರೋಹಣ ಮತ್ತು ಸ್ಕೂಬಾಡೈವಿಂಗ್ ಸೇರಿ ಒಟ್ಟು ಸುಮಾರು 700 ಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.

ಆಸಕ್ತರಿಗೆ ವೈಮಾನಿಕ ತರಬೇತಿ
ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಆಸಕ್ತ ಯುವಕರಿಗೆ ವೈಮಾನಿಕ ಕ್ಷೇತ್ರದ ಉದ್ಯೋಗ ಅವಕಾಶಗಳನ್ನು ಪರಿಚಯಿಸುವ ಮತ್ತು ಅಭಿರುಚಿ ಮೂಡಿಸುವ ಉದ್ದೇಶದಿಂದ ಜಕ್ಕೂರು ರಾಷ್ಟ್ರೀಯ ವೈಮಾನಿಕ ತರಬೇತಿ ಶಾಲೆಯ ಸಹಯೋಗದಲ್ಲಿ ವೈಮಾನಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ಬೆಳಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ತರಬೇತಿ ನಡೆಯಲಿದ್ದು, ತರಬೇತಿ ಸಂದರ್ಭದಲ್ಲಿ ಎರಡು ಆಸನದ ವಿಮಾನವನ್ನು ಬಳಸಲಾಗುತ್ತಿದೆ. ಇದು ಜಕ್ಕೂರು ತರಬೇತಿ ಶಾಲೆಯ ಸಣ್ಣ ವಿಮಾನವಾಗಿದ್ದು, ತರಬೇತಿ ಶಾಲೆಯ ಅಧಿಕಾರಿಗಳೇ ತರಬೇತಿ ನೀಡುತ್ತಾರೆ. ಯುವಸಮೂಹದಲ್ಲಿ ಪೈಲಟ್ ಆಗಲು ಬೇಕಾಗಿರುವ ಅರ್ಹತೆ, ಅವಕಾಶಗಳು ಮತ್ತು ದೇಶ ಸೇವೆಯ ಮಹತ್ವವನ್ನು ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರಆಯೋಜಿಸಲಾಗಿದೆ.

ಸ್ಕೂಬಾ ಡೈವಿಂಗ್ ತರಬೇತಿ
ಇಂದು ಭಾರತೀಯ ಜಲಪಡೆಯಲ್ಲಿ ಸೇವೆ ಸಲ್ಲಿಸಲು ಯುವಕರಿಗೆ ಸಾಕಷ್ಟು ಅವಕಾಶಗಳಿವೆ. ಆದರೆ ಮಾಹಿತಿ ಕೊರತೆಯಿಂದಾಗಿ ಸಾಕಷ್ಟು ಅವಕಾಶಗಳಿಂದ ಯುವಸಮೂಹ ವಂಚಿತವಾಗುತ್ತಿದೆ. ಆದ್ದರಿಂದ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯು ಸ್ಪರ್ಧಾಳುಗಳಿಗೆ ಮತ್ತು ಇತರರಿಗೆ ಸ್ಕೂಬಾಡೈವಿಂಗ್ ತರಬೇತಿಯನ್ನು ಆಯೋಜಿಸುತ್ತಿದೆ.
ಹುಬ್ಬಳ್ಳಿಯ ಎಪಿಎಂಸಿ ಹತ್ತಿರದ ಶಿವಗಿರಿಯಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಈಜು ಕೋಳದಲ್ಲಿ ಸ್ಕೂಬಾಡೈವಿಂಗ್ ತರಬೇತಿ ನಡೆಯಲಿದೆ. ಸುಮಾರು 16 ಅಡಿ ಆಳವಿರುವ ಈ ಈಜು ಕೋಳದಲ್ಲಿ ತರಬೇತಿ ನೀಡಲಾಗುತ್ತಿದೆ. ಜಲ ಸುರಕ್ಷತೆ, ಜಲ ಸಾಹಸದಲ್ಲಿ ಇರುವ ಅವಕಾಶ, ಉದ್ಯೋಗವಕಾಶಗಳು ಮತ್ತು ಸ್ಕೂಬಾಡೈವಿಂಗ್ ಸೇರಿದಂತೆ ಜಲಸಾಹಸದಲ್ಲಿ ಬಳಸುವ ಸಲಕರಣೆಗಳನ್ನು ಪರಿಚಯಿಸಲಾಗುತ್ತದೆ. ಇಡೀ ವಿಶ್ವದಲ್ಲಿ ಗಮನ ಸೆಳೆದಿರುವ ದೆಹಲಿ ಮೂಲದ ನಿವೃತ್ತ ಕರ್ನಲ್ ಆನಂದ ಸ್ವರೂಪ ಅವರು ಸ್ಕೂಬಾಡೈವಿಂಗ್ ತರಬೇತಿಯನ್ನು ನೀಡಲಿದ್ದಾರೆ.

ವಾಟರ್ ಸ್ಕೂಟರ್, ಸ್ಪೀಡ್ ಬೋಟ್
ಜಲಕ್ರೀಡೆಗಳಲ್ಲಿ ಜೆಟ್‍ಸ್ಕೀ (ವಾಟರ್ ಸ್ಕೂಟರ್ ಬಳಕೆ), ಸ್ಪೀಡ್ ಬೋಟ್, ಕಯಾಕ್ (ಹುಟ್ಟು ಹಾಕುವ ಬೋಟ್), ಗಾಳಿ ತುಂಬಿದ ಬೋಟ್ ಮತ್ತು ಬನಾನ್ ರೈಡ್, ಬಂಪಿ ರೈಡ್‌ಗಳನ್ನು ಆಯೋಜಿಸಲಾಗುತ್ತಿದೆ. ಯುವಜನೋತ್ಸವಕ್ಕೆ ನೋಂದಣಿ ಆಗಿರುವವರು ಉಚಿತವಾಗಿ ಪಾಲ್ಗೊಳ್ಳಬಹುದು ಮತ್ತು ಯಾವುದೇ ವಯಸ್ಸಿನ ಸಾರ್ವಜನಿಕರು ನಿಗದಿತ ದರ ನೀಡಿ ಈ ಎಲ್ಲ ಜಲಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸಾಹಸ ಕ್ರೀಡೆಗಳಲ್ಲಿ ಮತ್ತೊಂದು ಹೆಸರಾಗಿರುವ ಮೌಂಟೆನ್ ಬೈಕ್ ರೈಡಿಂಗ್ ಅನ್ನು ಸಹ ಯುವಜನೋತ್ಸವದಲ್ಲಿ ಆಯೋಜಿಸಲಾಗಿದೆ. ಈ ಕ್ರೀಡೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಂಭಾಗದಲ್ಲಿರುವ ಸಪ್ತ ಗುಡ್ಡಗಳ ಪ್ರದೇಶದಲ್ಲಿ ಸಂಘಟಿಸಲಾಗುತ್ತಿದೆ. ಇಲ್ಲಿಯೂ ಸಹ ಸಾರ್ವಜನಿಕರಿಗೆ ನಿಗದಿತ ದರ ನೀಡಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಸಾಹಸ ಕ್ರೀಡೆಗಳ ಮಳಿಗೆ ಸ್ಥಾಪನೆ
ಯುವಜನೋತ್ಸವದಲ್ಲಿ ಭಾಗವಹಿಸುವ ಯುವ ಸಮೂಹಕ್ಕೆ ಮತ್ತು ಯುವಜನೋತ್ಸವಕ್ಕೆ ಸಾಕ್ಷಿಯಾಗಲು ಆಗಮಿಸುವ ಸಾರ್ವಜನಿಕರಿಗೆ ಭಾರತೀಯ ರಕ್ಷಣಾ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶದಿಂದ ದೆಹಲಿಯ ಭಾರತೀಯ ಪರ್ವತಾರೋಹಣ ಸಂಸ್ಥೆ ಮತ್ತು ಜಕ್ಕೂರಿನ ರಾಷ್ಟ್ರೀಯ ವೈಮಾನಿಕ ತರಬೇತಿ ಶಾಲೆ ಹಾಗೂ ಭಾರತೀಯ ಸೈನ್ಯದ ಶಾಖೆ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಮಳಿಗೆಗಳನ್ನು ಸ್ಥಾಪಿಸಲಿದೆ.
ಈ ಮಳಿಗೆಗಳಲ್ಲಿ ಆಯಾ ಕ್ಷೇತ್ರದ ಸಾಹಸಿಗರು, ಸಾಧಕರು ಮತ್ತು ಮಾದರಿ ವ್ಯಕ್ತಿಗಳು ಭಾಗವಹಿಸಿ ಸಾರ್ವಜನಿಕರಲ್ಲಿ ಸ್ವಾಭಿಮಾನ ಮತ್ತು ಪ್ರೇರಣೆ ನೀಡಲಿದ್ದಾರೆ. ಈ ಎಲ್ಲ ಪ್ರಯತ್ನಗಳನ್ನು ರಾಷ್ಟೀಯ ಯುವಜನೋತ್ಸವದಲ್ಲಿ ಪ್ರಥಮ ಬಾರಿಗೆ ಮಾಡಲಾಗುತ್ತಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications