ಕಷ್ಟಕ್ಕೆ ಸ್ಪಂದಿಸುವ ವಿಷಯದಲ್ಲಿ ರಾಜಕಾರಣ ಬೇಡ; ವಿಶ್ವೇಶ್ವರ ಹೆಗಡೆ ಕಾಗೇರಿ
ಶಿರಸಿ, ಆಗಸ್ಟ್ 13: "ಜನರ ಸಂಕಷ್ಟಕ್ಕೆ ಸ್ಪಂದಿಸುವ ವಿಷಯದಲ್ಲಿ ರಾಜಕಾರಣ ಮಾಡುವುದು ಬೇಡ. ಯಾರೇ ಸಂಕಷ್ಟದಲ್ಲಿದ್ದರೂ ತಕ್ಷಣ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸಲು ಸೂಚಿಸಲಾಗಿದೆ" ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. "ನೆರೆ ಸಂತ್ರಸ್ತರಿಗೆ ತಕ್ಷಣದ ಸಹಾಯಕ್ಕಾಗಿ ತಹಶೀಲ್ದಾರರನ್ನು ಸಂಪರ್ಕಿಸಬಹುದು" ಎಂದರು.
ಉತ್ತರ ಕನ್ನಡ ಜಿಲ್ಲೆಯನ್ನು ನಿರ್ಲಕ್ಷಿಸಲಾಗುತ್ತಿದೆಯೆಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಉತ್ತರಕನ್ನಡ ಜಿಲ್ಲೆಯ ಪರಿಸ್ಥಿತಿ ಮುಖ್ಯಮಂತ್ರಿಯವರ ಗಮನದಲ್ಲಿದೆ. ಅವಕಾಶಕ್ಕನುಗುಣವಾಗಿ ಪ್ರಾತಿನಿಧ್ಯ ನೀಡುತ್ತಿದ್ದಾರೆ. ಇದೀಗ ಜನರು ತೀವ್ರ ಸಂಕಷ್ಟದಲ್ಲಿರುವಾಗ ಇಂತಹ ರಾಜಕಾರಣ ಮಾಡುವುದು ಬೇಡ. ಜನರ ಸಂಕಷ್ಟಗಳಿಗೆ ಎಲ್ಲರೂ ಸೇರಿ ಸ್ಪಂದಿಸೋಣ" ಎಂದರು.

ಇದೇ ಸಂದರ್ಭದಲ್ಲಿ ಶಿರಸಿಯ ವಿವಿಧ ಸಂಘಟನೆಗಳು ನೆರೆಹಾವಳಿಯ ಸಂತ್ರಸ್ತರಿಗೆ ಸಹಾಯಧನದ ದೇಣಿಗೆಗಳನ್ನು ಹಸ್ತಾಂತರಿಸಿದರು.












Click it and Unblock the Notifications