ಕಾರವಾರದ ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆ ಮಜಾ

Subscribe to Oneindia Kannada

ಕಾರವಾರ, ಆಗಸ್ಟ್, 16: ರಾಜ್ಯದ ಭಾರೀ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕಾಳಿ ಜಲಸಾಹಸ ಕೇಂದ್ರಕ್ಕೆ ಚಾಲನೆ ನೀಡಿದರು.

ಕಾಳಿ ನದಿಯ ದಂಡೆಯಲ್ಲಿರುವ ಜಲಸಾಹಸ ಕ್ರೀಡಾ ಕೇಂದ್ರದ ಕಟ್ಟಡ ಸರಿಯಾದ ನಿರ್ವಹಣೆ ಇಲ್ಲದೇ ಸಂಪೂರ್ಣ ದುಃಸ್ಥಿತಿಯಲ್ಲಿತ್ತು. ಅದನ್ನು ಅಭಿವೃದ್ಧಿ ಪಡಿಸಿರುವ ರಾಜ್ಯ ಸರ್ಕಾರ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿದೆ.[ಮಡಿಕೇರಿಯ ಅಜ್ಞಾತ ಜಲಧಾರೆ ಹಾಲೇರಿ ಫಾಲ್ಸ್]

Karwar: Minister R V Deshpande inaugurates water sports at Kali river

ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿದ್ದ ಕೇಂದ್ರಕ್ಕೆ ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ ಮರುಜೀವ ನೀಡಲು ಮುಂದಾಗಿತ್ತು. ಈಗ ಕೇಂದ್ರವನ್ನು ಪುನಶ್ಚೇತನಗೊಳಿಸಿರುವ ಪ್ರವಾಸೋದ್ಯಮ ಇಲಾಖೆ ಸಾಹಸ ಕ್ರೀಡೆಗಳಿಗೆ ಅನುವು ಮಾಡಿಕೊಟ್ಟಿದೆ.[ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್‌ನತ್ತ ಪ್ರವಾಸಿಗರ ದೌಡು]

Karwar: Minister R V Deshpande inaugurates water sports at Kali river

ಕೇಂದ್ರಕ್ಕೆಚಾಲನೆ ನೀಡಿದ ನಂತರ ಸ್ವತಃ ಸಚಿವ ಆರ್ ವಿ ದೇಶಪಾಂಡೆ ಸಾಹಸ ಕ್ರೀಡೆಯ ಮಜಾ ಅನುಭವಿಸಿದರು. ನದಿಯಲ್ಲಿ ಬೋಟಿಂಗ್ ಮಾಡಿದರು. ಕಟ್ಟಡದ ಜೊತೆಗೆ ಪಾರ್ಕಿಂಗ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ರೀವರ್‌ ರಾಫ್ಟಿಂಗ್, ವಿಂಡ್‌ ಸರ್ಫೇಸ್‌, ಕೆನೊ ಮುಂತಾದ ಜಲಸಾಹಸ ಕ್ರೀಡಾ ತರಬೇತಿಗಳನ್ನು ನೀಡಲು ಯೋಚಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karwar: Large Scale Industry Minister R V Deshpande inaugurated water sports at Karwar, Kali river. The minister laid emphasis on the need to conserve environment when promoting tourism.
Please Wait while comments are loading...