ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್ ಐಆರ್

By: ಅನುಷಾ ರವಿ
Subscribe to Oneindia Kannada

ಶಿರಸಿ, ಜನವರಿ 6: ಶಿರಸಿ ಪೊಲೀಸರು ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಸಂಸದರ ತಾಯಿ ಚಿಕಿತ್ಸೆಗಾಗಿ ದಾಖಲಾಗಿದ್ದ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಈ ಕೃತ್ಯ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಈ ಘಟನೆ ಜನವರಿ 2ರಂದು ನಡೆದಿತ್ತು. ಅದರೆ ತಕ್ಷಣವೇ ಯಾವ ದೂರು ದಾಖಲಾಗಿರಲಿಲ್ಲ.

ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಐಪಿಸಿ ಸೆಕ್ಷನ್ 341, 323 ಮತ್ತು 504ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ತಮ್ಮ ತಾಯಿಯ ಚಿಕಿತ್ಸೆಗೆ ತಕ್ಷಣ ಸ್ಪಂದಿಸಲಿಲ್ಲ ಎಂದು ಆಕ್ರೋಶಗೊಂಡು ಅನಂತ್ ಕುಮಾರ್ ಹೆಗಡೆ ಅವರು ಇಬ್ಬರು ವೈದ್ಯರು ಸೇರಿದಂತೆ ಖಸಗಿ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಆ ನಂತರ ಅದಕ್ಕಾಗಿ ಕ್ಷಮೆ ಕೇಳಿದ್ದರು.[ಸಂಸದ ಅನಂತ ಕುಮಾರ್ ಹೆಗಡೆಯಿಂದ ವೈದ್ಯರ ಮೇಲೆ ಹಲ್ಲೆ]

Ananthkumar hegde

ಆಸ್ಪತ್ರೆಯವರು ಆರಂಭದಲ್ಲಿ ದೂರು ದಾಖಲಿಸಲು ಹಿಂಜರಿದಿದ್ದರು. ಆದರೆ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿದ್ದಾರೆ. ಸಂಸದರ ಆಪ್ತ ಮೂಲಗಳ ಪ್ರಕಾರ, ಅನಂತ್ ಕುಮಾರ್ ಹೆಗಡೆ ಅವರ ತಾಯಿಯನ್ನು ವೈದ್ಯರು ನಾಲ್ಕು ಗಂಟೆಗಳ ಕಾಲ ಚಿಕಿತ್ಸೆ ನೀಡದೆ ಕಾಯಿಸಿದ್ದಾರೆ. ಇದು ಕೋಪಕ್ಕೆ ಕಾರಣವಾಗಿದೆ.

ಅದರೆ, ಈ ಆರೋಪವನ್ನು ಆಸ್ಪತ್ರೆಯವರು ನಿರಾಕರಿಸಿದ್ದಾರೆ. ಅನಂತ್ ಕುಮಾರ್ ಹೆಗಡೆ ಮೇಲೆ ಈ ಹಿಂದೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ದೂರು ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Following a complaint, Sirsi police in Karnataka registered an FIR against BJP MP Ananthkumar hegde. The MP is accused of assaulting staff of a hospital where his mother was admitted for treatment. The BJP leader's hooliganism was caught on CCTV camera installed inside the hospital.
Please Wait while comments are loading...