ಭಾರೀ ಮಳೆಗೆ ಒಡೆದ ಚಿಗಳ್ಳಿ ಚೆಕ್ ಡ್ಯಾಮ್; ಮತ್ತೆ ಶುರುವಾಗಿದೆ ಆತಂಕ
ಶಿರಸಿ, ಆಗಸ್ಟ್ 12: ಮುಂಡಗೋಡ ತಾಲ್ಲೂಕಿನ ಚಿಗಳ್ಳಿ ಚೆಕ್ ಡ್ಯಾಮ್ ಕುಸಿದು ಅಪಾರ ಪ್ರಮಾಣದ ನೀರು ಗದ್ದೆಗಳಿಗೆ ನುಗ್ಗುತ್ತಿದೆ. ಇದರಿಂದ ಮತ್ತೆ ಆತಂಕ ಶುರುವಾಗಿದೆ.
ಮಳೆ ಸ್ವಲ್ಪ ಬಿಡುವು ನೀಡಿದ್ದರಿಂದ ನಿರಾಳರಾಗಿ, ಗಂಜಿ ಕೇಂದ್ರಗಳಿಂದ ಮನೆಗಳಿಗೆ ವಾಪಸ್ ಆಗುತ್ತಿದ್ದವರಿಗೆ ಈ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಒಡ್ಡು ಕುಸಿದಿರುವುದರಿಂದ ನೀರು ಗದ್ದೆಗಳಿಗೆ ನುಗ್ಗುತ್ತಿದೆ. ಅಪಾರ ಪ್ರಮಾಣದಲ್ಲಿ ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿವೆ. ಜಲಾಶಯದ ಸಮೀಪಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಪಿಕಪ್ ವಾಹನ- ಕಾರು ಅಪಘಾತ; ಎಬಿವಿಪಿ ಮುಖಂಡ ಸೇರಿ ಮೂವರು ಸಾವು
20.74 ಮೀ. ಎತ್ತರ, 910 ಮೀ. ಅಗಲ ಇರುವ ಈ ಜಲಾಶಯದ ನೀರು ಬೇಡ್ತಿನದಿ ಹಾಗೂ ಗಂಗಾವಳಿಯನ್ನು ಸೇರುತ್ತದೆ. ಹೀಗಾಗಿ ಈ ನದಿಗಳ ನೀರಿನ ಹರಿವಿನಲ್ಲಿ ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜಲಾಶಯದ ನೀರು ಹರಿದರೆ, ಶಿರಸಿ-ಹುಬ್ಬಳ್ಳಿ ರಸ್ತೆ ಜಲಾವೃತವಾಗಲಿದೆ.

2009ರಲ್ಲಿ ಕೂಡ ಜಲಾಶಯ ಒಡೆದಿತ್ತು. ಅದರ ನಂತರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು.












Click it and Unblock the Notifications