• search
  • Live TV
ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಿಕಪ್ ವಾಹನ- ಕಾರು ಅಪಘಾತ; ಎಬಿವಿಪಿ ಮುಖಂಡ ಸೇರಿ ಮೂವರು ಸಾವು

By ಶಿರಸಿ ಪ್ರತಿನಿಧಿ
|
Google Oneindia Kannada News

ಶಿರಸಿ (ಉತ್ತರ ಕನ್ನಡ), ಆಗಸ್ಟ್ 11: ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಯಲ್ಲಾಪುರ ರಾಜ್ಯ ಹೆದ್ದಾರಿಯ ಬಾಳೆಹದ್ದ ಕ್ರಾಸ್ ಬಳಿ ಪಿಕಪ್ ವಾಹನ ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಮುಖಂಡ ರವಿಕುಮಾರ್, ಮಾಬಲೇಶ್ವರ ಮತ್ತು ಶಾರದಾ ಬೈರುಂಬೆ ಸೂರಿಮನೆ ಮೃತ ದುರ್ದೈವಿಗಳಾಗಿದ್ಸಾರೆ. ಮಾಧವ್ ಮತ್ತು ಶೇಖರ್ ಗಾಯಾಳುಗಳಾಗಿದ್ದು, ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಕಿರವತ್ತಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ, ಪರಿಹಾರ ನೀಡಿ, ವಾಪಸ್ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಸಂಸದ ಅನಂತಕುಮಾರ ಹೆಗಡೆ ಅವರು ಆ ವಾಹನದ ಹಿಂದೆ ಇದ್ದರು ಎಂದು ವರದಿಯಾಗಿದ್ದು, ಸಂಸದರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಸ್ಥಳದಲ್ಲಿದ್ದು ಪರಿಹಾರ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆಂದು ಹೇಳಲಾಗಿದೆ.

ಮಾಹಿತಿ ಕೃಪೆ : ಗುರುಪ್ರಸಾದ್ ಕಣಲೆ

Car Accident: Including Mysuru ABVP Leader 3 Died

English summary
Mysuru ABVP leader Ravi Kumar and other 2 died in a road accident in Uttara Kannada district Sirsi- Yellapur state highway on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion