• search
  • Live TV
ಸಿಂಗಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಯಿ-ಬೆಕ್ಕಿಗಿಂತ ಕೆಟ್ಟದಾಗಿ ಕಚ್ಚಾಡುತ್ತಿದ್ದ ಟ್ರಂಪ್- ಕಿಮ್ ಭೇಟಿ ಹಾಗೂ ಹಿಂದಿನ ಕಚ್ಚಾಟ

|

ಜೂನ್ ಹನ್ನೆರಡನೇ ತಾರೀಕು, ಮಂಗಳವಾರ ಸಿಂಗಪೂರದ ಸೆಂತೋಸಾ ದ್ವೀಪದ ಕ್ಯಾಪೆಲ್ಲ ಹೋಟೆಲ್ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. 'ನಾಯಿ- ಬೆಕ್ಕಿಗಿಂತ' ಕಡೆಯದಾಗಿ ಕಚ್ಚಾಡಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಭೇಟಿ ಆಗಲಿದ್ದಾರೆ.

ಉತ್ತರ ಕೊರಿಯಾ ಹಾಗೂ ಅಮೆರಿಕ ಅಧ್ಯಕ್ಷರ ಮಧ್ಯೆ ನಡೆಯುತ್ತಿರುವ ಮೊದಲ ಭೇಟಿ ಇದಾಗಲಿದೆ. ಇಂಥದೊಂದು ಸಮಾವೇಶ ಆಗಬಹುದು ಎಂಬ ಸಣ್ಣಾ ಸಾಧ್ಯತೆಯನ್ನು ಕೂಡ ಆರು ತಿಂಗಳ ಹಿಂದೆ ಊಹಿಸಲು ಕೂಡ ಅಸಾಧ್ಯವಾಗಿತ್ತು. ಆ ಪರಿಯಲ್ಲಿ ಪರಸ್ಪರ ದೇಶಗಳ ಮಧ್ಯೆ ಗಂಭೀರ ವಾಗ್ದಾಳಿ ನಡೆದಿತ್ತು.

ಐತಿಹಾಸಿಕ ಶೃಂಗಸಭೆ: ಸಿಂಗಾಪುರಕ್ಕೆ ಬಂದಿಳಿದ ಟ್ರಂಪ್, ಕಿಮ್

ಪರಸ್ಪರರ ವಿರುದ್ಧ ಅಣ್ವಸ್ತ್ರ ಪ್ರಯೋಗದ ಧಮಕಿ ಕೂಡ ಹಾಕಿಕೊಂಡಿದ್ದವು. ಈ ಕಾರಣಕ್ಕೆ ಜಗತ್ತಿನಾದ್ಯಂತ ಆತಂಕ ಸೃಷ್ಟಿಯಾಗಿತ್ತು. ಅದರಲ್ಲೂ ಕೊರಿಯಾ ಸುತ್ತ ಮುತ್ತ ತೀರಾ ಡೋಲಾಯಮಾನವಾದ ಸ್ಥಿತಿ ನಿರ್ಮಾಣವಾಗಿತ್ತು. ಈ ವರ್ಷದ ಮಾರ್ಚ್ ನಲ್ಲಿ ದಕ್ಷಿಣ ಕೊರಿಯಾದ ಅಧಿಕಾರಿಗಳ ಮೂಲಕ ಟ್ರಂಪ್ ಗೆ ಮಾತುಕತೆ ನಡೆಸುವ ಪ್ರಸ್ತಾವ ಮುಂದಿಡಲಾಗಿತ್ತು.

ಈ ವರ್ಷದ ಆರಂಭದಿಂದ ಕಿಮ್ ಪ್ರಜಾತಾಂತ್ರಿಕ ಹೆಜ್ಜೆಗಳನ್ನು ಇಟ್ಟರು. ಟ್ರಂಪ್ ರೊಂದಿಗಿನ ಸಮಾವೇಶಕ್ಕೂ ಮುನ್ನ ಚೀನಾ ಹಾಗೂ ದಕ್ಷಿಣ ಕೊರಿಯಾಕ್ಕೆ ಕಿಮ್ ಭೇಟಿ ನೀಡಿದರು. ಅಂದಹಾಗೆ ಉತ್ತರ ಕೊರಿಯಾ ಹಾಗೂ ಅಮೆರಿಕ ಮಧ್ಯೆ ಸಂಬಂಧ ಅದ್ಯಾವ ಪರಿ ಹಳಸಿತ್ತು ಅಂತ ತಿಳಿದುಕೊಳ್ಳುವುದಕ್ಕೆ ಇಬ್ಬರ ಮಧ್ಯದ ಮಾತುಕತೆಯನ್ನು ಒಮ್ಮೆ ಗಮನಿಸಬೇಕು- ವಿವಿಧ ಸಂದರ್ಭದಲ್ಲಿ ಪರಸ್ಪರರನ್ನು ಹೀಗಳೆದಿದ್ದು ಇಲ್ಲಿದೆ:

ರಾಕೆಟ್ ಮನುಷ್ಯ ತನ್ನದೇ ಆತ್ಮಹತ್ಯೆ ಗುರಿ ಹೊಂದಿರುವಂತಿದೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾವನ್ನು ಸಂಪೂರ್ಣ ನಾಶ ಮಾಡಿಬಿಡ್ತೀನಿ ಎಂದು ಅಬ್ಬರಿಸಿದ್ದರು. ಆರು ತಿಂಗಳಲ್ಲಿ ಪರಿಸ್ಥಿತಿ ಬದಲಾಗಿ, ಟ್ರಂಪ್- ಕಿಮ್ ಭೇಟಿಗೆ ವೇದಿಕೆ ಸಿದ್ಧವಾಗಿದೆ.

ಇದು ಬರೀ ಬೆದರಿಕೆಯಲ್ಲ, ಅಣ್ವಸ್ತ್ರದ ಬಟನ್ ನನ್ನ ಕಚೇರಿಯ ಡೆಸ್ಕ್ ನಲ್ಲೇ ಇದೆ
ಉತ್ತರ ಕೊರಿಯಾದ ಕಿಮ್ ತಮ್ಮ ಹೊಸ ವರ್ಷದ ಭಾಷಣದಲ್ಲಿ ಅಮೆರಿಕದ ಬೆದರಿಕೆಗೆ ಪ್ರತಿಯಾಗಿ ಧಮಕಿ ಹಾಕಿದ ರೀತಿಯಿದು.

ದಕ್ಷಿಣ ಕೊರಿಯಾ ಮಣ್ಣಲ್ಲಿ ಕಾಲಿಟ್ಟು ದಾಖಲೆ ಬರೆದ ಕಿಮ್ ಜಾಂಗ್ ಉನ್

ಆತನಿಗೆ ಹೇಳಿ ನನ್ನ ಹತ್ತಿರುವ ಅಣ್ವಸ್ತ್ರದ ಬಟನ್ ಇದೆ. ಅದು ಆತನ ಬಳಿ ಇರುವುದಕ್ಕಿಂತ ಹೆಚ್ಚು ದೊಡ್ಡದು, ಶಕ್ತಿಶಾಲಿಯೂ ಆಗಿದ್ದು, ಆ ಬಟನ್ ಕೆಲಸ ಮಾಡುತ್ತದೆ
ಈ ವರ್ಷದ ಜನವರಿ ಮೂರನೇ ತಾರೀಕು ಕಾಲೆಳೆಯುವ ಟ್ವೀಟ್ ನಲ್ಲಿ ಟ್ರಂಪ್ ನೀಡಿದ ತಿರುಗೇಟು ಇದು. ಇಬ್ಬರೂ ಒಟ್ಟಿಗೆ ಕೂತು ಮಾತಾಡುವ ಬಗ್ಗೆ ತಿಳಿಸುವ ಎರಡು ತಿಂಗಳ ಮುಂಚೆ ಕೂಡ ಪರಸ್ಪರರು ಅಣ್ವಸ್ತ್ರ ಪ್ರಯೋಗದ ಬಗ್ಗೆ ಮಾತನಾಡಿದ್ದರು.

ಜಗತ್ತು ಈ ವರೆಗೆ ನೋಡದಿರುವಂಥ ಬೆಂಕಿ- ಕೋಪ, ತಾಪ ನೋಡುತ್ತದೆ
ಉತ್ತರ ಕೊರಿಯಾದಿಂದ ಅಮೆರಿಕದ ಪೆಸಿಫಿಕ್ ಭೂ ಭಾಗದಲ್ಲಿ ಕ್ಷಿಪಣಿ ಪ್ರಯೋಗ ಮಾಡಿದಾಗ ಕಳೆದ ವರ್ಷ ಆಗಸ್ಟ್ ನಲ್ಲಿ ಡೊನಾಲ್ಡ್ ಟ್ರಂಪ್ ಗಂಭೀರ ಎಚ್ಚರಿಕೆ ನೀಡಿದರು.

ಆ ವ್ಯಕ್ತಿಯ ಸ್ನೇಹಿತನಾಗಲು ಪ್ರಯತ್ನಪಟ್ಟೆ- ಮತ್ತು ಮುಂದೊಂದು ದಿನ ಅದು ಸಾಧ್ಯವಾಗಬಹುದು
ಕಳೆದ ವರ್ಷದ ನವೆಂಬರ್ ನಲ್ಲಿ ಉತ್ತರ ಕೊರಿಯಾ ಮಾಧ್ಯಮಗಳು ಟ್ರಂಪ್ ರನ್ನು 'ಹುಚ್ಚ ವಯಸ್ಸಾದ ಮನುಷ್ಯ' ಎಂದು ಟೀಕಿಸಿ ಬರೆದಿದ್ದಾಗ, ಹೀಗೆ ಪ್ರತಿಕ್ರಿಯಿಸಿದ್ದರು.

ಆತ ಮಾನಸಿಕ ಸಮಸ್ಯೆಯಿರುವ ವಯಸ್ಸಾದ ಮನುಷ್ಯ
ವಿಶ್ವ ಸಂಸ್ಥೆ ವೇದಿಕೆಯಿಂದ ಟ್ರಂಪ್ ನೀಡಿದ್ದ ಎಚ್ಚರಿಕೆಗೆ ಪ್ರತಿಯಾಗಿ ಉತ್ತರ ಕೊರಿಯಾದ ಕಿಮ್ ಉನ್ ನೀಡಿದ್ದ ಪ್ರತಿಕ್ರಿಯೆ ಇದು.

ಆತ ರಾಕ್ಷಸ ದರೋಡೆಕೋರ, ಬೆಂಕಿಯೊಂದಿಗೆ ಆಟವಾಡ್ತಿದ್ದಾನೆ
ಸೆಪ್ಟೆಂಬರ್ 2017ರಲ್ಲಿ ಟ್ರಂಪ್- ಕಿಮ್ ಮಧ್ಯದ ಸಂಬಂಧ ತೀರಾ ಹಳಸಿದ್ದಾಗ ಕಿಮ್ ವಿರುದ್ಧ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆಯಿದು.

ಹೆದರಿದ ನಾಯಿ ಹೆಚ್ಚು ಜೋರಾಗಿ ಬೊಗಳುತ್ತದೆ
ಉತ್ತರ ಕೊರಿಯಾವನ್ನೇ ನಾಶ ಮಾಡುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಧಮಕಿ ಹಾಕಿದಾಗ ಕಿಮ್ ನೀಡಿದ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
US President will meet North Korean leader Kim Jong-un in a historic summit at the Capella Hotel in Sentosa Island of Singapore on Tuesday, June 12. is the first-ever between a North Korean leader and an American president.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more