ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್ ಕೇಸ್: ವಿಶೇಷ ಚೇತನ ವ್ಯಕ್ತಿಗೂ ಸಿಗಲಿಲ್ಲ ಪ್ರಾಣಭಿಕ್ಷೆ, ಸಿಂಗಪುರದಲ್ಲಿ ಗಲ್ಲುಶಿಕ್ಷೆ

|
Google Oneindia Kannada News

ಸಿಂಗಪುರ, ಏಪ್ರಿಲ್ 27: ಮಾದಕವಸ್ತು ಕಳ್ಳಸಾಗಣೆ ಅಪರಾಧಕ್ಕಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವಿಶೇಷ ಚೇತನ ವ್ಯಕ್ತಿಗೆ ಕ್ಷಮಾದಾನ ಸಿಗಲಿಲ್ಲ. ಮಲೇಶಿಯಾದ ವ್ಯಕ್ತಿಯನ್ನು ಸಿಂಗಾಪುರದಲ್ಲಿ ಬುಧವಾರ ಗಲ್ಲಿಗೇರಿಸಲಾಗಿದೆ. ಭಾರತೀಯ ಮೂಲದ ನಾಗೇಂದ್ರನ್ ಧರ್ಮಲಿಂಗಂ(Nagaenthran Dharmalingam) ಎಂಬ ಹೆಸರಿನ ವ್ಯಕ್ತಿ 43 ಗ್ರಾಂ ಹೆರಾಯಿನ್ ಸ್ಮಗಲಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. 2010ರಲ್ಲಿ ಆತನ ಮೇಲಿನ ಆರೋಪಗಳು ಸಾಬೀತಾಗಿ, ಅಪರಾಧಿ ಎಂದು ಘೋಷಿಸಲಾಗಿತ್ತು.

ಮಲೇಶಿಯಾದಿಂದ ಸಿಂಗಪುರಕ್ಕೆ 43 ಗ್ರಾಂ(1.5 ಔನ್ಸ್) ನಷ್ಟು ಹೆರಾಯಿನ್ ಮಾದಕದ್ರವ್ಯ ಸಾಗಿಸಲು ಯತ್ನಿಸುವಾಗ ಧರ್ಮಲಿಂಗಂ ಸಿಕ್ಕಿಬಿದ್ದಿದ್ದ. ಸಿಂಗಪುರದಲ್ಲಿ ಡ್ರಗ್ಸ್ ಕೇಸಿನಲ್ಲಿ ಸಿಕ್ಕಿಬಿದ್ದರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. ಧರ್ಮಲಿಂಗಂ ಡ್ರಗ್ಸ್ ಕೇಸಿನಲ್ಲಿ ಸಿಕ್ಕಿಬಿದ್ದಿದ್ದರೂ ಆತನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಆತನ ಪರ ವಕೀಲರು ವಾದಿಸಿದ್ದರು. ಆತನ ಐಕ್ಯೂ ಪರೀಕ್ಷೆ ನಡೆಸಿದಾಗ 69 ಎಂದು ಅಂಕ ಬಂದಿತ್ತು. ಹೀಗಾಗಿ, ಆತನನ್ನು ಮಾನಸಿಕ ಅಸ್ವಸ್ಥ ಎಂದು ಪರಿಗಣಿಸಿ, ಕ್ಷಮಾದಾನ ನೀಡಬೇಕು ಎಂದು ವಾದಿಸಲಾಗಿತ್ತು.

ವಿಚಿತ್ರ ಘಟನೆ: ಹೃದಯಾಘಾತದಿಂದ ಮಹಿಳಾ ಅಪರಾಧಿ ಸತ್ತರೂ ಗಲ್ಲುಶಿಕ್ಷೆ ನಿಲ್ಲಿಸಲಿಲ್ಲ!ವಿಚಿತ್ರ ಘಟನೆ: ಹೃದಯಾಘಾತದಿಂದ ಮಹಿಳಾ ಅಪರಾಧಿ ಸತ್ತರೂ ಗಲ್ಲುಶಿಕ್ಷೆ ನಿಲ್ಲಿಸಲಿಲ್ಲ!

34 ವರ್ಷ ವಯಸ್ಸಿನ ಧರ್ಮಲಿಂಗಂನನ್ನು ಗಲ್ಲುಶಿಕ್ಷೆಯಿಂದ ಉಳಿಸಿಕೊಳ್ಳಲು ಆತನ ಸೋದರ 22 ವರ್ಷದ ನವೀನ್ ಕುಮಾರ್ ಸತತ ಪ್ರಯತ್ನಪಟ್ಟರೂ ಫಲ ಸಿಗಲಿಲ್ಲ. ಸಿಂಗಪುರದಲ್ಲಿ ಗಲ್ಲುಶಿಕ್ಷೆ ಜಾರಿಗೊಂಡಿರುವುದನ್ನು ಖಚಿತಪಡಿಸಿರುವ ನವೀನ್, ಮೃತದೇಹವನ್ನು ಮಲೇಶಿಯಾದ ಐಪೋಹ್(Ipoh) ನಗರಕ್ಕೆ ತಂದು ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಗುವುದು ಎಂದಿದ್ದಾರೆ.

ಧರ್ಮಲಿಂಗಂ 2010 ರಲ್ಲಿ ದೋಷಿ ಎಂದು ಪರಿಗಣನೆ
ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ 34 ವರ್ಷದ ಧರ್ಮಲಿಂಗಂ ಒಂದು ದಶಕಕ್ಕೂ ಹೆಚ್ಚು ಕಾಲ ಮರಣದಂಡನೆಗೆ ಗುರಿಯಾಗಿದ್ದರು. ಆದರೆ, ಕಾನೂನು ಹೋರಾಟ ಹಾಗೂ ಪ್ರತಿರೋಧ ಮುಂದುವರೆದಿದ್ದರಿಂದ ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿರಲಿಲ್ಲ. ಧರ್ಮಲಿಂಗಂ ಅವರ ತಾಯಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸದ ಸಿಂಗಪುರ ನ್ಯಾಯಾಲವು ಮಂಗಳವಾರದಂದು ಅಂತಿಮ ವಿಚಾರಣೆ ನಡೆಸಿ, ಬುಧವಾರದಂದು ಗಲ್ಲುಶಿಕ್ಷೆ ನೀಡಲು ಅಧಿಕಾರಿಗಳಿಗೆ ಸೂಚಿಸಿತ್ತು. ಮಂಗಳವಾರದ ವಿಚಾರಣೆಯ ಕೊನೆಯಲ್ಲಿ, ಧರ್ಮಲಿಂಗಂ ಮತ್ತು ಅವರ ಕುಟುಂಬವು ಅಂತಿಮ ಭರವಸೆಯೂ ಕುಸಿದಿದ್ದರಿಂದ ಕಣ್ಣೀರಲ್ಲಿ ಮುಳುಗಿಬಿಟ್ಟರು.

 Indian-Origin Malaysian Man Executed In Singapore For Drug Trafficking

ಮರಣದಂಡನೆಯನ್ನು ಖಂಡಿಸಿದ ಮಾನವ ಹಕ್ಕು ಸಂಘಟನೆಗಳು

"ಬೌದ್ಧಿಕವಾಗಿ ಅಂಗವಿಕಲ, ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಮೂರು ಟೇಬಲ್ ಸ್ಪೂನ್ ಗಳಿಗಿಂತ ಕಡಿಮೆ ಡೈಮಾರ್ಫಿನ್(diamorphine) ಹೊಂದಿದ್ದ ಎಂಬ ಏಕೈಕ ಕಾರಣಕ್ಕೆ ಬಲವಂತವಾಗಿ ನೇಣು ಹಾಕುವುದು ಅಸಮರ್ಥನೀಯ ಮತ್ತು ಇದು ಅಂತಾರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಸರ್ಕಾರೇತರ ಸಂಸ್ಥೆಯ ನಿರ್ದೇಶಕ ಮಾಯಾ ಫೋವಾ ರಿಪ್ರೈವ್ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು.

 Indian-Origin Malaysian Man Executed In Singapore For Drug Trafficking

ಈ ಹಿಂದೆ ವಿಚಾರಣೆಯನ್ನು "ನ್ಯಾಯದ ವಿಡಂಬನೆ" ಎಂದು ಕರೆದಿದ್ದ ಹಕ್ಕುಗಳ ಗುಂಪು ಅಮ್ನೆಸ್ಟಿ ಇಂಟರ್‌ನ್ಯಾಶನಲ್, "ಈ ನಂಬಲಾಗದ ಕ್ರೌರ್ಯದಿಂದ ಹೇಳಲಾಗದಷ್ಟು ಎದೆಗುಂದಿದೆ" ಎಂದು ಹೇಳಿತ್ತು.

English summary
A Malaysian man found guilty of drug trafficking was executed on Wednesday in Singapore after a last-ditch legal challenge by his mother failed in a high-profile case that had attracted international calls for clemency, his family said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X