ಗಬ್ಬು ನಾರುತ್ತಿದ್ದ ಸಾರ್ವಜನಿಕ ಶೌಚಾಲಯ ಸಂಪೂರ್ಣ ಸ್ವಚ್ಛ

ಶಿವಮೊಗ್ಗ, ಜನವರಿ 11: ಉಪಯೋಗಕ್ಕೆ ಬಾರದಂತೆ ಗಲಿಜು, ದುರ್ವಾಸನೆಯಿಂದ ಪಾಳು ಬಿದಿದ್ದ ಸಾರ್ವಜನಿಕ ಶೌಚಾಲಯವನ್ನು ಸ್ವಚ್ಚಗೊಳ್ಳಿಸಿ ಉಪಯೋಗಕ್ಕೆ ಬರುವಂತೆ ಮಾಡಲಾಗಿದೆ. ವಾರಂತ್ಯದಲ್ಲಿ ಯುವಕರು ಈ ಕಾರ್ಯವನ್ನು ಮಾಡಿದ್ದಾರೆ.

ಯುವಾ ಬ್ರಿಗೇಡ್ ಶಿವಮೊಗ್ಗ ವತಿಯಿಂದ ಭಾನುವಾರ ನಗರದ ಕೋಟೆ ಆಂಜನೇಯ ದೇವಾಲಯದ ಹಿಂಭಾಗದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಕಾರ್ಯಕರ್ತರು ಸ್ವಚ್ಛಗೊಳಿಸಿದರು‌.

ಈ ಸಮಯದಲ್ಲಿ ಈ ವಾರ್ಡ್‌ನ ಕಾರ್ಪೊರೇಟರ್ ಆದ ಪ್ರಭಾಕರವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ 2 ದಿನದೊಳಗೆ ಸುಜಜ್ಜಿತ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು.

Yuva Brigade Members Cleaned Public Toilet

ಪ್ರತಿವಾರ ಯುವಾ ಬ್ರಿಗೇಡ್ ಯುವಕರು ಸ್ವಚ್ಚತೆ ಹಾಗೂ ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಜನ ಮೆಚ್ಚುಗೆಗೆ ಕಾರಣರಾಗಿದ್ದಾರೆ. ಈ ಕಾರ್ಯಕ್ಕೆ ಇಡೀ ಶಿವಮೊಗ್ಗದ ಜನತೆ ಯುವಾ ಬ್ರಿಗೇಡ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಫೇಸ್ ಬುಕ್ ಪೋಸ್ಟ್; ಯುವ ಬ್ರಿಗೇಡ್ ಕಾರ್ಯಕರತ ಕೆಲಸದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಅವರು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. ಶಿವಮೊಗ್ಗದ ಯುವಾಬ್ರಿಗೇಡ್ ಕಾರ್ಯಕರ್ತರು ಅದ್ಭುತವಾದ ಕೆಲಸವೊಂದನ್ನು ಮಾಡಿದ್ದಾರೆ. ಅಲ್ಲಿನ ಕೋಟೆರಸ್ತೆಯಲ್ಲಿರುವ ಉಪಯೋಗಿಸಲು ಅಸಾಧ್ಯವಾಗಿದ್ದ ಸಾರ್ವಜನಿಕ ಶೌಚಾಲಯವೊಂದನ್ನು ತಿಕ್ಕಿ ತೊಳೆದು ಹೊಳೆಯುವಂತೆ ಮಾಡಿಬಿಟ್ಟಿದ್ದಾರೆ.

Yuva Brigade Members Cleaned Public Toilet

ಮುಂಚಿನ ಮತ್ತು ಆನಂತರದ ಚಿತ್ರಗಳನ್ನು ನೋಡಿ ಒಮ್ಮೆ ಗಾಬರಿಯಾಗುವಂತಾಯ್ತು. ಸ್ಥಳೀಯ ಕಾರ್ಪೊರೇಟರ್ ಸ್ಥಳಕ್ಕೆ ಬಂದು ಶೌಚಾಲಯಕ್ಕೆ ಬೇಕಾದ ನೀರಿನ, ವಿದ್ಯುತ್ತಿನ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ‌ ಕೊಟ್ಟಿದ್ದಲ್ಲದೇ ಈ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮಾತನ್ನು ಆಡಿಹೋಗಿದ್ದಾರೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+