Muda Scam: ನೀವು ಕಳಂಕಿತ ಮುಖ್ಯಮಂತ್ರಿ, ಐವಾನ್ ಡಿಸೋಜಾ ಅಲ್ಲ ಹೈವಾನ್- ಶಾಸಕ ಎಸ್ಎನ್ ಚನ್ನಬಸಪ್ಪ ಕಿಡಿ
ಶಿವಮೊಗ್ಗ ಆಗಸ್ಟ್ 20: ಮುಡಾ ಹಗರಣದ ತನಿಖೆ ಚುರುಕು ಪಡೆಯುತ್ತಿದ್ದಂತೆ ವಿಪಕ್ಷಗಳ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಎಸ್ಎನ್ ಚನ್ನಬಸಪ್ಪ ವಾಗ್ದಾಳಿ ಮಾಡಿದ್ದು, 'ನೀವು ಕಳಂಕಿತ ಮುಖ್ಯಮಂತ್ರಿ, ಐವಾನ್ ಅಲ್ಲ ಹೈವಾನ್' ಎಂದು ಹರಿಹಾಯ್ದಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಾಂಗ್ರೆಸ್ ಸಂವಿಧಾನವನ್ನ ಬುಡಮೇಲು ಮಾಡುವ ಕೆಲಸಕ್ಕೆ ಕೈ ಹಾಕಿದೆ' ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಹೇಳಿದ್ದೆ ಸಂವಿಧಾನ ಅಂದುಕೊಂಡಿದ್ದಾರೆ. ಇಡೀ ದೇಶಕ್ಕೆ ರಾಜ್ಯಕ್ಕೆ ಅಪಮಾನ ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಇದೆ ಎಂದು ಗುಡುಗಿದ್ದಾರೆ.

ರಾಜ್ಯಪಾಲರನ್ನ ಗುರಿಯಾಗಿಟ್ಟುಕೊಂಡು ವಿರೋಧ ಮಾಡ್ತಾ ಇದ್ದಾರೆ. ನೈತಿಕತೆ ನೆಲೆಗಟ್ಟು ಇಟ್ಟುಕೊಂಡು ಪ್ರಶ್ನೆ ಮಾಡಬೇಕು. ರಾಜ್ಯಪಾಲರ ನಿರ್ಣಯಕ್ಕೆ ಕಾಂಗ್ರೆಸ್ ಅಪಮಾನ ಮಾಡ್ತಾ ಇದೆ. ಇದು ರಾಜ್ಯದ ಜನರಿಗೆ ಅಪಮಾನ ಮಾಡಿದ ಹಾಗೆ ಎಂದು ಅವರು ಕಿಡಿ ಕಾರಿದ್ದಾರೆ.
ಐವಾನ್ ಡಿಸೋಜಾ ಅಲ್ಲ ಹೈವಾನ್!
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ವಿರುದ್ಧ ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿರುವ ಸಂದರ್ಭದಲ್ಲಿ ಕಾಂಗ್ರೆಸ್ MLC ಐವನ್ ಡಿಸೋಜಾ, ಬಾಂಗ್ಲಾ ಪ್ರಧಾನಿಗೆ ಆದ ಗತಿಯೇ ನಿಮಗೂ ಬರುತ್ತೆ ಎಂದು ರಾಜ್ಯಪಾಲರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ಎನ್ ಚನ್ನಬಸಪ್ಪ, 'ಸಚಿವ ಕೃಷ್ಣ ಬೈರೇಗೌಡ ಮಾತಾನಾಡಿದ ಹೇಳಿಕೆ ನಿಜಕ್ಕೂ ಬೇಸರ ತರಿಸಿದೆ. ಅವರ ಮೇಲೆ ಇದ್ದ ಗೌರವ ಕಡಿಮೆ ಆಗಿದೆ. ಐವಾನ್ ಡಿಸೋಜಾ ಕೂಡ ಏನೇನೋ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅವರು ಐವಾನ್ ಡಿಸೋಜಾ ಅಲ್ಲಾ ಹೈವಾನ್ ಡಿಸೋಜಾ. ಅವರು ಹೆಸರಿಗೆ ತಕ್ಕ ಹಾಗೇ ಇದ್ದಾರೆ. ಐವಾನ್ ಅಲ್ಲ ಹೈವಾನ್ ಅವರು' ಎಂದು ಶಾಸಕ ಎಸ್ಎನ್ ಚನ್ನಬಸ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು!
ಕಾನೂನು ಮತ್ತು ಸುವ್ಯವಸ್ಥೆ ಬದುಕಿದ್ದೀಯಾ ಅನ್ನೋದು ಪ್ರಶ್ನೆಯಾಗಿದೆ. ಇಡೀ ವ್ಯವಸ್ಥೆ ಬುಡಮೇಲು ಮಾಡೋಕೆ ಹೊರಟಿದ್ದಾರೆ, ಅದಕ್ಕೆ ಕ್ರಮ ಇಲ್ವಾ? ಸುಳ್ಳು ಹೇಳುವ ಪ್ರಕ್ರಿಯೆ ಸರಿನಾ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ. ಒಂದು ವ್ಯವಸ್ಥೆಗೆ ಕಳಂಕ ತರುವ ಕೆಲಸ ಮಾಡಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ರಾಜ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ. ನಿಮ್ಮ ಹಿರಿತನಕ್ಕೆ ತಕ್ಕ ನಡವಳಿಕೆ ಅಲ್ಲ. ನೀವು ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ ಸಿದ್ದರಾಮಯ್ಯ ಅವರೇ.. ತನಿಖೆ ನಡೆಸಲು ತಾಕತ್ತು ಇಲ್ವ ಸಿದ್ದರಾಮಯ್ಯ.. ಪಲಾಯನ ವಿಧಾನಸೌಧದಲ್ಲೇ ಮಾಡಿದ್ದೀರಾ.. ನೀವು ಕಳಂಕಿತ ಮುಖ್ಯಮಂತ್ರಿ... ಭ್ರಷ್ಟಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮುಳುಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಮಾಡುವಾಗ ರಾಜ್ಯಪಾಲರು ಒಳ್ಳೆಯವರಾ?
ನಿಮಗೆ ರಾಜ್ಯಪಾಲರು ಹೇಳಿದ್ರೆ ಅಪಮಾನ ನಾ? ನಮಗೆ ರಾಜ್ಯಪಾಲರ ನಡೆ ಸ್ವಾಗತಾರ್ಹವಾಗಿದೆ. ಹತ್ತಾರು ಬಾರಿ ಪರಿಶೀಲನೆ ಮಾಡಿ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಸರ್ಕಾರದ ಒಂದು ಭಾಗ ತಾನೇ. ಅವರಿಂದ ಪ್ರಮಾಣ ವಚನ ಸ್ವೀಕಾರ ಮಾಡುವಾಗ ರಾಜ್ಯಪಾಲರು ಒಳ್ಳೆಯವರು. ಈಗ ಅವರು ಕೆಟ್ಟವರಾಗಿದ್ದಾರೆ ಅಲ್ವಾ? ರಾಜ್ಯಪಾಲರಿಗೆ ಸಂಪೂರ್ಣ ಅಧಿಕಾರ ಇದೆ. ನಿಮ್ಮನ್ನ ಕಿತ್ತು ಹಾಕುವ ಅಧಿಕಾರ ರಾಜ್ಯಪಾಲರಿಗೆ ಇದೆ. ತಪ್ಪಿಲ್ಲ, ತಪ್ಪು ಆಗಿಲ್ಲ ಅಂತಾದರೆ ತನಿಖೆ ಎದುರಿಸಿ. ನಿಮ್ಮ ಪಾದ ಬೇಕಾದ್ರೆ ತೊಳೆದು ಆ ನೀರು ನಾವು ಕುಡಿಯುತ್ತೇವೆ. ತನಿಖೆ ಎದುರಿಸಲು ತಾಕತ್ತು ಇಲ್ಲ ನಿಮ್ಗೆ? ಹಾಗಾಗಿ ಈ ರೀತಿ ನಡೆದುಕೊಳ್ತಾ ಇದ್ದೀರಾ ಎಂದು ಶಾಸಕ ಎಸ್ಎನ್ ಪ್ರಶ್ನೆ ಮಾಡಿದ್ದಾರೆ.
ಭ್ರಷ್ಟ ವ್ಯವಸ್ಥೆ ದೂರ ಆಗಬೇಕು...
ಹೊಸ ಶಾಸಕರಿಗೆ ಪಾಠ ಹೇಳಿದವರು ಇದೇ ಸಿಎಂ ಹಾಗೂ ಸಚಿವರು. ಯಾರು ಭ್ರಷ್ಟಾಚಾರ ಮಾಡಿದ್ದಾರೆ ಅವರಿಗೆ ನಾವು ಹೇಳ್ತಾ ಇರೋದು. ಹಿಂದುಳಿದ ನಾಯಕರಿಗೆ ನಾವು ಅಪಮಾನ ಮಾಡ್ತಾ ಇದ್ದೇವೆ. ಭ್ರಷ್ಟ ವ್ಯವಸ್ಥೆ ದೂರ ಆಗಬೇಕು. ಹಾಗಾಗಿ ನಾವು ನಾಗರಿಕರ ಬಳಿ ಹೋಗ್ತೇವೆ. ಹಿಂದುಳಿದ ವರ್ಗಕ್ಕೆ ಸಿದ್ದರಾಮಯ್ಯ ಯಾಕೆ ಅನ್ಯಾಯ ಮಾಡಿದ್ದೀರಿ. 1093 ಸಮುದಾಯ ಕೊಟ್ಟ ಹಣ ಯಾಕೆ ವಾಪಸ್ಸು ಪಡೆದಿದ್ದೀರಾ? ಬಿಜೆಪಿ ಕೊಟ್ಟ ಹಣವನ್ನ ರದ್ದು ಮಾಡಿದ್ದೀರಾ. 300 ಕೋಟಿ ಹಣ ವಾಪಸ್ಸು ತೆಗೆದುಕೊಂಡಿದ್ದಾರೆ. ಹಿಂದುಳಿದ ವರ್ಗಕ್ಕೆ ಕೊಟ್ಟ ಹಣ ವಾಪಸ್ಸು ಪಡೆದಿದ್ದೀರಾ. ಹಣ ಇಲ್ಲ ಅಂದ್ರೆ ಜನ ಭಿಕ್ಷೆ ಬೇಡಿ ಸಮುದಾಯ ಭವನ ಕಟ್ಟುತ್ತಾರೆ. ಅಂತದ್ರಲ್ಲಿ ನೀವು ಹಣ ಬಿಡುಗಡೆ ಮಾಡಿರುವುದನ್ನ ರದ್ದು ಮಾಡಿದ್ರಲ್ಲಾ, ಸರ್ಕಾರ ಪಾಪರ್ ಎದ್ದು ಹೋಗಿದೆ. ಸರ್ಕಾರ ಪಾಪರ್ ಆಗಿರುವುದರಿಂದ ಸರ್ಕಾರ ನಡೆಸಲು ನಿಮ್ಗೆ ಯೋಗ್ಯತೆ ಇಲ್ಲ ಎಂದು ಅವರು ಆಕ್ರೋಶಗೊಂಡರು.
ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಎಸ್.ಐ.ಟಿ. ಅನುಮತಿ
ಇನ್ನೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಎಸ್.ಐ.ಟಿ. ಅನುಮತಿ ಕೋರಿರುವ ವಿಚಾರವಾಗಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, 'ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ನಾನು ಈ ಬಗ್ಗೆ ಸದನದಲ್ಲೂ ಮಾತನಾಡಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗೆ ಆಗುತ್ತೆ. ಪ್ರಾಸಿಕ್ಯೂಷನ್ ಗೆ ಯಾರು ಯಾರಿಗೆ ಅನುಮತಿ ನೀಡಬೇಕೋ ನೀಡಲಿ' ಎಂದು ಅವರು ಹೇಳಿದರು.












Click it and Unblock the Notifications