ಅವಿಶ್ವಾಸ ಮಂಡನೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ: ಯಡಿಯೂರಪ್ಪ

ಶಿವಮೊಗ್ಗ, ಜುಲೈ.20: ಸಂಸತ್ ನಲ್ಲಿ ವಿರೋಧ ಪಕ್ಷಗಳು ಒಂದಾಗಿ ಅವಿಶ್ವಾಸ ಮಂಡನೆ ಮಾಡಿರುವುದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸೊರಬ ಮತ್ತು ಸಾಗರದ ಇತರೆ ಭಾಗಗಳಲ್ಲಿ ಮಳೆಯಿಂದಾಗಿ ಉಂಟಾಗಿರುವ ಬೆಳೆ ನಾಶ ಹಾಗೂ ಹಾನಿಗಳ ಬಗ್ಗೆ ವೀಕ್ಷಣೆ ನಡೆಸಿ ನಂತರ ಮಾದ್ಯಮಗಳೊಂದಿಗೆ ಮಾತನಾಡಿದರು.

ಭಾರತ ಪ್ರಪಂಚದಲ್ಲಿ 6 ನೇ ಶ್ರೀಮಂತ ರಾಷ್ಟ್ರವಾಗಿ ಬೆಳೆಯುತ್ತಿದೆ. ಜಿಎಸ್ ಟಿ ಇಂದ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ. ಹೀಗಿರುವಾಗ ವಿರೋಧ ಪಕ್ಷಗಳು ಸಮಯ ಹಾಳು ಮಾಡಲು ಸಂಸತ್ ನಲ್ಲಿ ಅವಿಶ್ವಾಸ ಮಂಡನೆ ಮಾಡಿರುವುದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲವೆಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

Yeddyurappa says opposition parties spoil time in Parliament

ಸಮಸ್ಯೆ ಇದ್ದಿದ್ದರೆ ಕುಳಿತು ಚರ್ಚೆ ಮಾಡಬಹುದಿತ್ತು. ಆದರೆ ಆ ಬಗ್ಗೆ ವಿಚಾರ ಮಾಡದ ವಿರೋಧ ಪಕ್ಷದವರು ಕೇವಲ ಸಮಯ ಹಾಳು ಮಾಡುವ ಕೆಲಸಮಾಡಿದ್ದಾರೆ. ನಮಗೆ ಸ್ಪಷ್ಟ ಬಹುಮತವಿದೆ. ಆದರೂ ಇಂತಹ ಕೆಲಸಕ್ಕೆ ವಿರೋಧ ಪಕ್ಷ ಕೈ ಹಾಕಿದೆ. ಅವರು ಗೆಲ್ಲೊಲ್ಲ ಎಂದರು.

ಸೊರಬದಲ್ಲಿ ಅತಿ ಹೆಚ್ಚು ಬೆಳೆ ನಾಶವಾಗಿದೆ. ಸುಮಾರು 5 ಸಾವಿರ ಎಕರೆ ಬೆಳೆ ನಾಶಗೊಂಡಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸಂಕ ಕಾಲುವೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿನಿಗೂ ಪರಿಹಾರ ನೀಡಬೇಕು ಹಾಗೂ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಲು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+