ಓಮ್ನಿ ಕಾರಿನೊಳಗೆ ಸಿಕ್ಕಿತು ಪ್ಲಾಸ್ಟಿಕ್ ನಲ್ಲಿ ಸುತ್ತಿಟ್ಟಿದ್ದ ಮಹಿಳೆ ಶವ
ಶಿವಮೊಗ್ಗ, ಜನವರಿ 3: ಶಿವಮೊಗ್ಗದ ರೈಲ್ವೆ ನಿಲ್ದಾಣದ ಬಳಿ ಹತ್ತು ದಿನಗಳಿಂದ ನಿಲ್ಲಿಸಿದ್ದ ಓಮ್ನಿ ಕಾರಿನೊಳಗೆ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಡಿಸೆಂಬರ್ 22ರಿಂದಲೇ ಶಿವಮೊಗ್ಗ ವಿದ್ಯಾನಗರದ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಮಾರುತಿ ಓಮ್ನಿ ಕಾರೊಂದನ್ನು ನಿಲ್ಲಿಸಲಾಗಿತ್ತು. ಅಲ್ಲಿ ವಾಹನ ನಿಲ್ಲಿಸುವುದು ಸಹಜವಾದ್ದರಿಂದ ಯಾರೂ ಅದರೆಡೆ ಗಮನ ನೀಡಿರಲಿಲ್ಲ. ಹತ್ತು ದಿನಗಳಾದರೂ ಯಾರೂ ಕಾರನ್ನು ತೆಗೆದುಕೊಂಡು ಹೋಗಿರಲಿಲ್ಲ.
ಕಡಕೊಳ ಬಳಿ ಸ್ಕೂಟರ್ ಮೇಲೆ ಯುವಕನ ಶವ ಪತ್ತೆ
ಆದರೆ ದಿನಗಳೆದಂತೆ ಕಾರಿನ ಬಳಿ ಕೊಳೆತ ವಾಸನೆ ಬರುವುದನ್ನು ಪಾರ್ಕಿಂಗ್ ಜಾಗದ ಸೆಕ್ಯುರಿಟಿ ಗಮನಿಸಿದ್ದರು. ಪ್ರಾಣಿ ಸತ್ತಿರಬಹುದೆಂದು ಶಂಕಿಸಿ ಹುಡುಕಾಡಿ ಏನೂ ಕಾಣದಿದ್ದಾಗ ಸುಮ್ಮನಾಗಿದ್ದರು. 2 ದಿನಗಳಿಂದ ಕಾರಿನ ಕಡೆಯಿಂದ ವಿಪರೀತ ವಾಸನೆ ಬರುತ್ತಿದ್ದುದರಿಂದ ಅನುಮಾನಗೊಂಡ ಪಾರ್ಕಿಂಗ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಅತ್ತಿಗೆಯ ಕೊಲೆಗೆ ಮೈದುನನೇ ಕೊಟ್ಟ ಸುಪಾರಿ
ಸ್ಥಳಕ್ಕೆ ಬಂದ ಪೊಲೀಸರು ಲಾಕ್ ಆಗಿದ್ದ ಕಾರನ್ನು ತೆಗೆದು ಒಳಗೆ ನೋಡಿದಾಗ ಪ್ಲಾಸ್ಟಿಕ್ ಕವರ್ನಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದುಷ್ಕರ್ಮಿಗಳು ಮಹಿಳೆಯನ್ನು ಕೊಲೆ ಮಾಡಿ, ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿಟ್ಟಿದ್ದಾರೆ.