• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗದಲ್ಲಿ ಮಳೆಯಿಂದ ಎಲ್ಲೆಲ್ಲಿ ಏನೇನಾಯ್ತು?; ತಕ್ಷಣವೇ ಪರಿಹಾರಕ್ಕೆ ಸೂಚನೆ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಆಗಸ್ಟ್ 7: ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಭಾರೀ ಹಾನಿಯಾಗಿದೆ. ಇಲ್ಲಿನ ಪ್ರದೇಶಗಳ ಜನ, ಜಾನುವಾರು, ಆಸ್ತಿ ಹಾಗೂ ಮತ್ತಿತರ ಹಾನಿಗಳಿಗೆ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಂಡು ಜನಜೀವನ ಸಹಜವಾಗಿರುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಎಲ್ಲಾ ತಾಲೂಕಿನ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

 ಕಾರವಾರದಲ್ಲೂ ಬಿರುಸಾಗಿದೆ ಮಳೆ; ನೆರೆಗೆ ನೂರಾರು ಮನೆಗಳು ಜಲಾವೃತ, ಇಬ್ಬರ ಸಾವು ಕಾರವಾರದಲ್ಲೂ ಬಿರುಸಾಗಿದೆ ಮಳೆ; ನೆರೆಗೆ ನೂರಾರು ಮನೆಗಳು ಜಲಾವೃತ, ಇಬ್ಬರ ಸಾವು

ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಮಂಡಗದ್ದೆ ಸಮೀಪದ ಕಳವತ್ತಿ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ರೈತ ರಮೇಶ್ ಅವರು ಭೂಕುಸಿತದಿಂದ ಸಾವನ್ನಪ್ಪಿದ್ದರು. ವಾಸ್ತವ ಅರಿಯಲು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ನಗರದ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ಧನ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

 ಕುಣಿಗದ್ದೆ ಸೇತುವೆ ಕುಸಿತ

ಕುಣಿಗದ್ದೆ ಸೇತುವೆ ಕುಸಿತ

ಜೋಗಿಕೊಪ್ಪ ಗ್ರಾಮದ ಕುಣಿಗದ್ದೆ ಸೇತುವೆ ಕುಸಿಯುವ ಹಂತದಲ್ಲಿದ್ದು, ಗ್ರಾಮಸ್ಥರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಕನ್ನಂಗಿ ಸಮೀಪದ ನವಿಲಾರೆ ಎಂಬಲ್ಲಿ ಸೇತುವೆ ಬಿರುಕುಗೊಂಡಿದೆ. ಕಣಗಲಕೊಪ್ಪ ಗ್ರಾಮದಲ್ಲಿ ಮನೆ ಮೇಲೆ ಮರ ಉರುಳಿದ್ದರ ಪರಿಣಾಮ ಮನೆಯಲ್ಲಿ ವಾಸವಿದ್ದ ಶಂಕರನಾಯ್ಕ ಅವರಿಗೆ ಗಾಯಗಳಾಗಿವೆ. ಉರುಳಿದ ಮರ ತೆರವಿಗೆ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ.

ಉಕ್ಕಡಗಾತ್ರಿ ದೇವಾಲಯಕ್ಕೆ ಈಗ ಜಲದಿಗ್ಬಂಧನದ ಭೀತಿಉಕ್ಕಡಗಾತ್ರಿ ದೇವಾಲಯಕ್ಕೆ ಈಗ ಜಲದಿಗ್ಬಂಧನದ ಭೀತಿ

 ಹಕ್ಕಿಪಿಕ್ಕಿ ಕ್ಯಾಂಪಿನ 80 ಕುಟುಂಬದ ಸ್ಥಳಾಂತರ

ಹಕ್ಕಿಪಿಕ್ಕಿ ಕ್ಯಾಂಪಿನ 80 ಕುಟುಂಬದ ಸ್ಥಳಾಂತರ

ತೀರ್ಥಹಳ್ಳಿ ಪಟ್ಟಣದ ಕುರವಳ್ಳಿ ತುಂಗಾ ಸೇತುವೆ ಬಳಿ ವಾಸವಾಗಿದ್ದ ಹಕ್ಕಿಪಿಕ್ಕಿ ಕ್ಯಾಂಪಿನ 80 ಕುಟುಂಬಗಳನ್ನು ರಾಮೇಶ್ವರ ಸಭಾ ಭವನಕ್ಕೆ ಸ್ಥಳಾಂತರಿಸಲು ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಮಳೆಯಿಂದಾಗಿ ಸುಮಾರು 18 ಕಚ್ಚಾಮನೆಗಳು ಬಿದ್ದುಹೋಗಿವೆ. ತೊಗರ್ಸಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ಕುಸಿತಗೊಂಡಿದೆ. ತಿಮ್ಮಲಾಪುರದ ರಸ್ತೆ ಕುಸಿದಿದೆ. ಮುಡುಬಸಿದ್ದಾಪುರ-ಮಲ್ಲಾಪುರ ಸಂಪರ್ಕದ ಕಿರುಸೇತುವೆ ಅಲ್ಪಪ್ರಮಾಣದ ಹಾನಿಗೊಳಗಾಗಿದೆ.

 ಉಕ್ಕಿ ಹರಿದ ವರದಾ, ದಂಡಾವತಿ

ಉಕ್ಕಿ ಹರಿದ ವರದಾ, ದಂಡಾವತಿ

ಸೊರಬ ತಾಲೂಕಿನ ವರದಾ ಹಾಗೂ ದಂಡಾವತಿ ನದಿಗಳು ಉಕ್ಕಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿ ಪಾತ್ರದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಹಶೀಲ್ದಾರ್ ಪುಟ್ಟರಾಜಗೌಡ ಅವರು ಅಲ್ಲಿನ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ. ತಹಶೀಲ್ದಾರರು ಮಳೆ ಹಾನಿಗೊಳಗಾದ ತಾಲೂಕಿನ ಜಂಗಿನಕೊಪ್ಪ, ಹಳೇ ಸೊರಬ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

ಚಂದ್ರಗುತ್ತಿ, ಕುಪ್ಪಗುಡ್ಡೆ, ಉಳವಿ, ಕಸಬಾ ಹೋಬಳಿಗಳಲ್ಲಿ ಜಮೀನುಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಉಳವಿ ಹೋಬಳಿ ಎನ್. ದೊಡ್ಡೇರಿ ಗ್ರಾಮದ ಗಣಪತಿ ಎಂಬುವವರ ವಾಸದ ಮನೆಯ ಮೇಲೆ ಮರಬಿದ್ದು ಹಾನಿಗೊಳಗಾಗಿದೆ.

ಕೊಡಗಿನಲ್ಲಿ ಆಶ್ಲೇಷ ಮಳೆ ಅಬ್ಬರಕ್ಕೆ ಭಾಗಮಂಡಲ ಜಲಾವೃತಕೊಡಗಿನಲ್ಲಿ ಆಶ್ಲೇಷ ಮಳೆ ಅಬ್ಬರಕ್ಕೆ ಭಾಗಮಂಡಲ ಜಲಾವೃತ

 ಸಂಚಾರ ವ್ಯವಸ್ಥೆಗೆ ಅಡಚಣೆ

ಸಂಚಾರ ವ್ಯವಸ್ಥೆಗೆ ಅಡಚಣೆ

ನಿರಂತರವಾಗಿರುವ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿರುವ ಹಲವು ಮನೆಗಳು ನೆಲಕ್ಕುರುಳುವ ಸಾಧ್ಯತೆ ಇದೆ. ತೆಕ್ಕೂರು ಗ್ರಾಮದಲ್ಲಿ ಹಳೆಯ ಮನೆಯೊಂದು ಹಾನಿಗೀಡಾಗಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಹಳೇಸೊರಬ ಜಂಗಿನಕೊಪ್ಪದ ರತ್ನಮ್ಮ ಎಂಬುವವರ ಮನೆ ಬೀಳುವ ಸ್ಥಿತಿಯಲ್ಲಿದ್ದದ್ದರಿಂದಾಗಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮರಗಳು ಧರೆಗುರುಳಿದ್ದು ಸಂಚಾರ ವ್ಯವಸ್ಥೆಗೆ ಅಡಚಣೆಯಾಗಿದೆ. ಇವುಗಳ ತೆರವಿಗೆ ಅರಣ್ಯ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ತಕ್ಷಣದ ಕ್ರಮಕ್ಕೆ ಮುಂದಾಗಿದ್ದಾರೆ.

 3,000 ಕೋಳಿಗಳು ಸಾವು

3,000 ಕೋಳಿಗಳು ಸಾವು

ಶಿವಮೊಗ್ಗ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಕೋಳಿ ಫಾರಂಗೆ ನೀರು ನುಗ್ಗಿ ಸುಮಾರು 3,000 ಕೋಳಿಗಳು ಸಾವನ್ನಪ್ಪಿವೆ. ನಗರದ ವೆಂಕಟೇಶನಗರ, ಬಾಪೂಜಿನಗರ, ವಿದ್ಯಾನಗರದ ಹೇಮಶ್ರೀ ಬಡಾವಣೆ, ಟಿಪ್ಪುನಗರದ ಎಡಭಾಗ, ಬಸವನಗುಡಿ ಮುಂತಾದ ಪ್ರದೇಶಗಳು ಜಲಾವೃತಗೊಂಡಿವೆ ಎಂದು ತಹಶೀಲ್ದಾರ್ ಗಿರೀಶ್ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶಗಳ ಮಾಹಿತಿ, ಸಲಹೆ- ಸೂಚನೆಗಳಿಗಾಗಿ ಆರಂಭಿಸಲಾಗಿರುವ ಸಹಾಯವಾಣಿ ಕೇಂದ್ರಗಳ ತಾಲೂಕುವಾರು ಮಾಹಿತಿ: ಜಿಲ್ಲಾಧಿಕಾರಿಗಳ ಕಚೇರಿ- 08182-271101, 1077, ಜಿಲ್ಲಾ ರಕ್ಷಣಾಧಿಕಾರಿಗಳ
ಕಚೇರಿ - 261413, 100, ಶಿವಮೊಗ್ಗ - 08182-279312, ತೀರ್ಥಹಳ್ಳಿ - 08181-228239, ಹೊಸನಗರ -08185-221235, ಸಾಗರ - 08183-226074, ಸೊರಬ - 08184-272241, ಶಿಕಾರಿಪುರ - 08187

English summary
Heavy rains have been reported over the district for the past two to three days. District Collector KA Dayanand has issued a strict notification to all taluk officers to take immediate remedial measures to ensure the livelihood of the people, livestock, property and other areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X