"ಕಣ್ಣೀರು ಹಾಕುವ ಸಿಎಂ ಹೋಗಿ, ಕಣ್ಣೀರು ಒರೆಸುವ ಸಿಎಂ ಬಂದಿದ್ದಾರೆ'
ಶಿವಮೊಗ್ಗ, ಫೆಬ್ರವರಿ 25: ಕಣ್ಣೀರು ಸುರಿಸುವ ಮುಖ್ಯಮಂತ್ರಿ ತೆಗೆದು ಹಾಕಿ, ಕಣ್ಣೀರು ಒರೆಸುವ ಮುಖ್ಯಮಂತ್ರಿ ನಾವು ಪಡೆದುಕೊಂಡಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆ ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು ಸೊರಬದಲ್ಲಿ ನೀರಾವರಿ ಯೋಜನೆ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ಮಾತನಾಡಿ, ಸೊರಬ ನನ್ನ ಜನ್ಮಭೂಮಿ, ಹಿರೇಕೆರೂರು ನನ್ನ ಕರ್ಮ ಭೂಮಿ. ಸೊರಬದಲ್ಲಿ ನಿಂತು ಮಾತನಾಡುತ್ತಿರುವುದು ನನಗೆ ಖುಷಿ ತಂದಿದೆ ಎಂದರು.
ನಮಗೆ ಕಣ್ಣೀರು ಸುರಿಸುವ ಮುಖ್ಯಮಂತ್ರಿ ಬೇಡ, ರೈತರ ಕಣ್ಣಿರು ಒರೆಸುವ ಮುಖ್ಯಮಂತ್ರಿ ನಮಗೆ ಬೇಕು. ರಾಜ್ಯದಲ್ಲಿ ರೈತರ ಕಣ್ಣೀರು ಒರೆಸುವ ಮುಖ್ಯಮಂತ್ರಿ ಅಂತಾ ಏನಾದರೂ ಇದ್ದರೆ ಅದು ಯಡಿಯೂರಪ್ಪನವರು ಮಾತ್ರ, ಅದಕ್ಕೆ ಹೆಮ್ಮೆ ಆಗುತ್ತದೆ ಎಂದು ಹೇಳಿದರು.

ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗಳನ್ನು ಮಾಡಿಕೊಳ್ಳಬಾರದು ನಿಮ್ಮೊಂದಿಗೆ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಇದೆ ಎಂದು ತಿಳಿಸಿದರು.

ಹಿಂದೆ ತೆಂಗಿನ ಸಸಿಗಳನ್ನು ಹಾಗೂ ಮೆಣಸಿಕಾಯಿ ಮಾರಲು ಆನವಟ್ಟಿಗೆ ಬರುತ್ತಿದ್ದೆ, ಇಂದು ಅದೆ ಭೂಮಿಯಲ್ಲಿ ಸಚಿವನಾಗಿ ಬರುತ್ತೇನೆ ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲ್ಲಿಲ್ಲ. ನಿಮ್ಮೆಲ್ಲರ ಆರ್ಶೀವಾದದಿಂದ ಸಚಿವನಾಗಿದ್ದೇನೆ ಹಾಗಾಗಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.












Click it and Unblock the Notifications