ಶಿವಮೊಗ್ಗ ಕ್ಷೇತ್ರದಲ್ಲಿ ಮನೆಯಿಂದಲೇ ಮತದಾನ ಆರಂಭ

ಶಿವಮೊಗ್ಗ, ಏಪ್ರಿಲ್ 26: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯುತ್ತಿದೆ. ಲೋಕಸಭಾ ಮತ ಕ್ಷೇತ್ರದಲ್ಲಿ 8,62,789 ಪುರುಷ, 8,90,061 ಮಹಿಳೆ, 3 ತೃತೀಯಲಿಂಗಿ ಸೇರಿದಂತೆ 17,52,885 ಮತದಾರರಿದ್ದಾರೆ.

ಚುನಾವಣಾ ಆಯೋಗ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಶೇ 40ಕ್ಕಿಂತ ಹೆಚ್ಚು ಅಂಗವಿಕಲತೆ ಇರುವ ವಿಕಲಚೇತನ ಮತದಾರರು ಮನೆಯಿಂದ ಮತದಾನ ಮಾಡಲು ಅವಕಾಶ ನೀಡಿದೆ. ಶಿವಮೊಗ್ಗದಲ್ಲಿ ಮನೆಯಿಂದಲೇ ಮತದಾನ ಆರಂಭವಾಗಿದೆ.

Voting From Home Began In Shivamogga Lok Sabha Seat

ಲೋಕಸಭಾ ಚುನಾವಣೆ 2024ರ ಅಂಗವಾಗಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿನ ಶರಾವತಿ ನಗರದ 91 ವರ್ಷದ ಹಿರಿಯ ನಾಗರಿಕರಾದ ಚಂದ್ರಶೇಖರಪ್ಪ, ಕೋಟೆ ರೋಡ್‌ ವ್ಯಾಪ್ತಿಯ 90 ವರ್ಷದ ಹಿರಿಯ ನಾಗರಿಕರಾದ ಅನ್ನಪೂರ್ಣಮ್ಮ ಹಾಗೂ ಹೊಸಮನೆ ವ್ಯಾಪ್ತಿಯ ಹನುಮಂತರಾಯಪ್ಪ ವಿಶೇಷ ಚೇತನ ಮತದಾರರು Postal Ballot ಮೂಲಕ ಮತದಾನ ಮಾಡಿದರು.

ಒಟ್ಟು ಮತದಾರರ ಮಾಹಿತಿ: ಶಿವಮೊಗ್ಗ ಕ್ಷೇತ್ರದ ಮತದಾರರ ಬಗ್ಗೆ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾಹಿತಿ ನೀಡಿದ್ದಾರೆ. "ಶಿವಮೊಗ್ಗ ಲೋಕಸಭಾ ಮತ ಕ್ಷೇತ್ರದಲ್ಲಿ 862789 ಪುರುಷ, 890061 ಮಹಿಳೆ, 3 ತೃತೀಯ ಲಿಂಗಿ ಸೇರಿದಂತೆ 1752885 ಮತದಾರರಿದ್ದಾರೆ" ಎಂದು ಹೇಳಿದರು.

"ವಿಕಲಚೇತನ 10925 ಪುರುಷ, 8340 ಮಹಿಳೆ ಸೇರಿ ಒಟ್ಟು 19265 ಮತದಾರರು ಇದ್ದಾರೆ. 18 ರಿಂದ 19 ವರ್ಷದೊಳಗಿನ 22067 ಯುವಕ, 19861 ಯುವತಿ, 3 ತೃತೀಯಲಿಂಗಿ ಸೇರಿದಂತೆ ಒಟ್ಟು 41931 ಯುವ ಮತದಾರರು ಇದ್ದಾರೆ. 85 ವರ್ಷ ಮೀರಿದ 6214 ಪುರುಷ, 9114 ಮಹಿಳೆ ಸೇರಿ ಒಟ್ಟು 15328 ಮತದಾರರು ಇದ್ದಾರೆ" ಎಂದು ಮಾಹಿತಿ ನೀಡಿದರು.

ಮೇ 7ರ ಮಂಗಳವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನ ನಡೆಯಲಿದೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 23 ಅಭ್ಯರ್ಥಿಗಳು ಕಣದಲ್ಲಿದ್ದು, ಮೇ 7ರಂದು ನಡೆಯುವ ಚುನಾವಣೆ ಫಲಿತಾಂಶ ಜೂನ್‌ 4ರಂದು ಪ್ರಕಟವಾಗಲಿದೆ.

ಚುನಾವಣಾ ಆಯೋಗದಲ್ಲಿ ನೋಂದಾಯಿತಗೊಂಡ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ 17 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಪ್ರಮುಖರು. ನೋಟಾ ಸೇರಿ 23 ಅಭ್ಯರ್ಥಿಗಳು ಕಣದಲ್ಲಿರುವ ಕಾರಣ ಎರಡು ಇವಿಎಂಗಳನ್ನು ಬಳಕೆ ಮಾಡಲಾಗುತ್ತದೆ.

"ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಇವಿಎಂ ಸಿದ್ದತೆ, ತರಬೇತಿ ಮತ್ತು ಮತದಾನದಂದು ಖಚಿತ ಕನಿಷ್ಟ ಸೌಲಭ್ಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು" ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

"ಚುನಾವಣಾಧಿಕಾರಿಗಳು ಅಂಚೆ ಮತದಾನದ ಕಡೆ ಹೆಚ್ಚಿನ ಗಮನ ಹರಿಸಿ, ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಜೊತೆಗೆ ಇವಿಎಂ ಸಿದ್ದಪಡಿಸುವಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಚುನಾವಣೆಯಲ್ಲಿ ಎರಡು ಬ್ಯಾಲಟ್ ಪೇಪರ್ ಇರುವ ಕಾರಣ ಅತ್ಯಂತ ಜಾಗರೂಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಹಾಗೂ ಚುನಾವಣಾ ನಿಯೋಜಿತ ಅಧಿಕಾರಿ/ ಸಿಬ್ಬಂದಿಗಳ ಎರಡನೇ ತರಬೇತಿಯನ್ನು ಪರಿಣಾಮಕಾರಿಯಾಗಿ ನಡೆಸಬೇಕು" ಎಂದರು.

"ಅಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾನದಂದು ಮತಗಟ್ಟೆಗಳಲ್ಲಿ ನೀಡಬೇಕಾದ ಖಚಿತ ಕನಿಷ್ಟ ಸೌಲಭ್ಯಗಳಾದ ಕುಡಿಯುವ ನೀರು, ಪೀಠೋಪಕರಣಗಳ ವ್ಯವಸ್ಥೆ, ಕ್ಯೂ ನಿರ್ವಹಣೆ ಸೇರಿದಂತೆ ಇತರೆ ಮೂಲಭೂಸ ಸೌಕರ್ಯಗಳ ಕುರಿತು ಖಾತ್ರಿಪಡಿಸಿಕೊಂಡು ಕ್ರಮ ವಹಿಸಬೇಕು" ಎಂದು ತಿಳಿಸಿದರು.

"ಎಲ್ಲ ತಾಲ್ಲೂಕುಗಳಲ್ಲಿ ಚುನಾವಣಾ ನಿಯೋಜಿತ ಅಧಿಕಾರಿಗಳಿಂದ ನಮೂನೆ 12 ಅಂಚೆ ಮತಪತ್ರವನ್ನು ಪಡೆಯಲಾಗುತ್ತಿದ್ದು, ಬಾಕಿ ಇರುವ ಮತಪತ್ರಗಳನ್ನು ಇನ್ನು 3-4 ದಿನಗಳಲ್ಲಿ ನೀಡಿ 12ಎ ಇಡಿಸಿ ಯನ್ನು ಪಡೆದುಕೊಳ್ಳುವಂತೆ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚಿಸಿದರು. ಬಿಎಲ್‍ಓಗಳು ಮತಗಟ್ಟೆಗಳಲ್ಲಿ ಮತದಾರ ಮಾಹಿತಿ ಸ್ಲಿಪ್‍ಗಳನ್ನು ಹಂಚಬೇಕು. ಸಹಾಯಕ ಚುನಾವಣಾಧಿಕಾರಿಗಳು ಈ ಕುರಿತು ಪರಿಶೀಲಿಸಬೇಕು" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+