Vande Bharat Train; ಶಿವಮೊಗ್ಗ ಜನರಿಗೆ ಶೀಘ್ರವೇ ಸಿಹಿಸುದ್ದಿ

ಶಿವಮೊಗ್ಗ, ಡಿಸೆಂಬರ್ 21; ಮಲೆನಾಡ ಹೆಬ್ಬಾಗಿಲು ಶಿವಮೊಗ್ಗಕ್ಕೆ ಬಸ್, ವಿಮಾನ, ರೈಲಿನ ಸಂಪರ್ಕವಿದೆ. ರಾಜಧಾನಿ ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ. ಆದರೆ ರೈಲ್ವೆ ಇಲಾಖೆ ಇನ್ನೂ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ.

ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿದ್ದರು. ಆಗ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಓಡಿಸುವ ಕುರಿತು ಮನವಿಯನ್ನು ಮಾಡಿದ್ದರಾರೆ. ಅಲ್ಲದೇ ಈ ರೈಲಿನ ನಿರ್ವಹಣೆಗೆ ಅಗತ್ಯವಾದ ವ್ಯವಸ್ಥೆ ಮಾಡುವಂತೆಯೂ ಮನವಿ ಸಲ್ಲಿಸಿದ್ದಾರೆ.

Vande Bharat Express Train Good News For Shivamogga People

ಕೋಟೆಗಂಗೂರು ಡಿಪೋ; ಶಿವಮೊಗ್ಗ ನಗರದ ಹೊರವಲಯದ ಕೋಟೆಗಂಗೂರು ಎಂಬಲ್ಲಿ ರೈಲ್ವೆ ಡಿಪೋ ನಿರ್ಮಾಣವಾಗುತ್ತಿದೆ. ಈ ವರ್ಷದ ಫೆಬ್ರವರಿ 27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೋಟೆಗಂಗೂರು ರೈಲ್ವೆ ಬೋಗಿ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಡಿಪೋ ಕಾಮಗಾರಿ ನಡೆಯುತ್ತಿದೆ.

ಭವಿಷ್ಯದಲ್ಲಿ ಶಿವಮೊಗ್ಗಕ್ಕೆ ಸಂಚಾರ ನಡೆಸುವ ರೈಲುಗಳನ್ನು ಗಮನದಲ್ಲಿಟ್ಟುಕೊಂಡು ಈ ಡಿಪೋ ನಿರ್ಮಾಣ ಮಾಡಲಾಗುತ್ತಿದೆ. ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗದಲ್ಲಿ ಈ ಡಿಪೋ ಬರುತ್ತದೆ. ಇಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.

ಶಿವಮೊಗ್ಗ ನಗರದ ಹೊರವಲಯದ ಕೋಟೆಗಂಗೂರು ರೈಲ್ವೆ ಬೋಗಿ ಘಟಕವನ್ನು 100 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಶಿವಮೊಗ್ಗದಿಂದ ಹೊಸ ರೈಲುಗಳ ಆರಂಭಕ್ಕೆ ಸಹಕಾರಿಯಾಗುವುದಲ್ಲದೇ ಬೆಂಗಳೂರು ಮತ್ತು ಮೈಸೂರಿನಲ್ಲಿನ ನಿರ್ವಹಣಾ ಸೌಕರ್ಯದ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಭವಿಷ್ಯದಲ್ಲಿ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಸಂಚಾರ ನಡೆಸುತ್ತಿದೆ. ರೈಲು ಒಂದು ಟ್ರಿಪ್ ಮುಗಿಸಿದ ಬಳಿಕ ಸಾಮಾನ್ಯ ನಿರ್ವಹಣೆಯನ್ನು ಮಾಡಬೇಕಿದೆ. ಇದಕ್ಕಾಗಿ ಕೋಟೆಗಂಗೂರು ಡಿಪೋದಲ್ಲಿ ಅಗತ್ಯ ವ್ಯವಸ್ಥೆ ಮಾಡಿ ಮೇಲ್ದರ್ಜೆಗೇರಿಸಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.

ಕೋಟೆಗಂಗೂರು ಕೋಚಿಂಗ್ ಡಿಪೋ ಕುರಿತು ಸಂಸದರು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. 2020-21ರ ಬಜೆಟ್‌ನಲ್ಲಿ ರೈಲ್ವೆ ಕೋಚಿಂಗ್ ಡಿಪೋವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತು. ಅಲ್ಲದೇ 100 ಕೋಟಿ ಅನುದಾನ ಮೀಸಲಿಡಲಾಯಿತು. ಈಗ ಕಾಮಗಾರಿಯೂ ಆರಂಭವಾಗಿದ್ದು, 2024ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಶಿವಮೊಗ್ಗ ಸೇರುತ್ತದೆ. ಕೋಟೆಗಂಗೂರು ಎಂಬಲ್ಲಿ ರೈಲ್ವೆ ಕೋಚಿಂಗ್ ಡಿಪೋ ಮತ್ತು ರೈಲು ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಮುಖ್ಯ ಮಾರ್ಗದಲ್ಲಿ ಗಂಟೆಗೆ 130 ಕಿ. ಮೀ. ಮತ್ತು ಲೂಪ್ ಲೈನ್‌ಗಳಲ್ಲಿ ಗಂಟೆಗೆ 30 ಕಿ. ಮೀ. ವೇಗದಲ್ಲಿ ರೈಲು ಸಾಗುವಂತೆ ಡಿಪೋ ನಿರ್ಮಿಸಲಾಗುತ್ತಿದೆ.

ಈ ಡಿಪೋದಲ್ಲಿ ಒಟ್ಟು 4 ಮಾರ್ಗ ನಿರ್ಮಾಣವಾಗುತ್ತಿದೆ. 1 ಸ್ಪೈರ್‌ ಲೈನ್, 1 ಟವರ್ ವ್ಯಾಗನ್ ಸೈಡಿಂಗ್, 1 ಟ್ರಾಕ್ ಯಂತ್ರ ಸೈಡಿಂಗ್, 1 ಸಿಕ್ ಲೈನ್ ಶೆಡ್, ಸಬ್‌ ವೇ, ಪ್ರಯಾಣಿಕರ ಓವರ್ ಬ್ರಿಡ್ಜ್‌ ಸಹ ಈ ಡಿಪೋದಲ್ಲಿ ನಿರ್ಮಾಣಗೊಳ್ಳಲಿವೆ. ಇದರ ಜೊತೆಗೆ ವಂದೇ ಭಾರತ್ ರೈಲು ನಿರ್ವಹಣೆಗೆ ಸಹ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ.

ಶಿವಮೊಗ್ಗದಿಂದ ಬೆಂಗಳೂರು, ಮೈಸೂರು ಸೇರಿ ವಿವಿಧ ನಗರಗಳಿಗೆ ರೈಲು ಸೇವೆ ಇದೆ. ಅಲ್ಲದೇ ಹಲವು ಸರಕು ಸಾಗಣೆ ರೈಲುಗಳು ಸಹ ಸಂಚಾರ ನಡೆಸುತ್ತವೆ. ದಿನಕ್ಕೆ ಸುಮಾರು 15 ರೈಲುಗಳು ಬಂದು ಹೋಗುತ್ತವೆ. ಇವುಗಳನ್ನು ನಿರ್ವಹಣೆ ಮಾಡಲು ಕೋಚಿಂಗ್ ಡಿಪೋವನ್ನು ನಿರ್ಮಾಣ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+