ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೊರಬ- ಉಳವಿಯಲ್ಲಿ ಉಷ್ಣಾಂಶ ಕನಿಷ್ಠ

By Srinath
|
Google Oneindia Kannada News

ulavi-in-soraba-recorded-lowest-min-temperature-on-jan-1-2014
ಉಳವಿ (ಶಿವಮೊಗ್ಗ), ಜ.1: ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಉಳವಿ ಹೋಬಳಿಯಲ್ಲಿ ವರ್ಷಾರಂಭದ ದಿನ ಇಡೀ ರಾಜ್ಯದಲ್ಲೇ ಕನಿಷ್ಠಮಟ್ಟದ ತಾಪಮಾನ ದಾಖಲಾಗಿತ್ತು. 2014ರ ಜನವರಿ 1ರಂದು ಬೆಳಗ್ಗೆ 6.30ರಲ್ಲಿ ಉಳವಿಯಲ್ಲಿ 13.8 ಡಿಗ್ರ ಸೆಂಟಿಗ್ರೇಡ್ ಉಷ್ಣಾಂಶವಿತ್ತು.

ಇನ್ನು, 2013ನೇ ಸಾಲಿನ ಕೊನೆಯ ದಿನ ಮಧ್ಯಾಹ್ನ 3 ಗಂಟೆಯಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿ ಹೋಬಳಿಯಲ್ಲಿ ಅತ್ಯಧಿಕ ತಾಪಮಾನ (37°C) ನೆಲೆಸಿತ್ತು. ರಾಜ್ಯದಲ್ಲಿ ಶೇ. 90ರಷ್ಟು ತೇವಾಂಶವಿತ್ತು.

ಡಿಸೆಂಬರ್ 26ರಿಂದ ಜನವರಿ 1ರವರೆಗಿನ ಅವಧಿಯಲ್ಲಿ ಶೇ. 98ರಷ್ಟು ಮಳೆ ಕೊರತೆಯಿತ್ತು. ಡಿಸೆಂಬರ್ 30ರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಸಾಮಾನ್ಯವಾಗಿ ಈ ಅವಧಿಯಲ್ಲಿ 1.3 ಮಿಮೀ ಮಳೆಯಾಗಬೇಕಿತ್ತು. ಆದರೆ ಒಂದಿನಿತೂ ಮಳೆಯಾಗಿಲ್ಲ.

ಇಡೀ ರಾಜ್ಯದಲ್ಲಿ ಒಣ ಹವಾಗುಣ ತಾಂಡವವಾಡುತ್ತಿತ್ತು. ಜನವರಿ 2ರ ಬೆಳಗ್ಗೆ 8.30ಕ್ಕೆ ಅನ್ವಯವಾಗುವಂತೆ ಮುಂದಿನ 24 ಗಂಟೆಗಳ ಅವಧಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಾಮರಾಜನಗರ. ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಹಗುರವಾದ ಮಳೆಯಾಗಲಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ.

English summary
Ulavi in Soraba of Shimoga district recorded lowest minimum temperature on January 1, 2014. Belthangady hobli in Belthangady taluk of DK district recorded max temperature of 37°C on Dec 31 at 3pm. More than 90% relative humidity has been recorded in 33% geographical area in the state. Less than 25% of relative humidity has been recorded in 0% geographical area in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X