• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗದಿಂದ 3 ಹೊಸ ರೈಲು; ವೇಳಾಪಟ್ಟಿ, ನಿಲ್ದಾಣ

|

ಶಿವಮೊಗ್ಗ, ನವೆಂಬರ್ 08 : ಮಲೆನಾಡಿನ ಜನರಿಗೆ ಕೇಂದ್ರ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಶಿವಮೊಗ್ಗ ನಗರದಿಂದ ಮೂರು ಹೊಸ ರೈಲುಗಳು ಸಂಚಾರ ಆರಂಭವಾಗಲಿದೆ. ನೈಋತ್ಯ ರೈಲ್ವೆ ರೈಲುಗಳ ವೇಳಾಪಟ್ಟಿ ಅಂತಿಮಗೊಳಿಸಿದೆ.

ನವೆಂಬರ್ 10ರ ಭಾನುವಾರ ನೂತನ ರೈಲುಗಳ ಸಂಚಾರಕ್ಕೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಸಚಿವ ಕೆ. ಎಸ್. ಈಶ್ವರಪ್ಪ ಹಸಿರು ನಿಶಾನೆ ತೋರಿಸಲಿದ್ದಾರೆ. ಶಿವಮೊಗ್ಗ ನಗರದಿಂದ ಮೂರು ವಿವಿಧ ಸ್ಥಳಗಳಿಗೆ ಹೊಸ ರೈಲುಗಳು ಸಂಚಾರ ನಡೆಸಲಿವೆ.

ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿ ಬದಲು

ಶಿವಮೊಗ್ಗ ಟೌನ್-ಚೆನ್ನೈ, ಶಿವಮೊಗ್ಗ ಟೌನ್-ತಿರುಪತಿ, ಶಿವಮೊಗ್ಗ ಟೌನ್-ಮೈಸೂರು ನಗರಗಳಿಗೆ ನೂತನ ರೈಲು ಸಂಚಾರ ನಡೆಸಲಿದೆ. ಶಿವಮೊಗ್ಗದಿಂದ ಮೈಸೂರು, ಬೆಂಗಳೂರು ನಗರಕ್ಕೆ ರೈಲು ಸಂಚಾರವಿತ್ತು. ಈಗ ಹೊರ ರಾಜ್ಯಗಳಿಗೂ ರೈಲು ಸೇವೆ ಆರಂಭವಾಗುತ್ತಿದೆ.

ಹರಿಹರ-ಕೊಟ್ಟೂರು ರೈಲು ನಿಲ್ದಾಣ, ದರ, ವೇಳಾಪಟ್ಟಿ

ಕೆಲವು ದಿನಗಳ ಹಿಂದೆ ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲು ಸೇವೆಯನ್ನು ಜಿಲ್ಲೆಗೆ ಕೊಡುಗೆಯಾಗಿ ನೀಡಲಾಗಿತ್ತು. ಈಗ ಮತ್ತೆ ಮೂರು ಹೊಸ ರೈಲುಗಳನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತವರು ಜಿಲ್ಲೆಗೆ ನೀಡಲಾಗಿದೆ.

ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ಸಮಯ ಪರಿಷ್ಕರಣೆ

ಶಿವಮೊಗ್ಗ-ಚೆನ್ನೈ ವೀಕ್ಲಿ ಎಕ್ಸ್‌ಪ್ರೆಸ್

ಶಿವಮೊಗ್ಗ-ಚೆನ್ನೈ ವೀಕ್ಲಿ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 06221/06222 ಶಿವಮೊಗ್ಗ-ಚೆನ್ನೈ ನಡುವೆ ವಾರದಲ್ಲಿ ಒಂದು ದಿನ ಸಂಚಾರ ನಡೆಸಲಿದೆ. ಶಿವಮೊಗ್ಗದಿಂದ ಸೋಮವಾರ ರಾತ್ರಿ 11.55ಕ್ಕೆ ಹೊರಡುವ ರೈಲು ಮಂಗಳವಾರ ಬೆಳಗ್ಗೆ 11.15ಕ್ಕೆ ಚೆನ್ನೈ ತಲುಪಲಿದೆ. ಚೆನ್ನೈನಿಂದ ಪ್ರತಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಹೊರಡುವ ರೈಲು, ಬುಧವಾರ ಮುಂಜಾನೆ 3.55ಕ್ಕೆ ಶಿವಮೊಗ್ಗ ತಲುಪಲಿದೆ.

ಶಿವಮೊಗ್ಗದಿಂದ ಹೊರಡುವ ರೈಲು ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತುಮಕೂರು, ಚಿಕ್ಕಬಣಾವರ, ಬಾಣಸವಾಡಿ, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೇಟೆ ಮಾರ್ಗವಾಗಿ ಚೆನ್ನೈ ತಲುಪಲಿದೆ.

ಶಿವಮೊಗ್ಗ-ತಿರುಪತಿ ವೀಕ್ಲಿ ಎಕ್ಸ್‌ಪ್ರೆಸ್

ಶಿವಮೊಗ್ಗ-ತಿರುಪತಿ ವೀಕ್ಲಿ ಎಕ್ಸ್‌ಪ್ರೆಸ್

ಪ್ರತಿ ಬುಧವಾರ ಬೆಳಗ್ಗೆ 6.15ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು ರಾತ್ರಿ 8.05ಕ್ಕೆ ತಿರುಪತಿ ತಲುಪಲಿದೆ. ಪ್ರತಿ ಬುಧವಾರ ರಾತ್ರಿ 9.45ಕ್ಕೆ ತಿರುಪತಿಯಿಂದ ಹೊರಡುವ ರೈಲು ಗುರುವಾರ ಬೆಳಗ್ಗೆ 11.45ಕ್ಕೆ ಶಿವಮೊಗ್ಗಕ್ಕೆ ಬರಲಿದೆ.

ಶಿವಮೊಗ್ಗದಿಂದ ಹೊರಡುವ ರೈಲು ಭದ್ರಾವತಿ, ತರೀಕೆರೆ, ಬೀರೂರು, ಅಜ್ಜಂಪುರ, ಹೊಸದುರ್ಗ, ಚಿಕ್ಕಜಾಜೂರು, ಚಿತ್ರದುರ್ಗ, ಮೊಳಕಾಲ್ಮೂರು, ರಾಯದುರ್ಗ, ಬಳ್ಳಾರಿ, ಗುಂತಕಲ್, ಕೊಂಡಾಪುರಂ, ಯೆರಗುಂಟ್ಲಾ, ಕಡಪಾ ಮೂಲಕ ತಿರುಪತಿ ತಲುಪಲಿದೆ.

ಶಿವಮೊಗ್ಗ-ಮೈಸೂರು ವೀಕ್ಲಿ

ಶಿವಮೊಗ್ಗ-ಮೈಸೂರು ವೀಕ್ಲಿ

ಪ್ರತಿ ಸೋಮವಾರ ಸಂಜೆ 4.40ಕ್ಕೆ ಮೈಸೂರಿನಿಂದ ಹೊರಡುವ ರೈಲು ರಾತ್ರಿ 10.30ಕ್ಕೆ ಶಿವಮೊಗ್ಗ ತಲುಪಲಿದೆ. ಪ್ರತಿ ಗುರುವಾರ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದಿಂದ ಹೊರಡುವ ರೈಲು ಸಂಜೆ 7.05ಕ್ಕೆ ಮೈಸೂರು ತಲುಪಲಿದೆ.

ವೇಳಾಪಟ್ಟಿ ಬದಲು

ವೇಳಾಪಟ್ಟಿ ಬದಲು

ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸುವ ಜನ ಶತಾಬ್ದಿ ರೈಲನ್ನು ನಾಲ್ಕು ದಿನಗಳಿಂದ 6 ದಿನಕ್ಕೆ ವಿಸ್ತರಣೆ ಮಾಡಲಾಗಿತ್ತು. ಬೆಂಗಳೂರು-ಶಿವಮೊಗ್ಗ ಪ್ಯಾಸೆಂಜರ್ ರೈಲು ಸಂಚಾರದ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿತ್ತು.

English summary
Shivamogga city get three trains. New train will run from Shivamogga Tirupati, Chennai and Mysuru. Shivamogga MP B.Y.Raghavendra will flag off for the service on November 10, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more