• search
 • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೀರ್ಥಹಳ್ಳಿ ಶಾಸಕ ಆರಗ ಜ್ನಾನೇಂದ್ರಗೆ ಕೊರೊನಾ ಸೋಂಕು

|

ತೀರ್ಥಹಳ್ಳಿ, ಆಗಸ್ಟ್ 31: ತೀರ್ಥಹಳ್ಳಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರಗೆ ಕೊರೊನಾ ಸೋಂಕು ತಗುಲಿದೆ.

   ಇಡೀ ಪ್ರಪಂಚದಲ್ಲೇ ಇಷ್ಟು ಪ್ರಕರಣಗಳು ಯಾವ ದೇಶದಲ್ಲೂ ಪತ್ತೆಯಾಗಿಲ್ಲ | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅವರೇ ಖುದ್ದಾಗಿ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

   ಮಾಜಿ ಸಚಿವ ಎಚ್‌ಡಿ ರೇವಣ್ಣಗೆ ಕೊರೊನಾ ಸೋಂಕು ದೃಢ

   'ನಾನು ಇಂದು ಕೊವಿಡ್ ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲವಾದರೂ, ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ.

   ನಿಮ್ಮ ಶುಭಾಶೀರ್ವಾದಗಳೊಂದಿಗೆ ಶೀಘ್ರದಲ್ಲೇ ನಿಮ್ಮ ಸೇವೆಗೆ ಹಿಂತಿರುಗುವ ವಿಶ್ವಾಸವಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದಂತಹ ಎಲ್ಲರೂ ಜಾಗರೂಕರಾಗಿರಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

   ನನ್ನ ಕಾರು ಚಾಲಕನಿಗೆ ಕಳೆದೆರೆಡು ದಿನದಿಂದ ಜ್ವರ-ನೆಗಡಿ ಕಾಣಿಸಿಕೊಂಡಿತ್ತು. ಇಂದು ಅವರಿಗೆ ಕೊರೊನಾ ಪರೀಕ್ಷೆಗೊಳಪಡಿಸಿದಾಗ ಪ್ರಾರಂಭಿಕ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

   ಸಚಿವ ಸೋಮಶೇಖರ್‌, ಶಾಸಕ ಜಿಟಿಡಿಗೂ ಕೊರೊನಾ ಸೋಂಕು ದೃಢ

   ಆದರೆ ನಾನು ಮತ್ತು ನನ್ನ ಆಪ್ತ ಸಹಾಯಕ ಹೊದಲ ಬಸವರಾಜ ಮತ್ತು ನಮ್ಮ ಜೊತೆ ಹೆಚ್ಚು ಸಂಪರ್ಕದಲ್ಲಿ ಇದ್ದಂತಹ ತಾ.ಪಂ ಸದಸ್ಯರಾದ ಕುಕ್ಕೆ ಪ್ರಶಾಂತ್ ರಿಗೆ ಪರೀಕ್ಷೆ ಮಾಡಿಸಿದಾಗ ಎಲ್ಲರಿಗೂ ಕೊರೊನಾ ನೆಗೆಟಿವ್ ಬಂದಿದೆ.

   ಆದರೂ ಕೂಡ ಮುಂಜಾಗ್ರತೆಯ ದೃಷ್ಟಿಯಿಂದ ಕೆಲವು ದಿನ ನಾವು ಕೂಡ ಕ್ವಾರಂಟೈನ್ ಒಳಗಾಗುತ್ತಿದ್ದೇವೆ. ಹಾಗಾಗಿ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಸಾರ್ವಜನಿಕರ ಭೇಟಿಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಿದ್ದೇನೆ. ಎಲ್ಲರೂ ಸಹಕರಿಸಬೇಕಾಗಿ ವಿನಂತಿಸುತ್ತಿದ್ದೇನೆ ಎಂದಿದ್ದಾರೆ.

   English summary
   Thirthahalli BJP MLA Araga Jnanedra Tested positive for Coronavirus On Monday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X