ಯಶವಂತಪುರ - ಶಿವಮೊಗ್ಗ- ತಾಳಗುಪ್ಪ ಮಾರ್ಗದಲ್ಲಿ ವಿಶೇಷ ಎಕ್ಸಪ್ರೆಸ್ ರೈಲು ಸೇವೆ: ಸಮಯ, ದಿನಾಂಕಗಳ ವಿವರ ತಿಳಿಯಿರಿ
Indian Railways: ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಅನುಕೂಲಕ್ಕೆ ತಕ್ಕಂತೆ ಹಬ್ಬ-ಹರಿದಿನಗಳು, ವಿಶೇಷ ಸಂದರ್ಭಗಳಲ್ಲಿ ವಿಶೇಷ ರೈಲು ಸೇವೆಯನ್ನು ಕಲ್ಪಿಸುತ್ತಾ ಬಂದಿದೆ. ಇದೀಗ ಫೆಬ್ರವರಿ 3ರಿಂದ ಯಶವಂತಪುರ - ಶಿವಮೊಗ್ಗ- ತಾಳಗುಪ್ಪ ಮಾರ್ಗದಲ್ಲಿ ವಿಶೇಷ ಎಕ್ಸಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಹಾಗಾದ್ರೆ, ಸಮಯ, ದಿನಾಂಕಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯಶವಂತಪುರ-ತಾಳಗುಪ್ಪ ನಡುವೆ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಣೆ ನಿರ್ವಹಿಸಲು ರೈಲ್ವೆ ಇಲಾಖೆ ಫೆಬ್ರವರಿ 3ರಿಂದ 10ರವರೆಗೆ 5 ಟ್ರಿಪ್ ವಿಶೇಷ ಎಕ್ಸಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳು ವಿಶೇಷ ದಿನಗಳಲ್ಲಿ ಸಂಚರಿಸಿ ಭಕ್ತರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಒದಗಿಸಲಿವೆ.

ಸಾಗರ ತಾಲ್ಲೂಕಿನಲ್ಲಿ ನಡೆಯಲಿರುವ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಇಲಾಖೆ ಈ ಕ್ರಮ ತೆಗೆದುಕೊಂಡಿದೆ. ರೈಲು ಸಂಖ್ಯೆ 06585 / 06586 ಯಶವಂತಪುರ - ತಾಳಗುಪ್ಪ - ಯಶವಂತಪುರ ವಿಶೇಷ ಎಕ್ಸಪ್ರೆಸ್ 4 ಟ್ರಿಪ್‌ಗಳು ಸಂಚಾರ ನಡೆಸಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ರೈಲುಗಳ ಸಮಯ, ದಿನಾಂಕಗಳ ವಿವರ
* ರೈಲು ಸಂಖ್ಯೆ 06585 - ಯಶವಂತಪುರ - ತಾಳಗುಪ್ಪ ವಿಶೇಷ ಎಕ್ಸಪ್ರೆಸ್ ಈ ರೈಲು ಫೆಬ್ರವರಿ 3, 5, 8 ಮತ್ತು 10ರಂದು ಸಂಚರಿಸಲಿದೆ. ಈ ರೈಲು ಯಶವಂತಪುರದಿಂದ ರಾತ್ರಿ 10:45ಕ್ಕೆ ಹೊರಟು, ಮರುದಿನ ಬೆಳಗ್ಗೆ 05:05ಕ್ಕೆ ತಾಳಗುಪ್ಪಕ್ಕೆ ತಲುಪಲಿದೆ.
* ರೈಲು ಸಂಖ್ಯೆ 06586 ತಾಳಗುಪ್ಪ - ಯಶವಂತಪುರ ವಿಶೇಷ ಎಕ್ಸಪ್ರೆಸ್ ರೈಲು ಫೆಬ್ರವರಿ 4, 6, 9 ಮತ್ತು 11ರಂದು ಸಂಚಾರ ಮಾಡಲಿದೆ. ಈ ರೈಲು ತಾಳಗುಪ್ಪದಿಂದ ಬೆಳಗ್ಗೆ 09:30ಕ್ಕೆ ಹೊರಟು, ಸಂಜೆ 5:15ಕ್ಕೆ ಯಶವಂತಪುರಕ್ಕೆ ತಲುಪಲಿದೆ.
ಇನ್ನೂ 07 ಸ್ಲೀಪರ್ ಕ್ಲಾಸ್ ಕೋಚ್‌ಗಳು, 06 ಸಾಮಾನ್ಯ ದ್ವಿತೀಯ ದರ್ಜೆ ಕೋಚ್‌ಗಳು ಮತ್ತು 02 ಎಸ್ಎಲ್ಆರ್/ಡಿ ಕೋಚ್‌ಗಳು ರೈಲಿನಲ್ಲಿ ಇರಲಿವೆ.
* ರೈಲು ಸಂಖ್ಯೆ 06587 ಯಶವಂತಪುರ - ತಾಳಗುಪ್ಪ ವಿಶೇಷ ಎಕ್ಸಪ್ರೆಸ್ ಈ ರೈಲು ಫೆಬ್ರವರಿ 6 ರಂದು ಸಂಚಾರ ಮಾಡಲಿದೆ. ಈ ರೈಲು ಯಶವಂತಪುರದಿಂದ ರಾತ್ರಿ 10:45ಕ್ಕೆ ಹೊರಟು, ಮರುದಿನ ಬೆಳಿಗ್ಗೆ 05:05ಕ್ಕೆ ತಾಳಗುಪ್ಪಕ್ಕೆ ತಲುಪಲಿದೆ.
* ರೈಲು ಸಂಖ್ಯೆ 06588 ತಾಳಗುಪ್ಪ - ಯಶವಂತಪುರ ವಿಶೇಷ ಎಕ್ಸಪ್ರೆಸ್ ಫೆಬ್ರವರಿ 7ರಂದು ಸಂಚಾರ ಮಾಡಲಿದೆ. ಈ ರೈಲು ತಾಳಗುಪ್ಪದಿಂದ ಬೆಳಗ್ಗೆ 09:30ಕ್ಕೆ ಹೊರಟು, ಸಂಜೆ 5:15ಕ್ಕೆ ಯಶವಂತಪುರಕ್ಕೆ ತಲುಪಲಿದೆ. 01 ಎಸಿ ಟು ಟಯರ್ ಕೋಚ್, 02 ಎಸಿ ತ್ರಿ ಟಯರ್ ಕೋಚ್‌ಗಳು, 10 ಸ್ಲೀಪರ್ ಕ್ಲಾಸ್ ಕೋಚ್‌ಗಳು, 05 ಸಾಮಾನ್ಯ ದ್ವಿತೀಯ ದರ್ಜೆ ಕೋಚ್‌ಗಳು ಮತ್ತು 02 ಎಸ್ಎಲ್ಆರ್/ಡಿ ಕೋಚ್‌ಗಳು ಇರಲಿವೆ.
ನಿಲುಗಡೆಗಳ ವಿವರ: ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಕೊನಗವಳ್ಳಿ ಹಾಲ್ಟ್, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಲ ಹಾಲ್ಟ್, ಆನಂದಪುರಂ, ಅಡ್ಡೇರಿ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ಆಗಲಿವೆ.
ವಿಶೇಷ ಎಕ್ಸಪ್ರೆಸ್ ರೈಲುಗಳನ್ನು ಹಬ್ಬ-ಹರಿದಿನಗಳು, ಜಾತ್ರೆಗಳ ಸಂದರ್ಭದಲ್ಲಿ ಹೆಚ್ಚಿದ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಓಡಿಸಲಾಗುತ್ತದೆ. ಆರಾಮದಾಯಕ ಪ್ರಯಾಣ, ಸುರಕ್ಷಿತ ಪ್ರಯಾಣ ಹಿನ್ನೆಲೆ ಬಹುತೇಕ ಮಂದಿ ರೈಲಿನಲ್ಲಿ ಪ್ರಯಾಣ ಮಾಡಲಿ ಬಯಸುತ್ತಾರೆ. ಆದ್ದರಿಂದ ವಿಶೇಷ ಸಂದರ್ಭಗಳಲ್ಲಿ ಇಂತಹ ಮಹತ್ವದ ನಿರ್ಧಾರವನ್ನು ರೈಲ್ವೆ ಇಲಾಖೆ ತೆಗೆದುಕೊಳ್ಳುತ್ತಾ ಬಂದಿದೆ.












Click it and Unblock the Notifications