ಶಿವಮೊಗ್ಗದ 6 ಪೊಲೀಸರಿಗೆ ಮುಖ್ಯಮಂತ್ರಿ ಪ್ರಶಸ್ತಿ ಪದಕ

ಶಿವಮೊಗ್ಗ, ಆಗಸ್ಟ್.27: ಪೊಲೀಸರ ಉತ್ತಮ ಸೇವೆ ಗುರುತಿಸಿ ನೀಡುವ 2017 -2018ನೇ ಸಾಲಿನ ಮುಖ್ಯಮಂತ್ರಿಗಳ ಪ್ರಶಸ್ತಿ ಪದಕಕ್ಕೆ ಶಿವಮೊಗ್ಗದಿಂದ ಓರ್ವ ಡಿವೈಎಸ್ಪಿ ಸೇರಿದಂತೆ ಒಟ್ಟು 6 ಜನ ಪೊಲೀಸರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು 122 ಪೊಲೀಸ್ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಗುರುತಿಸಿ ನೀಡಲಾಗುತ್ತಿರುವ ಮುಖ್ಯಮಂತ್ರಿಗಳ ಪ್ರಶಸ್ತಿ ಪದಕಕ್ಕೆ ಶಿವಮೊಗ್ಗದಿಂದ ಶಿವಮೊಗ್ಗ ಉಪವಿಭಾಗದ ಡಿವೈಎಸ್ಪಿ ಪಿ.ಎಸ್.ಸುದರ್ಶನ್, ಕೆ.ಎಸ್.ಆರ್.ಪಿಯ 8 ನೇ ಪಡೆಯ ಸ್ಪೆಷಲ್ ಎಆರ್ ಎಸ್ಐನ ಎಂ.ಎಸ್.ಪ್ಯಾರಿಜಾನ್.

ಕೆ.ಎಸ್.ಆರ್.ಪಿ 8 ನೇ ಪಡೆಯ ಸ್ಪೆಷಲ್ ಮೀಸಲು ಹೆಚ್.ಸಿಯ ಎನ್.ಮಾತಿಬೆಟ್ಕರ್, ಪಶ್ಚಿಮ ಸಂಚಾರ ಠಾಣೆಯ ಸಿಬ್ಬಂದಿ ಸಿ.ಆಂಥೋಣಿ, ಕೆ.ಎಸ್.ಪಿ.ಆರ್.ಪಿ 8ನೇ ಪಡೆಯ ಅನುಯಾಯಿ ಜಮೇದಾರರಾದ ಬಿ.ದೇವೇಂದ್ರಪ್ಪ ಹಾಗೂ ಆರ್.ನಾಗರಾಜಪ್ಪ ಅವರನ್ನು ಗುರುತಿಸಿ ಮುಖ್ಯಮಂತ್ರಿಗಳ ಪ್ರಶಸ್ತಿ ಪದಕ ನೀಡಲಾಗುತ್ತಿದೆ.

Six policemen of Shimoga have been awarded the Chief Ministers Medal

ರಾಜ್ಯ ಗುಪ್ತ ವಾರ್ತೆ ಶಿವಮೊಗ್ಗ ಘಟಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಎಂ.ಎನ್.ಶಿವಸ್ವಾಮಿ ಅವರು ಸಹ ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ 10 ಸಾವಿರ ನಗದು ಹಾಗೂ ಬಂಗಾರದ ಪದಕ ನೀಡಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+