ಶಿವಮೊಗ್ಗ ವಿಶ್ವನಾಥ್ ಶೆಟ್ಟಿ ಕೊಲೆ: ಮತ್ತೆ ಮೂವರ ಬಂಧನ

ಶಿವಮೊಗ್ಗ, ಏ.21: ಫೆಬ್ರವರಿ ತಿಂಗಳ ಕೋಮು ಗಲಭೆ ವೇಳೆ ನಗರದ ಹೊರ ವಲಯದ ಗಾಜನೂರು ಬಳಿ ನಡೆದ ವಿಶ್ವನಾಥ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರನ್ನು ಬಂಧಿಸಲಾಗಿದ್ದು ಬಂಧಿತರ ಸಂಖ್ಯೆ 7 ಕ್ಕೆ ಏರಿದೆ.

ಮಂಗಳೂರಿನ ಬಿಲ್ಮಿಲಾ ಮಂಜಿಲ್ ವಾಸಿ ಅಬುಬಕರ್ (32), ಉಮರ್ ಫಾರೂಕ್ (25) ಮಹಮದ್ ಇಕ್ಬಾಲ್ (27) ಬಂಧಿತ ಆರೋಪಿಗಳು. ಡಿವೈಎಸ್ಪಿ ಡಾ. ರಾಮ್ ಎಲ್. ಅರೆಸಿದ್ದಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.[ಶಿವಮೊಗ್ಗ ಗಲಭೆ: ವಿಶ್ವನಾಥ್ ಕೊಲೆ ಆರೋಪಿಗಳ ಬಂಧನ]

shivamogga

ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಮಾಹಿತಿ ಕಲೆ ಹಾಕಲಾಗಿದ್ದು ಇನ್ನಷ್ಟು ಜನರನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಕೋಮು ಸೌಹಾರ್ದ ಕದಡಿದ್ದ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ನಿರತವಾಗಿದೆ.[ಶಿವಮೊಗ್ಗದಲ್ಲಿ ಗಲಭೆ ನಡೆದಿದ್ದು ಹೇಗೆ?]

ಫೆ. 19 ರಂದು ಏನಾಗಿತ್ತು?

ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಪಿಎಫ್‍ಐ ಸಮಾವೇಶದ ಮೆರವಣಿಗೆ ವೇಳೆ ಗುಂಪು ಘರ್ಷಣೆ ಉಂಟಾಗಿತ್ತು. ಗಾಜನೂರು ಮಾರ್ಗವಾಗಿ ಮಂಗಳೂರಿಗೆ ಹಿಂದಿರುಗುತ್ತಿದ್ದ ತಂಡ ವಿಶ್ವನಾಥ್ ಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿತ್ತು. ತೀವ್ರ ಗಾಯಗೊಂಡಿದ್ದ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಘಟನೆ ನಂತರ ಶಿವಮೊಗ್ಗದಲ್ಲಿ ವಾರಗಳ ಕಾಲ ನಿಷೇಧಾಜ್ಞೆ ಹೇರಲಾಗಿತ್ತು.[ಶಿವಮೊಗ್ಗ ಗಲಭೆ: ಕೊಲೆಯಾಗಿದ್ದು ಬೇರೆಯದೇ ಕಾರಣಕ್ಕೆ!]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+