Shivamogga: ಕೆಎಸ್‌ ಈಶ್ವರಪ್ಪ ವಿರುದ್ಧ ಮುಸ್ಲಿಮರ ಪ್ರತಿಭಟನೆ: ಡಿಸಿ ಕಚೇರಿ ಮುಂದೇ ಆಜಾನ್ ಕೂಗಿದ ವ್ಯಕ್ತಿ, ಆಗಿದ್ದೇನು?

ಮಲೆನಾಡು ಜಿಲ್ಲೆಯಾದ ಶಿವಮೊಗ್ಗದ ಜಿಲ್ಳಾಧಿಕಾರಿ ಕಚೇರಿ ಬೆನ್ನು ಮಾಡಿ ನಿಂತ ಮುಸಲ್ಮಾನ್ ಸಮುದಾಯದ ವ್ಯಕ್ತಿಯೊಬ್ಬ ಆಜಾನ್ ಕೂಗಿದ ಘಟನೆ ಭಾನುವಾರ ನಡೆದಿದೆ, ಮುಂದೇನಾಯ್ತು ತಿಳಿಯಿರಿ.

ಶಿವಮೊಗ್ಗ, ಮಾರ್ಚ್ 19: ಮಲೆನಾಡು ಜಿಲ್ಲೆಯಾದ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಬೆನ್ನು ಮಾಡಿ ನಿಂತ ಮುಸಲ್ಮಾನ್ ಸಮುದಾಯದ ವ್ಯಕ್ತಿಯೊಬ್ಬ ಆಜಾನ್ ಕೂಗಿದ ಘಟನೆ ಭಾನುವಾರ (Mar 19) ನಡೆದಿದೆ.

ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಅವರು ಆಜಾನ್ ಕುರಿತು ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಈಶ್ವರಪ್ಪನವರ ವಿರುದ್ಧ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಈಶ್ವರಪ್ಪನವರ ವಿರುದ್ಧ ಜೋರಾಗಿ ಘೋಷಣೆಗಳು ಮೊಳಗಿದವು.

Shivamogga: Muslims protest ahead DC office against KS Eshwarappa: young man shouted Azaan

ಅದೇ ಸಂದರ್ಭದಲ್ಲಿ ಪ್ರತಿಭಟನಾಕಾರರ ಮಧ್ಯೆ ಎದ್ದು ನಿಂತ ವ್ಯಕ್ತಿಯೊಬ್ಬ ಆಜಾನ್ ಕೂಗಿ ಉದ್ಧಟತನ ಮೆರೆದಿದ್ದಾನೆ. ಈ ದೃಶ್ಯ ಸ್ಥಳೀಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಿಗಿ ಕ್ರಮ ಜರುಗಿಸಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ "ಕೆ.ಎಸ್‌.ಈಶ್ವರಪ್ಪ ನಮ್ಮ ತಂದೆ-ತಾಯಿಗೆ ವಿರುದ್ಧವಾಗಿ ಮಾತನಾಡಿದರೂ ಬಿಡಬಹುದು. ಆದರೆ ಅಲ್ಲಾ- ಆಜಾನ್ ಬಗ್ಗೆ ಮಾತನಾಡಿದ್ದಾರೆ. ಬೇಕಾದರೆ ನಾವು ವಿಧಾನಸೌಧದ ಮುಂದೆಯೂ ನಾವೆಲ್ಲ ಮುಸ್ಲಿಂರು ಆಜಾನ್ ಹೇಳುತ್ತೇವೆ. ನಾವೇನು ಹೇಡಿಗಳಲ್ಲ" ಎಂದು ಡಿಸಿ ಕಚೇರಿಯ ಹೊರಗೆ ನಿಂತಿದ್ದ ವ್ಯಕ್ತಿಯೊಬ್ಬ ಪ್ರತಿಕ್ರಿಯಿಸಿದ್ದಾನೆ.

ಘಟನೆಯ ಸ್ವರೂಪ ತೀವ್ರಗೊಳ್ಳಿತ್ತಿದ್ದ ಹಾಗೆಯೇ ಶಿವಮೊಗ್ಗ ಜಿಲ್ಲೆ ಪೊಲೀಸರು ಸೆಕ್ಷನ್ 107 ಅಡಿಯಲ್ಲಿ ಪ್ರಕರಣ ಆಜಾನ್ ಕೂಗಿದ್ದವನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಾಖಲಿಸಿಕೊಂಡಿದ್ದಾರೆ. ಇಂತಹ ಚಟುವಟಿಕೆಗಳು ಮರುಕಳಿಸದಂತೆ ಯುವ ಪ್ರತಿಭಟನಾಕಾರರಿಗೆ ಸೂಚಿಸಿದ್ದೇವೆ. ಸದ್ಯ ಪ್ರತಿಭಟನಾಕಾರರನ್ನು ಹೋಗಲು ಬಿಟ್ಟಿದ್ದು, ಯಾರನ್ನು ವಶಪಡಿಸಿಕೊಂಡಿಲ್ಲ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧೀಕ್ಷರು ಹೇಳಿದರು.

ಕೆಎಸ್‌ ಈಶ್ವರಪ್ಪ ಹೇಳಿದ್ದೇನು?
ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರು ಕಳೆದ ಭಾನುವಾರ ಆಜಾನ್‌ಗಾಗಿ ಬಳಸುವ ಧ್ವನಿವರ್ಧಕಗಳು ಜನರಿಗೆ ತೊಂದರೆ ಉಂಟು ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ಸದ್ಯ ಪರೀಕ್ಷೆಗೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆ ಆಗುತ್ತದೆ ಎಂದಿದ್ದರು.

ಕಳೆದ ಭಾನುವಾರ ಶಾಂತಿನಗರದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಆಜಾನ್ ಕುರಿತು ಸುದ್ದಿಗಾರರ ಪ್ರಶ್ನೆ ಉತ್ತರಿಸುವಾಗ ಈ ಮೇಲಿನಂತ ಪ್ರತಿಕ್ರಿಯಿಸಿದ್ದರು. ಅದರ ವಿರುದ್ಧ ಇದೀಗ ಶಿವಮೊಗ್ಗದಲ್ಲಿ ಮುಸ್ಲಿಂರು ಪ್ರತಿಭಟಿಸಿ, ಆಜಾನ್ ಕೂಗಿ ಉದ್ಧಟತನ ಮೆರೆದಿರುವುದು ವಿಡಿಯೋ ಮೂಲಕ ಗೊತ್ತಾಗಿದೆ.

Shivamogga: Muslims protest ahead DC office against KS Eshwarappa: young man shouted Azaan

ಈಶ್ವರಪ್ಪ ವಿರುದ್ಧ ಮಾಜಿ ಸಿಎಂ ವಾಗ್ದಾಳಿ
ಇತ್ತ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌ಡಿ ಡಿ.ಕುಮಾರಸ್ವಾಮಿ, ಆಜಾನ್ ಹೇಳಿಕೆಯ ವಿಚಾರದಲ್ಲಿ ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಇವೆಲ್ಲವುಗಳು ಅತೀ ಸೂಕ್ಷ್ಮ ವಿಷಯಗಳು. ಇಂತಹ ಘಟನೆಗಳು ನಡೆಯಲು ಬಿಜೆಪಿಯೇ ಕಾರಣ. ಈಶ್ವರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಇತಿಮಿತಿಯಲ್ಲಿರಬೇಕು. ಭಾರತ ದೇಶ ಶಾಂತಿಯುತವಾಗಿರಬೇಕು. ದೇಶದೊಳಗಿನ ಸಾಮರಸ್ಯ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ವಾಗ್ದಾಳಿ ನಡೆಸಿದರು.

ಶಿವಮೊಗ್ಗ ಕೋಮು ದಳ್ಳುರಿ ವಿಚಾರ

ಶಿವಮೊಗ್ಗ ಕೋಮು ದಳ್ಳುರಿ ವಿಚಾರವಾಗೇ ಇತ್ತೀಚೆಗೆ ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಕಳೆದ ವರ್ಷ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯಾಗಿತ್ತು. ಆಗಲೂ ಈಶ್ವರಪ್ಪನವರ ಹೇಳಿಕೆಯಿಂದ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು. ಸಾಕಷ್ಟು ಗಲಾಟೆಗಳು ಸಂಭವಿಸಿದ್ದವು. ಇದೀಗ ಮತ್ತೆ ಅಂತದ್ದೇ ವಾತಾವರಣ ಎದುರಾಗಂತೆ ಜಿಲ್ಲಾ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+