ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಅಕ್ರಮ ಮರಳು ಅಡ್ಡೆ ಮೇಲೆ ದಾಳಿ, 11 ಮಂದಿ ಬಂಧನ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

Recommended Video

Shivamogga Tragedy : Ganesha Idol immersion

ಶಿವಮೊಗ್ಗ, ನವೆಂಬರ್ 28 : ಅಕ್ರಮ ಮರಳುಗಾರಿಕೆ ಅಡ್ಡೆಯ ಮೇಲೆ ಶಿವಮೊಗ್ಗ ಜಿಲ್ಲಾ ಅಪರಾಧ ದಳ (ಡಿಸಿಬಿ) ಪೊಲೀಸರು ಸೋಮವಾರ ಮಧ್ಯರಾತ್ರಿ ದಾಳಿ ನಡೆಸಿದ್ದಾರೆ.

ಚಂದ್ರಗುತ್ತಿಯಿಂದ ಸೊರಬ ಪಟ್ಟಣಕ್ಕೆ ಅಕ್ರಮ ಮರಳು ಸಾಗಿಸುತ್ತಿದ್ದ 3 ಟಿಪ್ಪರ್, 8 ಟ್ರ್ಯಾಕ್ಟರ್ ಸಹಿತ ಹನ್ನೊಂದು ಜನರನ್ನು ಕರಡಿಗೆರೆ ಕ್ರಾಸ್ ಸಮೀಪ ಬಂಧಿಸಿದ್ದಾರೆ.

Shivamogga crime branch police has arrest 11 people for involvement in illegal sand mining

ಜಿಲ್ಲಾರಕ್ಷಣಾಧಿಕಾರಿ ಶ್ರೀ ಅಭಿನವ್ ಖರೆ ಅವರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ದಳ (ಡಿಸಿಬಿ) ಪೊಲೀಸ್ ಇನ್ಸ್ ಪೆಕ್ಟರ್ ಕುಮಾರ್ ಕೆ. ಹಾಗೂ ಸಿಬ್ಬಂದಿ ಸೋಮವಾರ ಮಧ್ಯರಾತ್ರಿ ದಾಳಿ ಮಾಡಿದ್ದಾರೆ.

1) ವಾಸು, 2) ಚಂದ್ರು , 3 ) ಪರಮೇಶ್ವರ, 4) ಮಹೇಂದ್ರ, 5) ಲಕ್ಷ್ಮಣ್, 6) ಅಶೋಕ, 7) ರಾಘು, 8) ಅಶೋಕ, 9) ಕನ್ನಪ್ಪ, 10) ಪ್ರವೀಣ, 11) ಪ್ರಶಾಂತ್ ಎನ್ನುವರನ್ನು ಬಂಧಿಸಿ ಸೊರಬ ಪೊಲೀಸರ ವಶಕ್ಕೆ ನೀಡಲಾಗಿದೆ. ಈ ಬಗ್ಗೆ ಸೊರಬ ಠಾಣೆ ಗುನ್ನೆ ನಂ. 272/17ರಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಈ ಪ್ರಕರಣ ಜಿಲ್ಲೆಯಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ವಾಹನ, ಮರಳು, ಆರೋಪಿಗಳನ್ನು ವಶಪಡಿಸಿಕೊಂಡ 2ನೇ ಪ್ರಕರಣವಾಗಿದೆ. ದೊಡ್ಡ ಮರಳು ಮಾಫಿಯಾ ಗ್ಯಾಂಗ್ ಅನ್ನು ಬಂಧಿಸಿರುವ ಡಿಸಿಬಿ ತಂಡಕ್ಕೆ ಜಿಲ್ಲಾಧಿಕಾರಿ ಅಭಿನಂದನೆ ಸಲ್ಲಿಸಿದ್ದಾರೆ.

English summary
Shivamogga crime branch police has arrest 11 people for involvement in illegal sand mining on Monday late night, Seized 3 tppers, 8 tracters with sand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X