ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧು ಬಂಗಾರಪ್ಪಗೆ ಹಲವು ಪ್ರಶ್ನೆ ಕೇಳಿದ ಕುಮಾರ್ ಬಂಗಾರಪ್ಪ!

|
Google Oneindia Kannada News

Recommended Video

ಮಧು ಬಂಗಾರಪ್ಪಗೆ ಹಲವು ಪ್ರಶ್ನೆ ಹಾಕಿದ ಕುಮಾರ್ ಬಂಗಾರಪ್ಪ ! | Oneindia Kannada

ಶಿವಮೊಗ್ಗ, ಅಕ್ಟೋಬರ್ 23 : ಶಿವಮೊಗ್ಗ ಲೋಕಸಭಾ ಉಪ ಚುನಾವಣಾ ಕಣ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ನಡುವಿನ ಮಾತಿನ ಸಮರಕ್ಕೆ ಕಾರಣವಾಗಿದೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅವರು, 'ಜೆಡಿಎಸ್ ಪಕ್ಷದ ಅಭ್ಯರ್ಥಿ ಆಯ್ಕೆಯೇ ಗೊಂದಲದಿಂದ ಕೂಡಿದೆ. ಕಳೆದ ಬಾರಿ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಬಂದು ಆಟ ಆಡಿ ಹೋದ ನಂತರ ಮತ್ತೆ ಈ ಕಡೆ ಮುಖ ಹಾಕಿಲ್ಲ' ಎಂದು ಆರೋಪಿಸಿದರು.

ಮಧು ಮತ್ತೆ ವಿದೇಶಕ್ಕೆ ಹೋಗಲಿದ್ದಾರೆ : ಕುಮಾರ್ ಬಂಗಾರಪ್ಪ ಲೇವಡಿಮಧು ಮತ್ತೆ ವಿದೇಶಕ್ಕೆ ಹೋಗಲಿದ್ದಾರೆ : ಕುಮಾರ್ ಬಂಗಾರಪ್ಪ ಲೇವಡಿ

'ಅಲ್ಪ ಸಂಖ್ಯಾತರು ಮತ್ತು ಹಿಂದುಳಿದವರು ಬಿಜೆಪಿಗೆ ಮತ ನೀಡುವುದಿಲ್ಲ ಎಂಬ ಮಧು ಬಂಗಾರಪ್ಪ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಹಾಗಾದರೆ ಮೊದಲು ಅವರು ಚುನಾವಣೆಗೆ ನಿಂತು ಗೆದ್ದಾಗ ಯಾರು ಬೆಂಬಲ ನೀಡಿದ್ದರು? ಎಂದು' ಕುಮಾರ್ ಬಂಗಾರಪ್ಪ ಪ್ರಶ್ನೆ ಮಾಡಿದರು.

ಶಿವಮೊಗ್ಗ ಚುನಾವಣಾ ಚಿತ್ರಣ ಅಂತಿಮ, ಇನ್ನು ಪ್ರಚಾರದ ಭರಾಟೆಶಿವಮೊಗ್ಗ ಚುನಾವಣಾ ಚಿತ್ರಣ ಅಂತಿಮ, ಇನ್ನು ಪ್ರಚಾರದ ಭರಾಟೆ

ನವೆಂಬರ್ 3ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣದಲ್ಲಿದ್ದಾರೆ. ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ.

ಶಿವಮೊಗ್ಗ ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ರಣತಂತ್ರ!ಶಿವಮೊಗ್ಗ ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ರಣತಂತ್ರ!

ಮೂಲ ಉದ್ದೇಶವೇನು?

ಮೂಲ ಉದ್ದೇಶವೇನು?

'ಜೆಡಿಎಸ್ ಅಭ್ಯರ್ಥಿಗೆ ಸಮಾಜದ ಬಗ್ಗೆ ಅಷ್ಟುಕಾಳಜಿ ಇದೆಯೇ? ಇದ್ದರೆ ಶರಾವತಿ ದಂತ ವೈದ್ಯಕೀಯ ಕಾಲೇಜು ಜಾಗವನ್ನು ಸಮಾಜಕ್ಕೆ ಮರಳಿಸಲಿ. ಆ ಜಾಗದ ಮೂಲ ಉದ್ದೇಶವನ್ನು ಉಲ್ಲಂಘಿಸಿ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಈ ಕುರಿತು ಕಾನೂನು ಹೋರಾಟ ನಡೆಸುತ್ತಿದ್ದೇವೆ' ಎಂದು ಕುಮಾರ್ ಬಂಗಾರಪ್ಪ ಹೇಳಿದರು.

ಶಿವಮೊಗ್ಗ : ಮಧು ಬಂಗಾರಪ್ಪ ಆಸ್ತಿ ಐದು ವರ್ಷಗಳಲ್ಲಿ ಡಬ್ಬಲ್ಶಿವಮೊಗ್ಗ : ಮಧು ಬಂಗಾರಪ್ಪ ಆಸ್ತಿ ಐದು ವರ್ಷಗಳಲ್ಲಿ ಡಬ್ಬಲ್

ಚುನಾವಣೆಗೆ ಬೆಂಬಲ ನೀಡಿದ್ದು ಯಾರು?

ಚುನಾವಣೆಗೆ ಬೆಂಬಲ ನೀಡಿದ್ದು ಯಾರು?

'ಮಧು ಬಂಗಾರಪ್ಪ ಅವರು ಮೊದಲು ತಾವು ಮಾಡಿದ ತಪ್ಪಿಗೆ ಪಶ್ಚಾತಾಪ ಪಡಲಿ ನಂತರ ಮುಂದಿನ ಮಾತು ಆಡೋಣ. ಅಲ್ಪ ಸಂಖ್ಯಾತರು, ಹಿಂದುಳಿದವರು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಹಾಗಾದರೆ ಅವರು ಮೊದಲು ಚುನಾವಣೆಗೆ ನಿಂತು ಗೆದ್ದಾಗ ಯಾರು ಬೆಂಬಲ ನೀಡಿದ್ದರು? ಎಂದು ಕುಮಾರ್ ಬಂಗಾರಪ್ಪ ಪ್ರಶ್ನಿಸಿದರು.

ಬಂಗಾರಪ್ಪ ಪುತ್ಥಳಿ ಸ್ಥಾಪಿಸಿ

ಬಂಗಾರಪ್ಪ ಪುತ್ಥಳಿ ಸ್ಥಾಪಿಸಿ

'ಮಧು ಬಂಗಾರಪ್ಪ ಅವರ ಕೆಲಸಗಳಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕುಮ್ಮಕ್ಕು ನೀಡುತ್ತಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಅವರು ಎಸ್.ಬಂಗಾರಪ್ಪ ಅವರ ಪುತ್ಥಳಿ ಸ್ಥಾಪನೆಗೆ ಇರುವ ಅಡೆ-ತಡೆ ನಿವಾರಿಸಿ ಮುಂದುವರೆಯಲಿ' ಎಂದು ಕುಮಾರ್ ಬಂಗಾರಪ್ಪ ತಿಳಿಸಿದರು.

ಅರ್ಥವಿಲ್ಲದೇ ಮಾತನಾಡುತ್ತಿದ್ದಾರೆ

ಅರ್ಥವಿಲ್ಲದೇ ಮಾತನಾಡುತ್ತಿದ್ದಾರೆ

'ಸೊರಬದಲ್ಲಿ ಮಧು ಬಂಗಾರಪ್ಪ ಮತ್ತು ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಅವರು ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಮಾಡಿರುವ ಭ್ರಷ್ಟಾಚಾರ ಜನರಿಗೆ ಗೊತ್ತಿದೆ. ಇನ್ನು ಬಂಗಾರಪ್ಪ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಈ ಚುನಾವಣೆಗೆ ಒಂದು ಅವಕಾಶವಾಗಿದೆ. ಜೆಡಿಎಸ್ ಪಕ್ಷದವರು ಅರ್ಥವಿಲ್ಲದೇ ಮಾತನಾಡುತ್ತಿದ್ದಾರೆ. ಕುಟುಂಬ ವಿಷಯದಲ್ಲಿ ಆಗಿರುವ ಮೋಸ, ಬಂಗಾರಪ್ಪ ಅಂತ್ಯಕ್ರಿಯೆಯಲ್ಲಿ ನಡೆದುಕೊಂಡ ರೀತಿ ಪ್ರತಿಯೊಂದನ್ನು ಜನರು ಗಮನಿಸಿದ್ದಾರೆ' ಎಂದು ಹೇಳಿದರು.

English summary
Sorab BJP MLA Kumar Bangarappa asked questions to Shivamogga Lok Sabha by election JD(S) candidate and his brother Madhu Bangarappa. By election will be held on November 3, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X