ಶಿಕಾರಿಪುರ: ಬಿವೈ ವಿಜಯೇಂದ್ರ ತಡೆದು ಬಂಜಾರ ಗ್ರಾಮದ ನಿವಾಸಿಗಳಿಂದ ಪ್ರತಿಭಟನೆ
ಮತಬೇಟೆಗಾಗಿ ಶಿಕಾರಿಪುರಕ್ಕೆ ತೆರಳಿದ್ದ ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ಭಾನುವಾರ ಬಂಜಾರ ಗ್ರಾಮದ ನಿವಾಸಿಗಳು ಬಿವೈ ವಿಜಯೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
ಪ್ರತಿಭಟನಾಕಾರರು ಗ್ರಾಮಕ್ಕೆ ಪ್ರವೇಶವನ್ನು ತಡೆದಿದ್ದರಿಂದ ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ವಾಪಾಸ್ಸಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತಾವು ಪ್ರತಿನಿಧಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ತರಲಘಟ್ಟ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಬಿ ವೈ ವಿಜಯೇಂದ್ರ ಅವರಿಗೆ ಬಂಜಾರ ಸಮುದಾಯದವರ ಪ್ರತಿಭಟನೆ ಬಿಸಿ ತಟ್ಟಿದೆ.
ಈ ಹಿಂದೆ ಬಂಜಾರ ಸಮುದಾಯದವರು ಶಿವಮೊಗ್ಗದ ಬಿ ಎಸ್ ಯಡಿಯೂರಪ್ಪ ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿ ಕಲ್ಲು ತೂರಾಟ ನಡೆಸಿದ್ದರು. ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಶಾಂತಗೊಳಿಸಬೇಕಾಯಿತು. ಇದೀಗ ಇಂದು ಮತ್ತೆ ಬಿಜೆಪಿ ಸರ್ಕಾರ ಇತ್ತೀಚೆಗೆ ತಂದಿರುವ ಒಳ ಮೀಸಲಾತಿ ನೀತಿ ವಿರೋಧಿಸಿ ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಇಂದು ತರಲಘಟ್ಟ ಗ್ರಾಮದಲ್ಲಿ ತಾಂಡಾ ಸಮುದಾಯದವರಿಂದ ವಿಜಯೇಂದ್ರ ಅವರಿಗೆ ವಿರೋಧ ವ್ಯಕ್ತವಾಗಿದೆ.
ಅಭ್ಯರ್ಥಿ ತನ್ನ ಬೆಂಬಲಿಗರೊಂದಿಗೆ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಗ್ರಾಮದ ಯುವಕರು, ಪುರುಷರು, ಮಹಿಳೆಯರು, ಯುವಕರು ವಿಜಯೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿದರು. ಯಡಿಯೂರಪ್ಪ, ಬಿಜೆಪಿ ಸರಕಾರ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು. ವಿಜಯೇಂದ್ರ ಅವರು ಬೀದಿಗಿಳಿಯುತ್ತಿದ್ದಂತೆ ಅವರು "ತಾಂಡಾ ಬಚಾವೋ, ಬಿಜೆಪಿ ಹಠಾವೋ" ಎಂದು ಘೋಷಣೆ ಕೂಗಿದರು. ಹೀಗಾಗಿ ವಿಜಯೇಂದ್ರ ಮತ್ತು ಅವರ ಅನುಯಾಯಿಗಳು ಗ್ರಾಮವನ್ನು ತೊರೆದರು.
Former CM @BSYBJP's son and BJP candidate @BYVijayendra faced backlash of Tanda (hamlet) residents at Taralaghatta village of Shikaripura taluk today. Banjara people vented their ire against BJP govt for decision on internal reservation for SCs. @XpressBengaluru pic.twitter.com/Uqg6MekEoO
— Marx Tejaswi (@_marxtejaswi) April 16, 2023












Click it and Unblock the Notifications