ಶಿಕಾರಿಪುರ ಪುರಸಭೆ ಮುಖ್ಯಾಧಿಕಾರಿ ಸೇರಿ 15 ಸಿಬ್ಬಂದಿಗೆ ಕೊರೊನಾ ಸೋಂಕು
ಶಿವಮೊಗ್ಗ, ಸೆಪ್ಟೆಂಬರ್ 8: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ 15 ಜನ ಆಡಳಿತ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಪುರಸಭೆಯ ಮೌಲಭೂತ ಸೌಕರ್ಯ ಸೇವೆಗಳನ್ನು ಹೊರತುಪಡಿಸಿ ಆಡಳಿತ ಸೇವೆಗಳನ್ನು ಸ್ಥಗಿತಗೊಳ್ಳಿಸಲಾಗಿದೆ.
Recommended Video
ವಿಶ್ವದ ಅತಿ ದೊಡ್ಡ Covid Centre ಮುಚ್ಚಲು ಅಸಲಿ ಕಾರಣವೇನು | Oneindia Kannada
ಶಿಕಾರಿಪುರ ಪುರಸಭೆ ಕಚೇರಿಯ ಬಹುತೇಕ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಸಿಬ್ಬಂದಿಗಳು ಕ್ವಾರಂಟೈನ ನಲ್ಲಿ ಇರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8, 2020 ರಿಂದ 14 ದಿನಗಳ ಕಾಲ ಯಾವುದೇ ನಾಗರಿಕ ಸೇವೆಗಳು ಲಭ್ಯವಿರುವುದಿಲ್ಲ.
ಸಾರ್ವಜನಿಕರು ಸಹಕರಿಸಲು ಮುಖ್ಯಾಧಿಕಾರಿಗಳು ಮನವಿ ಮಾಡಿದ್ದು, ಪುರಸಭೆಯ ಮುಂಭಾಗ ಸಾರ್ವಜನಿಕ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಪುರಸಭೆಯ ಸಿಬ್ಬಂದಿಗಳು ಬಿಡುವಿಲ್ಲದೇ ಸೇವೆ ನೀಡಿದ್ದು, ಇದೇ ಮೊದಲು 14 ದಿನಗಳ ಕಾಲ ಪುರಸಭೆ ಸೇವೆಯನ್ನು ನಿಲ್ಲಿಸಲಾಗಿದೆ.












Click it and Unblock the Notifications