ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆಯಲ್ಲಿ ಶಕ್ತಿ ಪ್ರದರ್ಶಿಸಲಿದ್ದಾರೆ ಬಿದರಿ!

|
Google Oneindia Kannada News

ಶಿವಮೊಗ್ಗ, ಮಾ.5 : ಕಾಂಗ್ರೆಸ್, ಸಮಾಜವಾದಿ ಪಕ್ಷ ತೊರೆದು ಸ್ವಂತ ಪಕ್ಷ ಸ್ಥಾಪಿಸಿರುವ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಮತ್ತು ಜನಶಕ್ತಿ ಪಕ್ಷದ ಸಂಸ್ಥಾಪಕ ಶಂಕರ ಬಿದರಿ ಲೋಕಸಭೆ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. 2-3 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಂಕರ ಬಿದರಿ, ಜನಶಕ್ತಿ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಮತ್ತು ಇತರ 2-3 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿ ಇಳಿಸಲಿದೆ. ಬಾಗಲಕೋಟೆಯಲ್ಲಿ ತಾವು ಸ್ಪರ್ಧಿಸುತ್ತಿದ್ದು, ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಿದರು. [ಜನಶಕ್ತಿ ಪಕ್ಷ ಸ್ಥಾಪಿಸಿದ ಬಿದರಿ]

Shankar Bidari

ತಾವು ಚುನಾವಣೆಗೆ ಸ್ಪರ್ಧಿಸಿದರೂ ಬೇರೆ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಬೇರೆ ಯವರನ್ನು ಸೋಲಿಸಲು ಅಥವಾ ಇನ್ನೊಬ್ಬರಿಗೆ ಅನುಕೂಲ ಮಾಡಿಕೊಡಲು ತಾವು ಸ್ಪರ್ಧಿಸುತ್ತಿಲ್ಲ ಎಂದು ಶಂಕರ ಬಿದರಿ ಸ್ಪಷ್ಟಪಡಿಸಿದರು. [ಇಲ್ಲಿದೆ ನೋಡಿ ಜನಶಕ್ತಿ ಪಕ್ಷದ ಭರವಸೆಗಳು]

ಜನಶಕ್ತಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದರೆ 50 ಸಾವಿರ, 1 ಲಕ್ಷ ಅಂತರದಲ್ಲಿ ಜಯಗಳಿಸಬೇಕು. ಸೋತರೂ ಅದು ಕಡಿಮೆ ಅಂತರದ್ದಾಗಿರಬೇಕು ಎಂಬುದು ನಮ್ಮ ಉದ್ದೇಶ. ಆದ್ದರಿಂದ ಸರಿಯಾದ ಅಭ್ಯರ್ಥಿಗಳನ್ನೆ ಕಣಕ್ಕಿಳಿಸಲಾಗುವುದು ಎಂದು ಶಂಕರ ಬಿದರಿ ತಿಳಿಸಿದರು. ಮೊದಲು ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುತ್ತಿದೆ. ಆದ್ದರಿಂದ ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ ಎಂದರು.

25 ಲಕ್ಷ ಸದಸ್ಯರು : ಲೋಕಸಭೆ ಚುನಾವಣೆ ಬಳಿಕ ಬರುವ ಎಲ್ಲ ಚುನಾವಣೆಗಳಲ್ಲಿ ಜನಶಕ್ತಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದ ಬಿದರಿ, ಡಿಸೆಂಬರ್ ಅಂತ್ಯದೊಳಗೆ ಪಕ್ಷಕ್ಕೆ 25 ಲಕ್ಷ ಮಂದಿಗೆ ಪ್ರಾಥಮಿಕ ಸದಸ್ಯತ್ವ ನೀಡುತ್ತಿದ್ದು, ಕಾರ್ಯಕರ್ತರಿಗೆ ಪಕ್ಷದ ಧ್ಯೇಯ ಉದ್ದೇಶ ಕುರಿತು ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಯಾವ ನಾಯಕರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನವನ್ನು ತಾವು ಮಾಡುವುದಿಲ್ಲ. ದೇಶದ ಬಗ್ಗೆ ಕಾಳಜಿ ಇರುವವರು ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಅದಕ್ಕೆ ಬದ್ಧರಾಗಿರುವವರು ಪಕ್ಷಕ್ಕೆ ಬರಬಹುದು ಎಂದು ಬಿದರಿ ಆಹ್ವಾನ ನೀಡಿದರು.

English summary
Former IGP and Janashkthi party president Shankar Bidari said, he will contest for lok sabha election 2014 form Bagalkot constituency. Shankar Bidari also said, Janashkthi party candidates will contest in 2-3 Constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X