ಬಾವಿಯಿಂದ ನೀರು ಎಳೆಯುವಾಗ ಆಯತಪ್ಪಿ ಬಿದ್ದು ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಜನವರಿ 21: ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಗುರುವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾಳೆ.

ಮನೆಯಲ್ಲಿದ್ದ ಹಸುಗಳಿಗೆ ನೀರು ಕುಡಿಸುವ ಸಲುವಾಗಿ ಮನೆಯ ಮುಂದೆ ಇದ್ದ ಬಾವಿಯಲ್ಲಿ ನೀರು ಎಳೆಯುವ ಸಂದರ್ಭದಲ್ಲಿ ಯುವತಿ ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ದಿನನಿತ್ಯದಂತೆ ಇಂದು ಸಹ ಬೆಳಿಗ್ಗೆ ಎದ್ದು ಕಾಲೇಜಿಗೆ ಹೋಗಲು ತಯಾರಿ ಆಗಿ ನಂತರ ಮನೆಯಲ್ಲಿದ್ದ ಹಸುಗಳಿಗೆ ನೀರು ಕುಡಿಸುವ ಸಲುವಾಗಿ ಬಾವಿಯಿಂದ ನೀರು ಎಳೆಯುವಾಗ ಈ ಘಟನೆ ನಡೆದಿದೆ.

Sagara: B.Sc Nursing Student Dies After Falling Into Well

ಮೇಘರಾಜ್ ರವರು ಅಂಗವಿಕಲರಾಗಿದ್ದು, ತಮ್ಮ ಗ್ರಾಮದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಎರಡು ಹೆಣ್ಣುಮಕ್ಕಳ ಇದ್ದು, ಹಿರಿಯ ಮಗಳ ವಿವಾಹವಾಗಿದೆ.

ಮೃತಪಟ್ಟ ಅಂಜಲಿಯು ಸಾಗರ ತಾಲೂಕಿನ ಉಳ್ಳೂರಿನ ಗಂಗೋತ್ರಿ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಬಿ.ಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು.

Sagara: B.Sc Nursing Student Dies After Falling Into Well

ಘಟನಾ ಸ್ಥಳಕ್ಕೆ ನಾಗರ ಗ್ರಾಮಾಂತರ ಪೊಲೀಸರು ಭೇಟಿಕೊಟ್ಟು ವಿದ್ಯಾರ್ಥಿನಿಯ ಮೃತದೇಹವನ್ನು ಸಾಗರ ಉಪ ವಿಭಾಗ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+