ಶಿವಮೊಗ್ಗ ಗಣಪತಿ ವಿಸರ್ಜನೆ ವೇಳೆ ಗಲಾಟೆ ವಿಚಾರ: 30ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದ ಪೊಲೀಸರು
ಶಿವಮೊಗ್ಗ ಸೆಪ್ಟೆಂಬರ್ 8: ಹೊಳೆಹೊನ್ನೂರು ಸಮೀಪದ ಅರಬಿಳಚಿ ಕ್ಯಾಂಪ್‌ನಲ್ಲಿ ನಡೆದಿದ್ದ ಗುಂಪುಗಳ ಮಧ್ಯೆ ಗಲಾಟೆ ವಿಚಾರವಾಗಿ ಪೊಲೀಸರು 30ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದಿದ್ದಾರೆ. ಕಳೆದ ದಿನ ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ ಗಲಾಟೆಯಿಂದಾಗಿ ಎರಡು ಪ್ರಕರಣ ದಾಖಲಾಗಿದೆ.
ಕಳೆದ ದಿನ ಹೊಳೆಹೊನ್ನೊರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಣಪತಿ ವಿಸರ್ಜನೆ ವೇಳೆ ಡೊಳ್ಳು ಭಾರಿಸುವ ವಿಚಾರಕ್ಕೆ ಮಾರಾಮಾರಿ ನಡೆದಿತ್ತು. ಮುಂಜಾಗ್ರತ ಕ್ರಮವಾಗಿ ಅರಬಿಳಚಿ ಕ್ಯಾಂಪ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸದ್ಯ ಎರಡು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಿರುವ ಪೊಲೀಸ್ ಇಲಾಖೆ, ಗಲಾಟೆ ವಿಚಾರಕ್ಕೆ ಮನೆ ಬಿಟ್ಟು ಹೋಗಿರುವ ಅನೇಕ ಜನರನ್ನ ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯ ದೃಶ್ಯ ಲಭ್ಯವಾಗಿದ್ದು, ಲಾಂಗ್ ಹಿಡಿದು ಯುವಕರ ಪುಂಡಾಟ ಮೆರೆದಿದ್ದಾನೆ. ಪರಸ್ಪರ ಕಲ್ಲು ತೂರಿಕೊಂಡು ದೊಣ್ಣೆ, ಲಾಂಗ್ ಮಚ್ಚಿ ಹಿಡಿದುಕೊಂಡು ಯುವಕರು ಹೊಡೆದಾಡಿಕೊಂಡಿದ್ದಾರೆ.

ವೀಲಿಂಗ್ ಮಾಡಿ ಫೋಸ್ ಕೊಡುತ್ತಿದ್ದವನಿಗೆ ಪಾಠ ಕಲಿಸಿದ
ವೀಲಿಂಗ್ ಮಾಡಿ ಫೋಸ್ ಕೊಡುತ್ತಿದ್ದವನಿಗೆ ಪೊಲೀಸರು ಪಾಠ ಕಲಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪಶ್ಚಿಮ ಸಂಚಾರಿ ಪೊಲೀಸರಿಂದ ಯುವಕನಿಗೆ ದಂಡ ವಿಧಿಸಲಾಗಿದೆ. ಶಿವಮೊಗ್ಗ ಟ್ರಾಫಿಕ್ ಪಿ.ಎಸ್.ಐ ತಿರುಮಲೇಶ್ ಶಿವಮೊಗ್ಗದ ಹಲವಾರು ಕಡೆಗಳಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕ ವನಯ್‌ಗೆ ದಂಡ ವಿಧಿಸಿದ್ದಾರೆ.
ಯುವಕ ವಿನಯ್ ವೀಲಿಂಗ್ ಮಾಡಿ ರೀಲ್ಸ್ ಹಾಗೂ ಫೋಟೋಗೆ ಫೋಸ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ಫೋಟೋಗಳನ್ನು ಹಂಚಿಕೊಂಡಿದ್ದನು. ಹೀಗಾಗಿ ಪಿಎಸ್.ಐ. ತಿರುಮಲೇಶ್ ಅವರು ವಿನಯನನ್ನು ಅರೆಸ್ಟ್ ಮಾಡಿ ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಶಿವಮೊಗ್ಗ ನ್ಯಾಯಾಲಯ ವೀಲಿಂಗ್ ಮಾಡುತ್ತಿದ್ದ ಯುವಕ ವಿನಯನಿಗೆ 5500 ದಂಡ ವಿಧಿಸಿ ಎಚ್ಚರಿಕೆ ನೀಡಿದೆ.

ಪಿಡಬ್ಲ್ಯೂಡಿ ಕ್ವಾಟ್ರಸ್‌ನಲ್ಲಿ ಸರಣಿ ಕಳ್ಳತನ
ಶಿವಮೊಗ್ಗದ ಬಸವನಗುಡಿಯ ಬಡಾವಣೆಯಲ್ಲಿನ ಪಿಡ್ಲ್ಯೂಡಿ ವಸತಿಗೃಹದ ಐದು ಮನೆಯಲ್ಲಿ ಸರಣಿ ಕಳ್ಳತನ ನಡೆದಿದೆ. ಡಿಸಿ ಕಚೇರಿಯ ಡಿಸಿ ಪಿಎ ದೀಪಕ್, ನ್ಯಾಯಾಧೀಶರ ಚಾಲಕ ಪ್ರಕಾಶ್, ವಾರ್ತಾ ಇಲಾಖೆಯ ಅಧಿಕಾರಿ ಭಾಗ್ಯ, ಡಿಸಿ ಕಚೇರಿಯಲ್ಲಿ ಎಸ್ ಡಿಎ ಸಂಧ್ಯಾ, ಕಮರ್ಷಿಯಲ್ ಟ್ಯಾಕ್ಸ್ ಕಚೇರಿ ಸ್ಟೆನೋ ನಂದಿನಿ ಸೇರಿದಂತೆ 5 ಮನೆಯಲ್ಲಿ ಕಳ್ಳತನ ನಡೆದಿದೆ.
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಣೇಶ ಹಬ್ಬದ ಹಿನ್ನಲೆ ಹಾಗೂ ಕೆಲಸದ ಮೇಲೆ ಮನೆಯವರು ಊರಿಗೆ ಹೋದಾಗ, ಬೆಳಗಿನ ಜಾವ ಮೂರು ಗಂಟೆಯ ವೇಳೆಗೆ ಸರಣಿ ಕಳವು ನಡೆದಿದ್ದು, ಎರಡು ಲಕ್ಷಕ್ಕೂ ಹೆಚ್ಚು ನಗದು, 300 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಹೀಗಾಗಿ ಪ್ರಿಂಗರ್ ಪ್ರಿಂಟ್ಸ್, ಶ್ವಾನದಳದಿಂದ ಪರಿಶೀಲನೆ ಮಾಡಲಾಗಿದೆ.












Click it and Unblock the Notifications