ಶಿವಮೊಗ್ಗ: ಮಾಣಿ ಅಣೆಕಟ್ಟೆಯಿಂದ 1100 ಕ್ಯೂಸೆಕ್ ನೀರು ಹೊರಕ್ಕೆ
Recommended Video

ಮಾಣಿ ಅಣೆಕಟ್ಟೆಯ ಮೂರು ಗೇಟ್ ಓಪನ್ ಆಯ್ತು ನೋಡಿ..! | Oneindia Kannada
ಶಿವಮೊಗ್ಗ, ಆಗಸ್ಟ್ 25: ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಣಿ ಗ್ರಾಮದ ಅಣೆಕಟ್ಟೆಯಿಂದ 1100 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಮಾಣಿ ಗ್ರಾಮದ ಬಳಿ ವರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಿರರುವ ಮಾಣಿ ಅಣೆಕಟ್ಟೆಯಿಂದ 1100 ಕ್ಯೂಸೆಕ್ ನೀರನ್ನು ನಿನ್ನೆ ಸಂಜೆ ಹೊರಗೆ ಬಿಡುಗಡೆ ಮಾಡಲಾಗಿದೆ.

ಡ್ಯಾಂನ ಒಟ್ಟು ಎತ್ತರ 498 ಮೀಟರ್ ಎತ್ತರವಿದ್ದು ಅಣೆಕಟ್ಟೆಯ ನೀರನ್ನು ಜಲ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ. ಇಂದು ಸಂಜೆ ಮೂರು ಗೇಟ್‌ಗಳ ಮೂಲಕ ಒಂದು ಸಾವಿರ ಕ್ಯೂಸೆಕ್ ನೀರನ್ನು ಪಿಕ್ ಅಪ್ ಡ್ಯಾಂಗೆ ಬಿಡುಗಡೆ ಮಾಡಲಾಗಿದೆ.

ಪಿಕ್ ಅಪ್ ಡ್ಯಾಂ ನೀರಿನ ಮೂಲಕ ಉಡುಪಿಯ ಹೊಸಂಗಡಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಇದು ಕರ್ನಾಟಕದ ಮೊದಲ ಭೂ ಗರ್ಭ ವಿದ್ಯುದಾಗಾರವಾಗಿದೆ. ಇಲ್ಲಿಂದ ಸುಮಾರು 230 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಘಟಕ ಸ್ಥಾಪನೆ ಉದ್ದೇಶವಿದ್ದು 115 ಮೆಗಾವ್ಯಾಟ್ ವಿದ್ಯುತ್ ಇದರಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗಲಿದೆ.












Click it and Unblock the Notifications