ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದ ಆಟೋ ಚಾಲಕರಿಗೆ ಪೊಲೀಸರಿಂದ 8 ಪ್ರಮುಖ ಸೂಚನೆಗಳು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್‌, 02; ಪೊಲೀಸ್ ಇಲಾಖೆ ವತಿಯಿಂದ ನಗರದ ಆಟೋ ಚಾಲಕರ ಸಭೆ ನಡೆಸಿ, ಅವರ ಚಾಲಕರ ಸಮಸ್ಯೆಗಳನ್ನು ಆಲಿಸಲಾಯಿತು. ಬಳಿಕ ಆಟೋ ಚಾಲಕರಿಗೆ ಎಂಟು ಸೂಚನೆಗಳನ್ನು ನೀಡಲಾಯಿತು.

ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಆಟೋ ಚಾಲಕರ ಸಭೆಯನ್ನು ನಡೆಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 8 ಸೂಚನೆಗಳನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ, ಡಿವೈಎಸ್‌ಪಿ, ಸಾರಿಗೆ ಇಲಾಖೆ ಅಧಿಕಾರಿಗಳು, ಸಂಚಾರಿ ಠಾಣೆ ಸೇರಿದಂತೆ ನಗರದ ವಿವಿಧ ಠಾಣೆಯ ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಾರುವೇಷ ಧರಿಸಿ ಆಟೋಚಾಲಕರಿಗೆ ಬಿಸಿ ಮುಟ್ಟಿಸಿದ ಧಾರವಾಡ ಪೊಲೀಸ್!ಮಾರುವೇಷ ಧರಿಸಿ ಆಟೋಚಾಲಕರಿಗೆ ಬಿಸಿ ಮುಟ್ಟಿಸಿದ ಧಾರವಾಡ ಪೊಲೀಸ್!

ಆಟೋ ಚಾಲಕರಿಗೆ 8 ಸೂಚನೆಗಳೇನು?

1. ಕನಿಷ್ಠ ದರ ನಿಗದಿಪಡಿಸಿದ ಬಳಿಕ ಎಲ್ಲಾ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಬೇಕು.

2. ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸಬೇಕು.

3. ಆಟೋ ಚಾಲನೆ ವೇಳೆ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು.

4. ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ಆಟೋಗಳಲ್ಲಿ ಚಾಲಕರ ಮಾಹಿತಿ ಮತ್ತು ಕ್ಯೂ ಆರ್ ಕೋಡ್ ಹೊಂದಿರುವ ಡಿಸ್ಪ್ಲೇ ಕಾರ್ಡ್ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಡಿಸ್ಪ್ಲೇ ಕಾರ್ಡ್ ಅನ್ನು ಎಲ್ಲಾ ಆಟೋಗಳಲ್ಲಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.

Police give 8 important instructions from to auto drivers

5. ಆಟೋ ಚಾಲಕರು ನೀಡುವ ದಾಖಲಾತಿಯನ್ನು ಪರಿಶೀಲಿಸಿ ಪ್ರತೀ ಆಟೋಗೆ ಎಸ್‌ಎಂಜಿ ನಂಬರ್‌ ನೀಡಲಾಗುವುದು. ನಂತರ ಎಸ್‌ಎಂಜಿ ನಂಬರ್ ಇರುವ ಸ್ಟಿಕ್ಕರ್‌ಗಳನ್ನು ಪ್ರತಿಯೊಬ್ಬರು ತಮ್ಮ ಆಟೋಗಳಲ್ಲಿ ಕಾಣುವ ರೀತಿಯಲ್ಲಿ ಅಂಟಿಸಿಕೊಳ್ಳಬೇಕು.

6. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕರಿಂದ ಆಟೋ ಚಾಲಕರ ಮೇಲೆ ದೂರುಗಳು ಬರುತ್ತಿವೆ. ಇದೇ ರೀತಿ ದೂರುಗಳು ಪುನರಾವರ್ತನೆ ಆದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಚ್ಚರಿಸಿದರು.

7. ಆಟೋ ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು.

8. ಆಟೋ ನಿಲ್ದಾಣ ಬಿಟ್ಟು ಬೇರೆ ಸ್ಥಳಗಳಲ್ಲಿ ಆಟೋಗಳನ್ನು ನಿಲುಗಡೆ ಮಾಡುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.

ಸಾಮಾನ್ಯವಾಗಿ ನಗರದ ಪ್ರದೇಶಗಳಲ್ಲಿ ಆಟೋ ಚಾಲಕರು ಪ್ರಯಾಣಿಕರ ಬಳಿ ದುಪ್ಪಟ್ಟು ಹಣ ಪಡೆಯುವ ಮೂಲಕ ಸುಲಿಗೆಗೆ ಇಳಿದಿರುವ ಆರೋಪಗಳು ಕೇಳಿಬರುತ್ತಲೇ ಇವೆ. ಇದೀಗ ಎಚ್ಚೆತ್ತುಕೊಂಡ ಶಿವಮೊಗ್ಗ ಪೊಲೀಸರು ನಗರದಲ್ಲಿನ ಆಟೋ ಚಾಲಕರಿಗೆ ಕಟ್ಟುನಿಟ್ಟಾಗಿ ಸೂಚನೆಗಳನ್ನು ನೀಡಿದ್ದಾರೆ.

ಕರೆದಲ್ಲಿಗೆ ಬಾರದ, ಬಂದರೂ ಹೆಚ್ಚು ವಸೂಲಿ ಮಾಡಿದ 1,116 ಆಟೋ ಚಾಲಕರ ವಿರುದ್ಧ ಕೇಸ್ಕರೆದಲ್ಲಿಗೆ ಬಾರದ, ಬಂದರೂ ಹೆಚ್ಚು ವಸೂಲಿ ಮಾಡಿದ 1,116 ಆಟೋ ಚಾಲಕರ ವಿರುದ್ಧ ಕೇಸ್

English summary
Police give 8 important instructions from to auto drivers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X