Get Updates
Get notified of breaking news, exclusive insights, and must-see stories!

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನೂತನ ಅಧ್ಯಕ್ಷರಾಗಿ ಪವಿತ್ರ ರಾಮಯ್ಯ ಅಧಿಕಾರ ಸ್ವೀಕಾರ

ಶಿವಮೊಗ್ಗ, ಸೆಪ್ಟೆಂಬರ್ 23: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ (ಕಾಡಾ) ನೂತನ ಅಧ್ಯಕ್ಷರಾಗಿ ಪವಿತ್ರ ರಾಮಯ್ಯನವರ ಅಧಿಕಾರ ಸ್ವೀಕಾರ ಸಮಾರಂಭ ಇಂದು ಶಿವಮೊಗ್ಗದಲ್ಲಿ ನಡೆಯಿತು.

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಬಿ ಪವಿತ್ರ ರಾಮಯ್ಯ ಇಂದು ಬೆಳಿಗ್ಗೆ ಮಲವಗೊಪ್ಪದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಇಂದು ಬೆಳಿಗ್ಗೆ 10.30 ಕ್ಕೆ ಅಧ್ಯಕ್ಷರ ಕೊಠಡಿಯಲ್ಲಿ ರಿಜಿಸ್ಟರ್ ಪುಸ್ತಕಕ್ಕೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದ ಪವಿತ್ರಾ ರಾಮಯ್ಯರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ರೈತರು ಮತ್ತು ರೈತ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Shivamogga: Pavitra Ramaiah Assumes Office As New President Of CADA

ಪವಿತ್ರ ರಾಮಯ್ಯನವರಿಗೆ ರೈತರೊಂದಿಗಿನ ಹಳೆಯ ನಂಟು ಇದ್ದು, ಕಾಡಾದಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಾರಣವಾಗಿದೆ. ರೈತ ಸಂಘದ ಮುಖಂಡ ಎಚ್.ಆರ್ ಬಸವರಾಜಪ್ಪ ಹಸಿರು ಶಾಲು ಹೊದಿಸಿ ಪವಿತ್ರ ರಾಮಯ್ಯನವರಿಗೆ ಗೌರವ ಸೂಚಿಸಿ ಶುಭಕೋರಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ. ಮೇಘರಾಜ್, ರೈತ ಮೋರ್ಚಾದ ಮುಖಂಡ ದತ್ತಾತ್ರಿ, ಬಳ್ಳಕೆರೆ ಸಂತೋಷ್, ಮಾಜಿ ಕಾಡ ಅಧ್ಯಕ್ಷ ಗಿರೀಶ್ ಮೊದಲಾದವರು ಪವಿತ್ರ ರಾಮಯ್ಯರವರಿಗೆ ಹೂಗುಚ್ಚ ನೀಡಿ ಶುಭಕೋರಿದರು.

Shivamogga: Pavitra Ramaiah Assumes Office As New President Of CADA

ಅಧಿಕಾರ ಸ್ವೀಕರಿಸಿ ಮಾತನಾಡಿದ ಪವಿತ್ರ ರಾಮಯ್ಯ, ಕಳೆದ 30 ವರ್ಷದಿಂದ ರೈತ ಸಂಘಟನೆಯಲ್ಲಿದ್ದೇನೆ, ಹೋರಾಟದ ಪರಿಣಾಮ ಇಂದು ಅಧ್ಯಕ್ಷಳಾಗಿದ್ದೇನೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+